ETV Bharat / state

ಐಫೋನ್​​​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ: ಸೆಕ್ಯೂರಿಟಿ ಗಾರ್ಡ್​ ಬಂಧನ - bangalore crime

ಉತ್ತರ ಭಾರತ ಮೂಲದ ಜಗದೀಶ್ ಪಾಲೈ ಎಂಬ ವ್ಯಕ್ತಿ ಯುಬಿ ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆತ ಕಂಪನಿಯ ಉದ್ಯೋಗಿಗಳು ಬಳಸುತ್ತಿದ್ದ ಐ ಫೋನ್​ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ.

ಸೆಕ್ಯೂರಿಟಿ ಗಾರ್ಡ್​ ಬಂಧನ
author img

By

Published : Sep 9, 2019, 10:18 PM IST

ಬೆಂಗಳೂರು: ಯುಬಿ ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅದೇ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಐಫೋನ್‌ ಕಳ್ಳತನ ಮಾಡಿ ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದಾನೆ.

ಉತ್ತರ ಭಾರತ ಮೂಲದ ಜಗದೀಶ್ ಪಾಲೈ ಬಂಧಿತ ಆರೋಪಿ. ಯು.ಬಿ.ಸಿಟಿಯಲ್ಲಿರುವ ಕಂಪನಿಯೊಂದರಲ್ಲಿ ಕಳೆದ ಐದು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ. ಕಂಪನಿಯ ಉದ್ಯೋಗಿಗಳು ಬಳಸುತ್ತಿದ್ದ ಐ ಫೋನ್​​ಗಳನ್ನು ಗುರಿಯಾಗಿಸಿಕೊಂಡು ಏಳು ಐಫೋನ್ ಎಗರಿಸಿದ್ದಾನೆ.

ಕದ್ದ ಮೊಬೈಲ್​ಗಳನ್ನು ಎಸ್.ಜೆ.ಪಿ‌. ಕ್ಯಾಂಪಸ್ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜು ಬಳಿ ಮೊಬೈಲ್​​​ಗಳನ್ನು ಮಾರಾಟ ಮಾಡಲು ಮುಂದಾಗಿದ್ದ.‌ ಈ ವೇಳೆ ಅನುಮಾನಗೊಂಡು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ‌ ನಡೆಸಿದಾಗ ಕಳ್ಳತನ‌ ಕೃತ್ಯ ಬಹಿರಂಗಪಡಿಸಿದ್ದಾನೆ. ಸದ್ಯ ಆತನಿಂದ 4.5 ಲಕ್ಷ ರೂ. ಮೌಲ್ಯದ ಏಳು ಐಪೋನ್​​​, ಒಂದು ಟ್ಯಾಬ್ ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Intro:Body:ಐಪೋನ್‌ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ನ ಬಂಧನ

ಬೆಂಗಳೂರು: ಯುಬಿ ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಭೂಪನೊಬ್ಬ ಅದೇ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಐಪೋನ್‌ ಕಳ್ಳತನ ಮಾಡಿ ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದಾನೆ.
ಉತ್ತರ ಭಾರತ ಮೂಲದ ಜಗದೀಶ್ ಪಾಲೈ ಬಂಧಿತ ಆರೋಪಿ.
ಯು.ಬಿ.ಸಿಟಿಯಲ್ಲಿರುವ ಕಂಪೆನಿಯೊಂದರಲ್ಲಿ ಕಳೆದ ಐದು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಂಪೆನಿಯ ಉದ್ಯೋಗಿಗಳು ಬಳಸುತ್ತಿದ್ದ ಐ ಪೋನ್ ಗಳನ್ನು ಗುರಿಯಾಗಿಸಿಕೊಂಡು ಏಳು ಐಪೋನ್ ಎಗರಿಸಿದ್ದಾನೆ. ಕದ್ದ‌ ಮೊಬೈಲ್ ಗಳನ್ನು ಎಸ್.ಜೆ.ಪಿ‌.ಕ್ಯಾಂಪಸ್ ಹೊಟೇಲ್ ಮ್ಯಾನೇಜ್ ಮೆಂಟ್ ಕಾಲೇಜು ಬಳಿ ಮೊಬೈಲ್ ಗಳನ್ನು ಮಾರಾಟ ಮಾಡಲು ಮುಂದಾಗಿದ್ದ.‌ ಈ ವೇಳೆ ಅನುಮಾನಗೊಂಡು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ‌ ನಡೆಸಿದಾಗ ಕಳ್ಳತನ‌ ಕೃತ್ಯ ಬಹಿರಂಗಪಡಿಸಿದ್ದಾನೆ. ಸದ್ಯ ಆತನಿಂದ 4.5 ಲಕ್ಷ ರೂ.ಮೌಲ್ಯದ ಏಳು ಐಪೋನ್ ಗಳು, ಒಂದು ಟ್ಯಾಬ್ ಜಪ್ತಿ ಮಾಡಿಕೊಂಡಿರುವುದಾಗಿ ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.