ಬೆಂಗಳೂರು: ಪ್ರವಾಹಕ್ಕೆ ತುತ್ತಾದ ತಮ್ಮ ಕುಟುಂಬಸ್ಥರಿಗೆ ಆಸರೆಯಾಗಬೇಕು ಎಂಬ ಉದ್ದೇಶದಿಂದ ಪೇದೆಗಳು ತಮ್ಮ ಊರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಆದ್ರೆ ಪೇದೆಗಳನ್ನು ರಿಲೀವ್ ಮಾಡದೆ ಎಸ್ಪಿ ಅವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ತಿಂಗಳ 9ರಂದು 89 ಪೊಲೀಸ್ ಪೇದೆಗಳು ವರ್ಗಾವಣೆಯಾಗಿದ್ದರು. ಇದ್ರಲ್ಲಿ ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಹಾವೇರಿ, ರಾಯಚೂರು, ಉ. ಕರ್ನಾಟಕ ಭಾಗದ ಪೇದೆಗಳು ತಮ್ಮ ಹುಟ್ಟೂರು ನೆರೆಯಿಂದ ತತ್ತರಿಸಿದ್ದ ಕಾರಣ ತಮ್ಮ ಜಿಲ್ಲೆಗಳಿಗೆ ತಾವೇ ವರ್ಗಾವಣೆ ಮಾಡಿಸಿಕೊಂಡಿದ್ದರು.
ಯಾಕಂದ್ರೆ ಕುಟುಂಬಕ್ಕೆ ಆಸರೆಯಾಗಬಹುದು ಮತ್ತು ಜೀವನವನ್ನ ಮತ್ತೆ ಮರುಕಟ್ಟಲು ವರ್ಗಾವಣೆ ಪಡೆದುಕೊಂಡಿದ್ದರು. ಇವರ ವರ್ಗಾವಣೆಗೆ ರಾಜ್ಯ ಗೃಹಮಂತ್ರಿಗಳು ಮತ್ತು ಡಿಜಿ ನೀಲಮಣಿ ರಾಜು ಕೂಡ ಸಮ್ಮತಿ ಸೂಚಿಸಿದ್ರು.
ಆದರೆ, ಇದೀಗ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳು ವರ್ಗಾವಣೆಯಾದ ಪೇದೆಗಳನ್ನು ರಿಲೀವ್ ಮಾಡದೇ, ಮಲತಾಯಿ ಧೋರಣೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ತಿಂಗಳಿನಿಂದ ಆರ್ಡರ್ ಕಾಪಿ ಹಿಡಿದು ತಮ್ಮನ್ನ ರಿಲೀವ್ ಮಾಡುವಂತೆ ಜಿಲ್ಲಾವರಿಷ್ಠಾಧಿಕಾರಿಗಳು ಬಳಿ ಕಾಯುತ್ತಿದ್ದೇವೆ ಎಂದು ತಮ್ಮ ಅಳಳು ತೋಡಿಕೊಂಡಿದ್ದಾರೆ.