ETV Bharat / state

ಬಿಎಂಟಿಸಿ ಸೇರಿದ 100 ಟಾಟಾ ಎಲೆಕ್ಟ್ರಿಕ್‌ ಬಸ್: ವಿಶೇಷತೆಗಳೇನು? - ಬಿಎಂಟಿಸಿ ತೆಕ್ಕೆ ಸೇರಿದ 100 ಇವಿ ಬಸ್

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ಬಿಎಂಟಿಸಿ ವಿದ್ಯುತ್‌​ ಚಾಲಿತ ಬಸ್​ಗಳ ಮೊರೆ ಹೋಗಿದೆ.

EV Busses
ಬಿಎಂಟಿಸಿ ತೆಕ್ಕೆ ಸೇರಿದ 100 ಇವಿ ಬಸ್
author img

By ETV Bharat Karnataka Team

Published : Dec 26, 2023, 6:27 PM IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಇಂದು 100 ಹವಾನಿಯಂತ್ರಣರಹಿತ ವಿದ್ಯುತ್ ಚಾಲಿತ ಬಸ್​ಗಳು ಸೇರ್ಪಡೆಯಾಗಿವೆ. ಕೇಂದ್ರ ಸರ್ಕಾರದ 'ಫೇಮ್ ಇಂಡಿಯಾ' ಯೋಜನೆಯಡಿ ಟಾಟಾ ಸಹಭಾಗಿತ್ವದಲ್ಲಿ ಜಿಸಿಸಿ ಮಾದರಿಯಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಯಂತೆ 921 ಬಸ್​ಗಳಲ್ಲಿ ಮೊದಲ ಕಂತಾಗಿ 100 ಇವಿ ನಾನ್ ಎಸಿ ಬಸ್​ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಸಾರ್ವಜನಿಕ ಸಾರಿಗೆ ಸೇವೆಗಳನ್ನು ಉತ್ತೇಜಿಸುವ ಸಲುವಾಗಿ ಮತ್ತು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನಗಳಿಂದಾಗುತ್ತಿರುವ ಮಾಲಿನ್ಯ ತಡೆಯಲು ಬಿಎಂಟಿಸಿ ಹಲವಾರು ಕ್ರಮಗಳನ್ನು ಕೈಕೊಳ್ಳುತ್ತಿದೆ. ಇದರಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಪರಿಚಯವೂ ಒಂದು. ಸಂಸ್ಥೆಯ ವಾಹನಬಲಕ್ಕೆ ಮೂರು ವರ್ಷಗಳಿಂದ ಸತತವಾಗಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸುತ್ತಿದೆ.

CM Siddaramaiah inaugurated EV Busses
ಇವಿ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಪ್ರಸಕ್ತ ವರ್ಷದಲ್ಲಿ, ಟಾಟಾ ಮೋಟಾರ್ಸ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್‌ ಲಿಮಿಟೆಡ್​ನ 921 ಹವಾನಿಯಂತ್ರಣರಹಿತ ಎಲೆಕ್ಟ್ರಿಕ್‌ ಬಸ್‌ಗಳು ಸಂಸ್ಥೆಯ ವಾಹನಬಲಕ್ಕೆ ಸೇರ್ಪಡೆಯಾಗಲಿವೆ. ಇದೀಗ ಮೊದಲ ಹಂತವಾಗಿ 100 ಹವಾನಿಯಂತ್ರಣರಹಿತ ಎಲೆಕ್ಟ್ರಿಕ್‌ ಬಸ್‌ಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ.

ಇವಿ ಬಸ್‌ ವಿಶೇಷತೆಗಳು:

  • ಶೂನ್ಯ ವಾಯುಮಾಲಿನ್ಯ ಮತ್ತು ಪರಿಸರಸ್ನೇಹಿ
  • 12 ಮೀಟರ್‌ ಉದ್ದ, 400 ಮಿ.ಮೀ ನೆಲದಿಂದ ಎತ್ತರ
  • ಹವಾನಿಯಂತ್ರಣರಹಿತ ಎಲೆಕ್ಟ್ರಿಕ್‌ ಬಸ್
  • 35 ಆಸನಗಳ ಸಾಮರ್ಥ್ಯ
  • ಬಸ್‌ನ ಒಳಭಾಗದಲ್ಲಿ 3, ಹಿಂಬದಿಯಲ್ಲಿ 1 ಕ್ಯಾಮರಾ ಅಳವಡಿಕೆ
  • 298 kwh ಬ್ಯಾಟರಿ ಸಾಮರ್ಥ್ಯ
  • ವಾಯ್ಸ್‌ ಅನೌನ್ಸ್​ಮೆಂಟ್​ ವ್ಯವಸ್ಥೆಯೊಂದಿಗೆ 4 ಎಲ್.ಇ.ಡಿ ನಾಮಫಲಕ
  • ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್‌ ಬಟನ್‌
  • FDAS (ಫೈರ್‌ ಡಿಟೆಕ್ಷನ್‌ ಮತ್ತು ಅಲರಾಂ ಸಿಸ್ಟಮ್)‌, ಅತ್ಯಾಧುನಿಕ ವ್ಯವಸ್ಥೆ
  • ವಾಹನ ಸ್ಥಳದ ಟ್ರ್ಯಾಕಿಂಗ್‌ ವ್ಯವಸ್ಥೆ
  • ವ್ಹೀಲ್‌ ಚೇರ್‌ ರಾಂಪ್‌ನೊಂದಿಗೆ ನೀಲಿಂಗ್‌
  • ಕೋರಿಕೆ ನಿಲುಗಡೆಗಳಿಗಾಗಿ ಸ್ಟಾಪ್‌ ಬಟನ್
  • ಬಸ್ ಚಲಿಸುವಾಗ ನ್ಯೂಮ್ಯಾಟಿಕ್‌ ಬಾಗಿಲು ತೆರೆಯಲಾಗದ ವ್ಯವಸ್ಥೆ
  • ಶಾಂತಿನಗರ, ಕೆ.ಆರ್.ಪುರ, ಹೆಣ್ಣೂರು, ದೀಪಾಂಜಲಿನಗರ, ಕನ್ನಳ್ಳಿ, ಪೀಣ್ಯ, ಜಿಗಣಿ ಮತ್ತು ಜಯನಗರ ಘಟಕಗಳಿಂದ ಬಸ್​ಗಳ ಕಾರ್ಯಾಚರಣೆ
    CM, DCM, Minister traveled by EV bus
    ಇವಿ ಬಸ್​ನಲ್ಲಿ ಪ್ರಯಾಣಿಸಿದ ಸಿಎಂ, ಡಿಸಿಎಂ ಇತರೆ ಸಚಿವರು

ಮಾಲಿನ್ಯ ನಿಯಂತ್ರಣ: ಬಿಎಂಟಿಸಿ ಸದ್ಯ 6,144 ಬಸ್​ಗಳನ್ನು ಹೊಂದಿದೆ. ಇದರಲ್ಲಿ ಸಾಮಾನ್ಯ ಡೀಸೆಲ್ ಸಾರಿಗೆ, ನಾನ್ ಎಸಿ ಇವಿ ಬಸ್ ಹಾಗು ವೋಲ್ವೋ ಬಸ್​ಗಳು ಸೇರಿವೆ. ಪ್ರತಿ ದಿನ ಬಿಎಂಟಿಸಿ ಬಸ್‌ಗಳಲ್ಲಿ 40 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನಗರದಲ್ಲಿ ಬಿಎಂಟಿಸಿ ಬಸ್​ಗಳ ಕಾರ್ಯಾಚರಣೆಯಿಂದಾಗಿ ಡೀಸೆಲ್ ಬಳಕೆ ಹೆಚ್ಚಾಗಿದ್ದು ವಾಯುಮಾಲಿನ್ಯವೂ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ವಿದ್ಯುತ್ ಚಾಲಿತ ಬಸ್​ಗಳು ಪೂರಕವಾಗಲಿವೆ.

2024ರ ಮಾರ್ಚ್ ಅಂತ್ಯದೊಳಗೆ ಬಿಎಂಟಿಸಿಗೆ ಬರಬೇಕಿರುವ ಎಲ್ಲ ಇವಿ ಬಸ್ ಸೇರ್ಪಡೆಯಾಗಲಿವೆ. ಆಗ 1550ಕ್ಕೂ ಹೆಚ್ಚಿನ ಇವಿ ಬಸ್​ಗಳು ಬಿಎಂಟಿಸಿ ಬಳಿ ಇದ್ದಂತಾಗಲಿದ್ದು, ಒಟ್ಟಾರೆ ತನ್ನ ಬಳಿ ಇರುವ ಎಲ್ಲ ಮಾದರಿಗಳ ಬಸ್​ಗಳಲ್ಲಿ ಶೇ.25 ರಷ್ಟು ಇವಿ ಬಸ್​ಗಳನ್ನು ಬಿಎಂಟಿಸಿ ಹೊಂದಿದಂತಾಗಲಿದೆ. ಆ ಮೂಲಕ ನಗರದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಿಎಂಟಿಸಿ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ದೆಹಲಿ ನಂತರ ದೇಶದಲ್ಲೇ ಅತಿ ಹೆಚ್ಚು ಇವಿ ಬಸ್ ಹೊಂದಿದ ನಗರವಾಗಿ ಬೆಂಗಳೂರು ಹೊರಹೊಮ್ಮಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಡೀಸೆಲ್ ಉಳಿತಾಯ: ಬಿಂಟಿಸಿಯು ಪ್ರತಿ ದಿನ 3.16 ಲಕ್ಷ ಲೀಟರ್‌ ಡೀಸೆಲ್‌ ಬಳಕೆ ಮಾಡುತ್ತಿದೆ. ಮಾಸಿಕ 94.80 ಲಕ್ಷ ಲೀಟರ್‌ ವ್ಯಯಿಸುತ್ತಿದೆ. ಬಸ್​ಗಳ ಸಂಖ್ಯೆ ಹೆಚ್ಚಾದಂತೆ ಬಳಸುವ ಡೀಸೆಲ್ ಪ್ರಮಾಣವೂ ಹೆಚ್ಚಾಗಲಿದೆ. ಬೇಡಿಕೆಯಂತೆ ಬಸ್​ಗಳ ಸೇರ್ಪಡೆಯಾದಲ್ಲಿ ಮಾಸಿಕ 100 ಲಕ್ಷ ಲೀಟರ್ ಡೀಸೆಲ್ ಬೇಕಾಗಲಿದೆ. ಆದರೆ ಸದ್ಯ ಬಿಎಂಟಿಸಿ ಇವಿ ಬಸ್​ಗಳಿಗೆ ಆದ್ಯತೆ ನೀಡುತ್ತಿದ್ದು, ಶೇ.25 ರಷ್ಟು ಇವಿ ಬಸ್​ಗಳು ಬಂದರೆ ಇದರಿಂದಾಗಿ 25 ಲಕ್ಷ ಲೀಟರ್ ಡೀಸೆಲ್ ಉಳಿತಾಯವಾಗಲಿದೆ ಅಥವಾ ಅಷ್ಟು ಪ್ರಮಾಣದ ಇಂಧನ ಹೊರೆ ಬಿಎಂಟಿಸಿಗೆ ತಪ್ಪಲಿದೆ. ಈಗಿರುವ ಬಸ್​ಗಳ ಪ್ರಮಾಣದಲ್ಲಿಯೇ ಲೆಕ್ಕ ಹಾಕಿದರೂ 23.7 ಲಕ್ಷ ಲೀಟರ್ ಇಂಧನ ಉಳಿಸಬಹುದು.

EV Busses
ಬಿಎಂಟಿಸಿಯ ಹೊಸ ಇವಿ ಬಸ್‌ಗಳು

ಪ್ರತಿ ಕಿಲೋ ಮೀಟರ್​ಗೆ 10 ರೂ. ಲಾಭ: ಸದ್ಯ ಬಿಎಂಟಿಸಿ ಯಾವುದೇ ವಿದ್ಯುತ್ ಚಾಲಿತ ಬಸ್​ಗಳ ಖರೀದಿ ಮಾಡುತ್ತಿಲ್ಲ. ಎಲ್ಲಾ ನಾನ್ ಎಸಿ ಇವಿ ಬಸ್​ಗಳನ್ನು ಜಿಸಿಸಿ ಮಾದರಿಯಡಿ ಗುತ್ತಿಗೆಯಾಧಾರಿತವಾಗಿ ಪಡೆದುಕೊಳ್ಳುತ್ತಿದೆ. ಅದರಂತೆ ಪ್ರತಿ ಕಿಲೋ ಮೀಟರ್​ಗೆ 41 ರೂ. ಗಳಿಂದ 51 ರೂ.ಗಳವರೆಗೂ ಹಣ ಪಾವತಿ ಮಾಡುತ್ತಿದೆ. ಆದರೂ ಪ್ರತಿ ಕಿಲೋಮೀಟರ್​ಗೆ 10 ರೂ.ಗಳ ಲಾಭ ಬಿಎಂಟಿಸಿಗೆ ಬರುತ್ತಿದೆ. ಆದರೆ ಇಂದು ಬಿಎಂಟಿಸಿಗೆ ಟಾಟಾ ಸಂಸ್ಥೆ ನೀಡಿರುವ ಎಲ್ಲಾ 100 ಬಸ್​ಗಳಿಗೂ ಪ್ರತಿ ಕಿಲೋಮೀಟರ್​ಗೆ 41 ರೂ.ಗಳ ದರವನ್ನೇ ನಿಗದಿಪಡಿಸಿದೆ. ಹಾಗಾಗಿ ಪ್ರತಿ ಕಿಲೋಮೀಟರ್​ಗೆ ಬರುತ್ತಿರುವ ಲಾಭದ ಪ್ರಮಾಣವೂ ಹೆಚ್ಚಾಗಲಿದ್ದು, ಪ್ರತಿ ಕಿಲೋಮೀಟರ್​ಗೆ 15 ರೂ.ಗಳ ಲಾಭದ ನಿರೀಕ್ಷೆಯಲ್ಲಿದೆ.

ದಿನಕ್ಕೆ 200 ಕಿಲೋಮೀಟರ್​ನ ಕನಿಷ್ಠ ದರ ನಿಗದಿಪಡಿಸಲಾಗಿದೆ. 200 ಕಿಲೋಮೀಟರ್​ಗಿಂತ ಹೆಚ್ಚು ಬಸ್ ಓಡಿದರೆ ಓಡಿದ ಕಿಲೋಮೀಟರ್ ಲೆಕ್ಕದಲ್ಲಿ ಹಣ ಪಾವತಿಸಬೇಕು. ಒಂದು ವೇಳೆ 200 ಕಿಲೋಮೀಟರ್ ಕ್ರಮಿಸದೇ ಇದ್ದಲ್ಲಿ ಎಷ್ಟೇ ಕಡಿಮೆ ಇದ್ದರೂ 200 ಕಿಲೋ ಮೀಟರ್​ಗಳ ದರವನ್ನೇ ಬಿಎಂಟಿಸಿ ಪಾವತಿ ಮಾಡಬೇಕಾಗಿದೆ. ಹಾಗಾಗಿ ಜಿಸಿಸಿ ಮಾದರಿಯಲ್ಲಿ ಸೇರ್ಪಡೆ ಮಾಡಿಕೊಂಡಿರುವ ಇವಿ ಬಸ್​ಗಳನ್ನು ದೂರದ ಮಾರ್ಗಗಳಲ್ಲೇ ಕಾರ್ಯಾಚರಣೆಗೆ ನಿಯುಕ್ತಿಗೊಳಿಸಲಾಗುತ್ತಿದೆ. ಕನಿಷ್ಠ 200 ಕಿಲೋಮೀಟರ್​ಗೆ ಲೆಕ್ಕ ಹಾಕಿದರೂ ಪ್ರತಿ ಬಸ್​ನಿಂದ ಖರ್ಚು ವೆಚ್ಚ ತೆಗೆದು ದಿನಕ್ಕೆ 2,000 ಸಾವಿರ ಕನಿಷ್ಠ ಆದಾಯ ಬರಲಿದೆ.

ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿಯ 100 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.