ಬೆಂಗಳೂರು : ದುಬಾರಿ ಮೌಲ್ಯದ ಮದ್ಯ ಸೇವನೆಗೆ ಸಿಲಿಕಾನ್ ಸಿಟಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂತೋಷ್ @ ಎಮ್ಮೆ ಬಂಧಿತ ಮನೆಗಳ್ಳ. ಈತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 100ಕ್ಕೂ ಅಧಿಕ ಮನೆಗಳ್ಳತನ ಮಾಡಿರುವ ಪ್ರಕರಣ ದಾಖಲಾಗಿದೆ. ಗೇಟ್‌ಗೆ ಬೀಗ ಹಾಕಿರುವ ಮನೆಗಳೇ ಈತನ ಟಾರ್ಗೆಟ್ ಆಗಿದ್ದು, ಅಂತಹ ಮನೆಗಳಿಗೆ ಕನ್ನ ಹಾಕಲು ಮನೆಯ ಹಿಂಬದಿ ಬಾಗಿಲು ಮುರಿದು ಒಳ ಪ್ರವೇಶಿಸುತ್ತಿದ್ದ. ಇನ್ನು, ಬಾಗಿಲು ಮುರಿಯೋದಕ್ಕಾಗಿಯೇ ಕಬ್ಬಿಣದ ರಾಡ್ ಕೂಡ ಮಾಡಿಸಿದ್ದ.
ಈ ಸುದ್ದಿಯನ್ನೂ ಓದಿ: 51 ವರ್ಷದ ಪತ್ನಿಯನ್ನು ಕರೆಂಟ್ ಶಾಕ್ ಕೊಟ್ಟು ಕೊಂದ 28 ವರ್ಷದ ಪತಿ
ಮನೆಯಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನ ಮಾಡಿ ತಮಿಳುನಾಡು ಕಡೆ ಚಿನ್ನ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಈ ಖದೀಮ ದುಬಾರಿ ಮೌಲ್ಯದ ಕಾರು ಸಹ ಇಟ್ಟುಕೊಂಡಿದ್ದ.
ಕಳ್ಳತನ ಮಾಡುವ ಮುನ್ನ ಇಡೀ ದಿನ ಕಾರಿನಲ್ಲೇ ಸುತ್ತಾಡಿಕೊಂಡು ಇರುತ್ತಿದ್ದ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಈತನ ವಿರುದ್ಧ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.