ETV Bharat / state

ಬಿಬಿಎಂಪಿ ಕೌನ್ಸಿಲ್​​​ ಸಭೆಯಲ್ಲಿ ಪ್ರತಿಧ್ವನಿಸಿದ ಟಿಡಿಆರ್​​​​ ಹಗರಣ - undefined

ಬಿಬಿಎಂಪಿ ಸದಸ್ಯರು ಆಸ್ತಿ ವಿವರನ್ನು ಯಾರಿಗೆ ಸಲ್ಲಿಸಬೇಕು ಎಂಬ ಬಗ್ಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿದ್ದು, ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಟಿಡಿಆರ್​ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹ
author img

By

Published : Jul 21, 2019, 3:43 AM IST

ಬೆಂಗಳೂರು: ಬಿಬಿಎಂಪಿ ಸದಸ್ಯರು ಆಸ್ತಿ ವಿವರನ್ನು ಯಾರಿಗೆ ಸಲ್ಲಿಸಬೇಕು ಎಂಬ ಬಗ್ಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿದ್ದು, ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಹೆಚ್.ಎಂ.ವೆಂಕಟೇಶ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಅನ್ವಯ ಸರ್ಕಾರಿ ಸೇವೆ ಸಲ್ಲಿಸುವವರು ಪ್ರತಿ ವರ್ಷ ಜೂನ್ ತಿಂಗಳ ಒಳಗೆ ತಮ್ಮ ಆಸ್ತಿ ವಿವರವನ್ನು ಸಲ್ಲಿಕೆ ಮಾಡಬೇಕು. ಒಂದೊಮ್ಮೆ ಮಾಡದೆ ಇದ್ದಲ್ಲಿ ಲೋಕಾಯುಕ್ತ ಸಂಸ್ಥೆ ಅಂತಹ ಸದಸ್ಯರಿಗೆ ನೋಟಿಸ್ ನೀಡಿ, 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಬಹುದು. ವರದಿ ನೀಡದೆ ಇರುವ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳವುದಕ್ಕೂ ಅವಕಾಶವಿದೆ. ಇಲ್ಲಿಯವರೆಗೆ ಎಲ್ಲಾ ಪಾಲಿಕೆ ಸದಸ್ಯರು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ, ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ ಎಂದು ವಿವರಿಸಿದರು.

TDR
ಟಿಡಿಆರ್​ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹ

ಇನ್ನು ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರ್ಯಾಯವಾಗಿ ಬಿಬಿಎಂಪಿ ನೀಡಿರುವ ‘ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್) ಹಗರಣದ ಕುರಿತ ತನಿಖೆಗೆ ಮೇಯರ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಟಿಡಿಆರ್ ಹಗರಣದ ಬಗ್ಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರಸ್ತಾಪಿಸಿ, ‘ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಟಿಡಿಆರ್​​ಅನ್ನು ಎಷ್ಟು ರಸ್ತೆಗಳಿಗೆ ನೀಡಲಾಗಿದೆ, ಆ ಸ್ವತ್ತುಗಳು ಪಾಲಿಕೆಯ ಅಧೀನದಲ್ಲೇ ಇದೆಯಾ? ಪಾಲಿಕೆಯ ಯಾವ ಅಧಿಕಾರಿಗಾದರೂ ಇದರ ಬಗ್ಗೆ ಉತ್ತರ ನೀಡುವ ಧೈರ್ಯವಿದೆಯಾ? ಎಂದು ಸವಾಲು ಎಸೆದರು. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಬಿಜೆಪಿಯ ಉಮೇಶ್ ಶೆಟ್ಟಿ ಹಾಗೂ ಗುಣಶೇಖರ್ ಅವರು ಧ್ವನಿಗೂಡಿಸಿ ಟಿಡಿಆರ್ ಹಗರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ರಸ್ತೆ ಅಗಲೀಕರಣಕ್ಕಾಗಿ 2005ರಲ್ಲಿ ಟಿಡಿಆರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ 2220 ಆಸ್ತಿಗಳಿಂದ 22,845 ಲಕ್ಷ ಚದರ ಮೀಟರ್​​ನಷ್ಟು ಜಾಗಕ್ಕೆ ಟಿಡಿಆರ್ ನೀಡಲಾಗಿದೆ. ನಿಯಮಾನುಸಾರ ಶೇ. 5ರಷ್ಟು ಕಳೆದರೂ ಸುಮಾರು 15 ಲಕ್ಷ ಚದರ ಮೀಟರ್ ಆಸ್ತಿಯನ್ನು ಬಿಬಿಎಂಪಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿರಬೇಕಾಗುತ್ತದೆ. ಇದರಲ್ಲಿ ಎಷ್ಟು ಆಸ್ತಿ ಪಾಲಿಕೆ ವಶದಲ್ಲಿದೆ? 2005ರಿಂದ ಇಲ್ಲಿಯವರೆಗೆ 22,845 ಲಕ್ಷ ಚದರ ಮೀಟರ್ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗ ಬಳಕೆ ಮಾಡಿಕೊಂಡು ಎಷ್ಟು ಕಿ.ಮೀ. ರಸ್ತೆ ಅಗಲೀಕರಣ ಮಾಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

Intro:ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪ್ರತಿಧ್ವನಿಸಿದ ಟಿಡಿಆರ್ ಹಗರಣ
ಬೆಂಗಳೂರು: ಬಿಬಿಎಂಪಿ ಸದಸ್ಯರು ಆಸ್ತಿ ವಿವರನ್ನು ಯಾರಿಗೆ ಸಲ್ಲಿಸ ಬೇಕು ಎಂಬ ಬಗ್ಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿದ್ದು, ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ , ಎಚ್.ಎಂ. ವೆಂಕಟೇಶ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಅನ್ವಯ ಸರ್ಕಾರಿ ಸೇವೆ ಸಲ್ಲಿಸುವವರು ಪ್ರತಿ ವರ್ಷ ಜೂನ್ ತಿಂಗಳ ಒಳಗೆ ತಮ್ಮ ಆಸ್ತಿ ವಿವರವನ್ನು ಸಲ್ಲಿಕೆ ಮಾಡಬೇಕು. ಮಾಡದೆ ಇದ್ದಲ್ಲಿ, ಲೋಕಾಯುಕ್ತ ಸಂಸ್ಥೆ ಅಂತಹ ಸದಸ್ಯರಿಗೆ ನೋಟಿಸ್ ನೀಡಿ, 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಬಹುದು. ವರದಿ ನೀಡದೆ ಇರುವ ಸದಸ್ಯರ ಮೇಲೆ ಕ್ರಮತೆಗೆದುಕೊಳ್ಳವುದಕ್ಕೂ ಅವಕಾಶವಿದೆ. ಇಲ್ಲಿಯವರೆಗೆ ಎಲ್ಲ ಪಾಲಿಕೆ ಸದಸ್ಯರು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ, ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ’ ಎಂದು ವಿವರಿಸಿದರು.
ಇನ್ನು ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಸ್ವಾಾಧೀನಪಡಿಸಿಕೊಂಡ ಜಾಗಕ್ಕೆ ಪರ್ಯಾಯವಾಗಿ ಬಿಬಿಎಂಪಿ ನೀಡಿರುವ ‘ಅಭಿವೃದ್ದಿ ಹಕ್ಕು ವರ್ಗಾವಣೆ’ (ಟಿಡಿಆರ್) ಹಗರಣದ ಕುರಿತ ತನಿಖೆಗೆ ಮೇಯರ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.
ಟಿಡಿಆರ್ ಹಗರಣದ ಬಗ್ಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರಸ್ತಾಾಪಿಸಿದರು. ‘ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಟಿಡಿಆರ್ ಅನ್ನು ಎಷ್ಟು ರಸ್ತೆಗಳಿಗೆ ನೀಡಲಾಗಿದೆ, ಆ ಸ್ವತ್ತುಗಳು ಪಾಲಿಕೆಯ ಅಧೀನದಲ್ಲೇ ಇದೆಯಾ, ಪಾಲಿಕೆಯ ಯಾವ ಅಧಿಕಾರಿಗಾದರೂ ಇದರ ಬಗ್ಗೆ ಉತ್ತರ ನೀಡುವ ಧೈರ್ಯವಿದೆಯಾ’ ಎಂದು ಸವಾಲು ಎಸೆದರು.
ಇದಕ್ಕೆ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಬಿಜೆಪಿಯ ಉಮೇಶ್ ಶೆಟ್ಟಿ ಹಾಗೂ ಗುಣಶೇಖರ್ ಅವರು ಧ್ವನಿಗೂಡಿಸಿದರು. ಟಿಡಿಆರ್ ಹಗರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ರಸ್ತೆ ಅಗಲೀಕರಣಕ್ಕಾಗಿ 2005ರಲ್ಲಿ ಟಿಡಿಆರ್ ವ್ಯವಸ್ಥೆೆಯನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ 2220 ಆಸ್ತಿಗಳಿಂದ 22,845 ಲಕ್ಷ ಚದರ ಮೀಟರ್ ನಷ್ಟು ಜಾಗಕ್ಕೆ ಟಿಡಿಆರ್ ನೀಡಲಾಗಿದೆ. ನಿಯಮಾನುಸಾರ ಶೇ. 5ರಷ್ಟು ಕಳೆದರೂ ಸುಮಾರು 15 ಲಕ್ಷ ಚದರ ಮೀಟರ್ ಆಸ್ತಿಯನ್ನು ಬಿಬಿಎಂಪಿ ತನ್ನ ಸ್ವಾಾಧೀನಕ್ಕೆ ತೆಗೆದು ಕೊಂಡಿರಬೇಕಾಗುತ್ತದೆ. ಇದರಲ್ಲಿ ಎಷ್ಟು ಆಸ್ತಿ ಪಾಲಿಕೆ ವಶದಲ್ಲಿದೆ. 2005ರಿಂದ ಇಲ್ಲಿಯವರೆಗೆ 22,845 ಲಕ್ಷ ಚದರ ಮೀಟರ್ ಆಸ್ತಿಯನ್ನು ಸ್ವಾಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗ ಬಳಕೆ ಮಾಡಿಕೊಂಡು ಎಷ್ಟು ಕಿ.ಮೀ. ರಸ್ತೆ ಅಗಲೀಕರಣ ಮಾಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಪದ್ಮನಾಭ ರೆಡ್ಡಿ ಒತ್ತಾಾಯಿಸಿದರು.

ಸೌಮ್ಯಶ್ರೀ
Kn_Bng_05_bbmp_council_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.