ETV Bharat / state

ಸುಧಾಮೂರ್ತಿ ಹೆಸರಿನಲ್ಲಿ ಫೋರ್ಜರಿ ಸಹಿ...ಹೈದ್ರಾಬಾದ್​ ಮೂಲದ ಟೆಕ್ಕಿ ವಶ

author img

By

Published : Mar 15, 2020, 5:37 PM IST

Updated : Mar 15, 2020, 5:48 PM IST

ಮೊಬೈಲ್ ಅಪ್ಲಿಕೇಶನ್ ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಟೆಕ್ಕಿಯೊಬ್ಬ ಕಳೆದ ವರ್ಷ ಟಾಲಿವುಡ್ ಸ್ಟಾರ್ ವಿಜಯ ದೇವರಕೊಂಡ ಅವರಿಗೆ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್​ ಹೆಡ್ ಸೃಷ್ಟಿಸಿ ಫೋರ್ಜರಿ ಸಹಿ ಮಾಡಿ ರಿಜಿಸ್ಟರ್ ಪೋಸ್ಟ್ ಮಾಡಿದ್ದ ಆರೋಪಿಯನ್ನ ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

L. sayikrishna
ಟೆಕ್ಕಿ ಎಲ್. ಸಾಯಿಕೃಷ್ಣ ಬಂಧಿತ ಆರೋಪಿ

ಬೆಂಗಳೂರು: ಇನ್ಪೋಸಿಸ್‌ ಕಂಪೆನಿಯ ಸಂಸ್ಥಾಪಕಿ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ಟೆಕ್ಕಿ ಎಲ್. ಸಾಯಿಕೃಷ್ಣ ಬಂಧಿತ ಆರೋಪಿ. ಆಫೀಸರ್​​ ನಿಯರ್​ ಬೈ ಎಂಬ ಮೊಬೈಲ್ ಅಪ್ಲಿಕೇಶನ್ ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಟೆಕ್ಕಿ ಕಳೆದ ವರ್ಷ ಟಾಲಿವುಡ್ ಸ್ಟಾರ್ ವಿಜಯ ದೇವರಕೊಂಡ ಅವರಿಗೆ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್​ ಹೆಡ್ ಸೃಷ್ಟಿಸಿ ಪೋರ್ಜರಿ ಸಹಿ ಮಾಡಿ ರಿಜಿಸ್ಟರ್ ಪೋಸ್ಟ್ ಮಾಡಿದ್ದ.‌

ಈ ಸಂಬಂಧ ಫೆ.26 ರಂದು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಇನ್ಫೋಸಿಸ್ ಫೌಂಡೇಷನ್ ಕಚೇರಿಯ ಲೆ.ಕರ್ನಲ್ ರಮೇಶ್ ಎಂಬುವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಐಪಿಸಿ 419, 465, 471, 468 ಅಡಿ ಕೇಸ್ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ‌ ನಡೆಸುತ್ತಿದ್ದಾರೆ.

Last Updated : Mar 15, 2020, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.