ETV Bharat / state

ನಗರದಲ್ಲಿ ಒಂಟಿ ಮನೆಗಳಿಗೆ ಕನ್ನ; ಕಳ್ಳನ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ!

author img

By

Published : Jan 11, 2021, 9:07 PM IST

ಆರೋಪಿಯ ಹೆಂಡತಿ, ಮಕ್ಕಳು ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾರೆ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದ. ಈತನ ಕಳ್ಳತನ ಕೃತ್ಯ ಹೆಂಡತಿ‌ ಮಕ್ಕಳಿಗೂ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಡವರ ಮನೆಗೆ ಕನ್ನ ಹಾಕುತ್ತಿದ್ದ ಕಳ್ಳ
ಕಂಡವರ ಮನೆಗೆ ಕನ್ನ ಹಾಕುತ್ತಿದ್ದ ಕಳ್ಳ

ಬೆಂಗಳೂರು: ಮನೆಗಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಅಂತಾರಾಜ್ಯ ಕಳ್ಳನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ವಿಚಾರಣೆ ವೇಳೆ ಕೆಲವು ಕುತೂಹಕಾರಿ ವಿಚಾರಗಳು ಬಯಲಾಗಿವೆ.

ಕೆ.ಜಿ.ಹಳ್ಳಿ ನಿವಾಸಿ ಸಮೀರ್ ಖಾನ್ ಅಲಿಯಾಸ್ ಶೋಹೇಬ್ (31) ಬಂಧಿತ ಆರೋಪಿ.

ಕಂಡವರ ಮನೆಗೆ ಕನ್ನ ಹಾಕುತ್ತಿದ್ದ ಕಳ್ಳ

ಯಲಹಂಕ ಉಪನಗರ ಠಾಣಾ ವ್ಯಾಪ್ತಿಯ ಶಾರದಾ ನಗರದ ಮನೆಯೊಂದರಲ್ಲಿ ಕಳೆದ ತಿಂಗಳು 3ರಂದು ಹಾಡಹಾಗಲೇ ಬೀಗ ಹಾಕಿದ್ದ ಮನೆ ಗುರುತಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಇನ್​​ಸ್ಪೆಕ್ಟರ್ ಅನಿಲ್‌ ಕುಮಾರ್ ನೇತೃತ್ವದ ತಂಡ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ಬಂಧನದಿಂದ ಈಶಾನ್ಯ ವಿಭಾಗದಲ್ಲಿ ದಾಖಲಾಗಿದ್ದ ಯಲಹಂಕ, ಕೊಡಿಗೆಹಳ್ಳಿ, ಯಲಹಂಕ ಉಪನಗರ, ವಿದ್ಯಾರಣ್ಯಪುರ, ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ, 10 ಕಳವು ಪ್ರಕರಣಗಳನ್ನು ಬೇಧಿಸಲಾಗಿದೆ‌.

ಹೋದ ಕಡೆಯೆಲ್ಲ ಬಾಡಿಗೆ ಮನೆ ಪಡೆದು ಕಳ್ಳತನ:

ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಒಂಟಿಯಾಗಿರುವ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಹಗಲಲ್ಲಿ ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್ ಆಗಿರುತ್ತಿತ್ತು..‌ ಒಂದು ವೇಳೆ ಮನೆಯವರು ಯಾರಾದರು ಬಾಗಿಲು ತೆರೆದರೆ ಕೊರಿಯರ್ ಬಂದಿದೆ ಎಂದು ಹೇಳಿ ಯಾಮಾರಿಸುತ್ತಿದ್ದನಂತೆ. ಇಲ್ಲದೇ ಇದ್ದರೆ ಕಳ್ಳತನ ಮಾಡಿ ಪಲ್ಸರ್ ಬೈಕ್​ನಲ್ಲಿ ಎಸ್ಕೇಪ್ ಆಗುತ್ತಿದ್ದ.

ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಆರೋಪಿ ಬೈಕ್ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದ. ಬೆಂಗಳೂರು, ಬೀದರ್ ಹಾಗೂ ತೆಲಂಗಾಣ ರಾಜ್ಯದಲ್ಲಿ ಇದೇ ರೀತಿಯ ತಂತ್ರ ಬಳಸಿ ಕೈಚಳಕ ತೋರಿಸುತ್ತಿದ್ದ. ಕಳ್ಳತನ ಮಾಡುವ ಏರಿಯಾಗಳಲ್ಲಿ ಬಾಡಿಗೆ ಮನೆ ಪಡೆದು ಯಾವ ಮನೆಗಳನ್ನು ಕಳ್ಳತನಕ್ಕೆ ಬಳಸಿಕೊಳ್ಳಬೇಕು ಎಂದು ಗುರುತಿಸಿಕೊಳ್ಳುತ್ತಿದ್ದ ಎಂದು ಡಿಸಿಪಿ ತಿಳಿಸಿದರು.

ಆಂಧ್ರಪ್ರದೇಶದಲ್ಲಿರುವ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಆರೋಪಿ, ಕಂಡವರ ಮನೆಗೆ ಕನ್ನ ಹಾಕಿ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದನಂತೆ. ಈತನ ಕಳ್ಳತನ ಕೃತ್ಯ ಹೆಂಡತಿ‌ ಮಕ್ಕಳಿಗೂ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈತನಿಂದ 45 ಲಕ್ಷ ರೂಪಾಯಿ ಮೌಲ್ಯದ 900 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ‌‌ ಒಪ್ಪಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಿ.ಕೆ. ಬಾಬಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.