ETV Bharat / state

ಜೂನ್ ಅಂತ್ಯಕ್ಕೆ ರಾಜ್ಯದ ಜಿಎಸ್​ಟಿ ಪರಿಹಾರ ನೀಡಿಕೆ ಅಂತ್ಯ : ಆರ್ಥಿಕ ಸ್ಥಿತಿ ಬಿಗಡಾಯಿಸುವ ಆತಂಕ - ಕರ್ನಾಟಕದ ಜಿಎಸ್​ಟಿ ಪರಿಹಾರ ಮೊತ್ತ ಈ ತಿಂಗಳಿಗೆ ಅಂತ್ಯ

ಜಿಎಸ್​ಟಿ ಪರಿಹಾರ ಮೊತ್ತ ಈ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ಸದ್ಯ ರಾಜ್ಯಕ್ಕೆ ಕೇಂದ್ರ ಸರ್ಕಾರ ಪಾವತಿಸಿದ ಜಿಎಸ್​ಟಿ ಪರಿಹಾರ ಮೊತ್ತ ಮತ್ತು ಬಾಕಿ ಉಳಿದಿರುವ ಪರಿಹಾರ ಮೊತ್ತದ ವಿವರ ಇಲ್ಲಿದೆ..

ಜಿಎಸ್​ಟಿ
author img

By

Published : Jun 17, 2022, 8:05 PM IST

ಬೆಂಗಳೂರು : ಜಿಎಸ್​ಟಿ ಜಾರಿಯಾದ ಬಳಿಕ ರಾಜ್ಯಗಳು ಅನುಭವಿಸುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಐದು ವರ್ಷಗಳಿಂದ ಜಿಎಸ್​ಟಿ ಪರಿಹಾರವನ್ನು ಕೊಡುತ್ತಾ ಬರುತ್ತಿದೆ. ಅದರಂತೆ ನಮ್ಮ ರಾಜ್ಯಕ್ಕೆ ನೀಡಿದ ಜಿಎಸ್​ಟಿ ಪರಿಹಾರ ಇದೇ ತಿಂಗಳಿಗೆ ಮುಕ್ತಾಯವಾಗಲಿದೆ. ಹೀಗಾಗಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹಾಳಾಗುವ ಸಾಧ್ಯತೆ ಇದೆ.

ಕರ್ನಾಟಕದ ಜಿಎಸ್​ಟಿ ಪರಿಹಾರ ಮೊತ್ತ ಈ ತಿಂಗಳಿಗೆ ಅಂತ್ಯವಾಗಲಿದೆ. ಇದು ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿದೆ. ಅದಕ್ಕಾಗಿನೇ ಮುಂದಿನ ಮೂರು ವರ್ಷಗಳಿಗೆ ಜಿಎಸ್​ಟಿ ಪರಿಹಾರ ಮೊತ್ತ ನೀಡುವುದನ್ನು ಮುಂದುವರಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತಿದೆ.

ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶುಕ್ರವಾರ ದಿಲ್ಲಿಯಲ್ಲಿ‌ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲೂ ಸಿಎಂ ಜಿಎಸ್​ಟಿ ಪರಿಹಾರ ನೀಡುವುದನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಸದ್ಯ ಜಿಎಸ್​ಟಿ ಪರಿಹಾರ ಪಾವತಿ, ಬಾಕಿ ಎಷ್ಟು?: ಜಿಎಸ್ಟಿ ಆದಾಯ ಕೊರತೆಯನ್ನು ನೀಗಿಸಿಕೊಳ್ಳಲು ಮುಕ್ತ ಮಾರುಕಟ್ಟೆಯಲ್ಲಿ ಸಾಲದ ಮೂಲಕ ಹಣ ಸಂಗ್ರಹಿಸುವ ಆಯ್ಕೆಯನ್ನು ರಾಜ್ಯ ಆಯ್ದುಕೊಂಡಿದೆ. ಕಳೆದ ಎರಡು ವರ್ಷದಿಂದ ಕರ್ನಾಟಕ ಜಿಎಸ್​ಟಿ ಪರಿಹಾರವಾಗಿ ಸಾಲ ಪಡೆಯುವ ವಿಶೇಷ ಅವಕಾಶವನ್ನು ಬಳಸಿಕೊಂಡಿದೆ. ವಾಣಿಜ್ಯ ಇಲಾಖೆ ಆಯುಕ್ತೆ ಶಿಖಾ ನೀಡಿದ ಮಾಹಿತಿಯಂತೆ 2020-21ರಲ್ಲಿ ಜಿಎಸ್​ಟಿ ಪರಿಹಾರ ಹಣ ಮತ್ತು ಸಾಲದ ರೂಪದಲ್ಲಿ ಒಟ್ಟು 26,000 ಕೋಟಿ ರೂ. ಪಡೆದಿದೆ.

ಇನ್ನೂ 4,000 ಕೋಟಿ ರೂ. ಬಾಕಿ ಉಳಿದುಕೊಂಡಿತ್ತು. ಇತ್ತ 2021-22ರಲ್ಲಿ ಜಿಎಸ್ಟಿ ಪರಿಹಾರ ಹಾಗೂ ಸಾಲದ ರೂಪದಲ್ಲಿ 18,000 ಕೋಟಿ ರೂ‌. ಸ್ವೀಕರಿಸಲಾಗಿತ್ತು. ಆ ಪೈಕಿ ಇನ್ನೂ 7,000 ಕೋಟಿ ರೂ. ಪಾವತಿಯಾಗದೇ ಬಾಕಿ ಉಳಿದುಕೊಂಡಿತ್ತು. ಒಟ್ಟು 11,000 ಕೋಟಿ ರೂ. ಜಿಎಸ್ಟಿ ನಷ್ಟ ಪರಿಹಾರ ಹಾಗೂ ವಿಶೇಷ ಸಾಲದ ರೂಪದ ಹಣ ಬಾಕಿ ಉಳಿದುಕೊಂಡಿತ್ತು.

ಇದನ್ನೂ ಓದಿ: ಶಾಲಾ ಕಟ್ಟಡ ದುರಸ್ಥಿಗೆ ಒತ್ತಾಯ: ತುಮಕೂರಿನಲ್ಲಿ ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ

ಇದೇ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ 8,633 ಕೋಟಿ ರೂ. ಜಿಎಸ್ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಆ ಮೂಲಕ ಮೇ ಅಂತ್ಯದವರೆಗೆ ಬಾಕಿ ಇದ್ದ ಎಲ್ಲಾ ಜಿಎಸ್ಟಿ ಪರಿಹಾರ ಮೊತ್ತವನ್ನು ಪಾವತಿ ಮಾಡಲಾಗಿದೆ. ಸದ್ಯ ಜೂನ್ ತಿಂಗಳ ಬಾಪ್ತು ಸುಮಾರು 6,000 ಕೋಟಿ ರೂ.‌ ಜಿಎಸ್ಟಿ ಪರಿಹಾರ ಬಾಕಿ ಉಳಿದುಕೊಂಡಿದೆ ಎಂದು ವಾಣಿಜ್ಯ ಇಲಾಖೆ ಆಯುಕ್ತೆ ಶಿಖಾ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.