ETV Bharat / state

ಕೊರೊನಾ ಎರಡನೇ ಅಲೆಯಿಂದ ರಾಜ್ಯದ ಆರ್ಥಿಕತೆಗೆ ಮತ್ತೆ ಹೊಡೆತ?

author img

By

Published : Jun 2, 2021, 7:58 PM IST

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್​ಡೌನ್ ಮಾಡಿರುವುದರಿಂದ ಗಾರ್ಮೆಂಟ್ಸ್, ಕೈಗಾರಿಕೆಗಳು ಮುಚ್ಚಿವೆ. ಹೋಟೆಲ್ ಉದ್ಯಮ, ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರು, ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡುವವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ.

ಕೊರೊನಾ
ಕೊರೊನಾ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲಾ. ಕೊರೊನಾ ಸೋಂಕು ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಆನೇಕ ಬಡ ಹಾಗೂ ಮಧ್ಯಮ ವರ್ಗದವರನ್ನು ಭಾರಿ ಸಂಕಷ್ಟಕ್ಕೆ ದೂಡಿದೆ.

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಲಾಕ್​ಡೌನ್ ಮಾಡಿರುವುದರಿಂದ ಗಾರ್ಮೆಂಟ್ಸ್, ಕೈಗಾರಿಕೆಗಳು ಮುಚ್ಚಿವೆ. ಹೋಟೆಲ್ ಉದ್ಯಮ, ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರು, ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡುವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ.

ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ: ಕೊರೊನಾ ಸೋಂಕಿನಿಂದಾಗಿ ಮೊದಲ ಅಲೆಯಿಂದ ಚೇತರಿಸಿಕೊಳ್ಳುವ ಹಂತದಲ್ಲೇ ರಾಜ್ಯದಲ್ಲಿ ಎರಡನೇ ಅಲೆ ಅಬ್ಬರ ಶುರುವಾಗಿದ್ದರಿಂದ ಇದೀಗ ಮತ್ತೆ ಲಾಕ್​ ಡೌನ್ ಎದುರಾಗಿದೆ. ಮೇ ತಿಂಗಳಲ್ಲಿ ಎರಡನೇ ಅಲೆ ಅಬ್ಬರ ಜೋರಾಗಿಯೇ ಇತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಸರ್ಕಾರ ಜನತಾ ಕರ್ಫ್ಯೂನಿಂದ ಇದೀಗ ಲಾಕ್​ಡೌನ್ ಜಾರಿಗೊಳಿಸಿರುವುದರಿಂದ ಮತ್ತೆ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ.‌

ಲಾಕ್​ಡೌನ್ ನಿಂದಾಗಿ ಕೊರೊನಾ ಸೋಂಕು ಕೊಂಚ ಇಳಿಮುಖ ಕಂಡಿದೆ. ಕೊರೊನಾ 2ನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಕಠಿಣ ನಿರ್ಬಂಧಗಳಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿದ್ದಿದೆ. ಪ್ರಮುಖ ಆದಾಯ ಮೂಲಗಳು ನಿಂತಿವೆ. ಜನತಾ ಕರ್ಫ್ಯೂ ಹಾಗೂ ಲಾಕ್​ಡೌನ್ ಪರಿಣಾಮ ಏಪ್ರಿಲ್ ಕೊನೆವಾರದಿಂದ ಮೇ ಅಂತ್ಯದ ನಡುವಿನ ಅವಧಿಯಲ್ಲಿ 5,000 ಕೋಟಿ ರೂ. ಆದಾಯ ನಷ್ಟ ಅಂದಾಜಿಸಲಾಗಿದೆ.

ರಾಜಸ್ವ ಸಂಗ್ರಹಣೆ ಕೈ ತಪ್ಪುವ ಅಪಾಯ: ಜನರ ಜೀವ-ಜೀವನ ರಕ್ಷಿಸುವ ನಿಟ್ಟಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಕಾರಣ ಜೂನ್ 7ರ ವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಮೇ ತಿಂಗಳ ರಾಜಸ್ವ ಸಂಗ್ರಹಣೆಯಲ್ಲಿ ಶೇ.80ರಷ್ಟು ಕೈ ತಪ್ಪುವ ಅಪಾಯ ಎದುರಾಗಿದೆ. ಸೀಮಿತ ಅವಧಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಕೆಲವೊಂದು ಉದ್ಯಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದರೂ, 2021-22ನೇ ಆರ್ಥಿಕ ವರ್ಷದ ಮೊದಲ ತಿಂಗಳಿಂದಲೇ ಹೊಡೆತ ಬೀಳುವುದು ತಪ್ಪಿಲ್ಲ.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣ ತಯಾರಿಸುವ ಕಾರ್ಖಾನೆ, ಔಷಧ ಅಂಗಡಿಗಳಿಗೆ ಲಭಿಸಿದ ಅವಕಾಶದಿಂದ ಸ್ವಲ್ಪಮಟ್ಟಿಗೆ ತೆರಿಗೆ ಸಂಗ್ರಹಿಸಬಹುದು. ಉಳಿದಂತೆ ವಾಣಿಜ್ಯ ವಹಿವಾಟು, ಹೋಟೆಲ್-ವಸತಿ ಗೃಹ, ಪ್ರವಾಸೋದ್ಯಮ, ಅಂತಾರಾಷ್ಟ್ರೀಯ, ಅಂತಾರಾಜ್ಯ, ಅಂತರ್ ಜಿಲ್ಲಾ ಸಂಚಾರ ಪೂರ್ಣ ನಿರ್ಬಂಧವಿರುವುದರಿಂದ ವ್ಯವಹಾರ ಪೂರ್ಣ ಸ್ಥಗಿತವಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ರಾಜ್ಯ ಸರ್ಕಾರ ಸ್ವಂತ ತೆರಿಗೆ ಮೂಲಗಳಿಂದ 1,24,201 ಕೋಟಿ ರೂ. ಸಂಗ್ರಹದ ನಿರೀಕ್ಷೆ ಹೊಂದಿತ್ತು. ಈ ಲೆಕ್ಕಾಚಾರವನ್ನು ಕೊರೊನಾ ಮತ್ತೊಮ್ಮೆ ತಲೆಕೆಳಗಾಗುವಂತೆ ಮಾಡಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಅಬಕಾರಿ ಇಲಾಖೆಯಲ್ಲಿ ಆದಾಯ ನಷ್ಟ ಕಡಿಮೆ: ಕೊರೊನಾ 2ನೇ ಅಲೆ, ಲಾಕ್​ಡೌನ್ ಪರಿಣಾಮ ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಕುಸಿತ ಕಂಡಿದೆ. ಬೇರೆ ಮೂಲಗಳಿಗೆ ಹೋಲಿಸಿದರೆ ಅಬಕಾರಿ ಇಲಾಖೆಯಲ್ಲಿ ಮಾತ್ರ ಆದಾಯ ನಷ್ಟ ಕಡಿಮೆಯಿದೆ ಎಂದು ಸಮಾಧಾನ ಮಾಡಿಕೊಳ್ಳಬಹುದಷ್ಟೇ. ವಾಣಿಜ್ಯ, ಮೋಟಾರು ವಾಹನ, ಅಬಕಾರಿ, ತೈಲ ಮಾರಾಟ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಶೇಖರಣೆ ಇಳಿಮುಖವಾಗಿದೆ. ರಾಜಸ್ವ ಸಂಗ್ರಹಣೆ ಪ್ರಮುಖ ಮೂಲಗಳಿಂದ ಮಾಸಿಕ 10,000 ಕೋಟಿ ರೂ. ಸಂಗ್ರಹದ ಗುರಿಯಿದ್ದು, ಮೇ ಪೂರ್ತಿ ಲಾಕ್​ಡೌನ್ ವಿಧಿಸಿರುವ ಕಾರಣಕ್ಕೆ ಆದಾಯ ನಷ್ಟ ಇನ್ನಷ್ಟು ಹೆಚ್ಚುವುದು ನಿಶ್ಚಿತ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಕೆಲ ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಡೀಸೆಲ್ ದರ 1-2 ರೂ. ಕಡಿಮೆಯಿದ್ದು, ಹೀಗಾಗಿ ಸರಕು ಸಾಗಣೆ ವಾಹನಗಳು ಬೇರೆ ರಾಜ್ಯಕ್ಕೆ ಹೋಗುವ ಮಾರ್ಗದ ಮಧ್ಯೆ ಕರ್ನಾಟಕದಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದವು. ಜತೆಗೆ ಖಾಸಗಿ ವಾಹನಗಳ ಓಡಾಟ ಬಹುಪಾಲು ಕಡಿಮೆಯಾಗಿದ್ದು, ಇದರಿಂದ ಪೆಟ್ರೋಲ್ ವಹಿವಾಟು ಕುಸಿದಿದೆ. ರಾಜ್ಯಕ್ಕೆ ತೈಲ ಮಾರಾಟದಿಂದ ತಿಂಗಳಿಗೆ ಅಂದಾಜು 1,300 ಕೋಟಿ ರೂ. ಆದಾಯವಿದೆ. ಆದರೆ, ಲಾಕ್​ಡೌನ್​ನಿಂದಾಗಿ ಈ ವಲಯದಿಂದಲೂ 300 ಕೋಟಿ ರೂ.ಗೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದ ವಾಣಿಜ್ಯ ತೆರಿಗೆ ಸಂಗ್ರಹ ಅಂದಾಜು 76,473 ಕೋಟಿ ರೂ. ಅಂದರೆ ಮಾಸಿಕ 6,300 ಕೋಟಿ ರೂ.ಗಳಾಗಲಿದ್ದು, ಏ.27ರಿಂದ ಮೇ 2ನೇ ವಾರದವರೆಗೆ 3,700 ಕೋಟಿ ರೂ. ನಷ್ಟವಾಗಿದೆ. ತೈಲ ಮಾರಾಟದಿಂದ 1,300 ಕೋಟಿ ರೂ. ತೆರಿಗೆ ಸಂಗ್ರಹದ ನಿರೀಕ್ಷೆಯಿದ್ದು, 300 ಕೋಟಿ ರೂ. ಖೋತಾ ಆಗಿದೆ. ಬೆರಳೆಣಿಕೆ ಆನ್​ಲೈನ್ ನೋಂದಣಿ ಬಿಟ್ಟರೆ ಯಾವುದೇ ವಾಹನ ನೋಂದಣಿ ನಡೆಯುತ್ತಿಲ್ಲ. ಈ ಕ್ಷೇತ್ರದಲ್ಲಿ 580 ಕೋಟಿ ರೂ. ನಷ್ಟವಾಗುವ ಸಾಧ್ಯತೆಗಳಿವೆ. ನೋಂದಣಿ ಮತ್ತು ಮುದ್ರಾಂಕ ಕಚೇರಿಗಳನ್ನು ಮುಚ್ಚಲಾಗಿದ್ದು, ನಿರೀಕ್ಷಿತ 800-1000 ಕೋಟಿ ರೂ. ಮಾಸಿಕ ಆದಾಯದಲ್ಲಿ 700 ಕೋಟಿ ರೂ. ಖೋತಾ ಆಗಿದೆ. ಅಬಕಾರಿ ಮಾಸಿಕ 2,000 ಕೋಟಿ ರೂ. ಸಂಗ್ರಹದ ಅಂದಾಜಿದ್ದು, ಸೀಮಿತ ಅವಧಿಗೆ ಮದ್ಯ ಪಾರ್ಸೆಲ್​ಗೆ ಅವಕಾಶ ನೀಡಿದ್ದರೂ ದಿನಕ್ಕೆ ಸಂಗ್ರಹವಾಗುತ್ತಿದ್ದ 65 ಕೋಟಿ ರೂ. ತೆರಿಗೆ 50-55 ಕೋಟಿ ರೂ.ಗೆ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಎದುರಿರುವ ಸವಾಲು: ಜನರ ಜೀವ-ಜೀವನೋಪಾಯದ ಸುರಕ್ಷತೆ ಜತೆಗೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಂಬಳ, ಪಿಂಚಣಿ ಇನ್ನಿತರ ಬದ್ಧತಾ ವೆಚ್ಚ ಸರಿದೂಗಿಸುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರಿರುವ ದೊಡ್ಡ ಸವಾಲು. ಕಳೆದ ವರ್ಷ ಬದ್ಧತಾ ವೆಚ್ಚ ಸರಿದೂಗಿಸಲೆಂದು ಹೆಚ್ಚುವರಿಯಾಗಿ 57,000 ಕೋಟಿ ರೂ. ಸಾಲ ಮಾಡಬೇಕಾಯಿತು. ಕೇಂದ್ರ ಸರ್ಕಾರದ ನೆರವಿನ ಭರವಸೆಯು ಈ ಸಾಹಸಕ್ಕೆ ಕೈಹಾಕಲು ಪ್ರೇರೇಪಿಸಿತು. ಆದರೆ 2ನೇ ಅಲೆ ಕಾಲಿಟ್ಟ ಸಂದರ್ಭದಲ್ಲಿ ಆರ್ಥಿಕ ನೆರವಿನ ವಿಚಾರದಲ್ಲಿ ಕೇಂದ್ರದ ನಿಲುವು ಏನೆಂಬುದು ಗೊತ್ತಾಗಿಲ್ಲ. ಹೆಚ್ಚುವರಿ ಸಾಲ ಕಷ್ಟ, ಸ್ವಂತ ಆರ್ಥಿಕ ಸಂಪನ್ಮೂಲ ನಿರೀಕ್ಷೆಯಂತೆ ಸಿಗದಿದ್ದರೆ ಇನ್ನೂ ಕಷ್ಟ ಎಂಬಂತಹ ಪರಿಸ್ಥಿತಿಗೆ ಸರ್ಕಾರ ಸಿಲುಕಿದೆ.

ಮೊದಲ ಸುದೀರ್ಘ ಲಾಕ್​ ಡೌನ್​ನಿಂದಾಗಿ 2020-21ನೇ ಸಾಲಿನಲ್ಲಿ ವಿವಿಧ ಇಲಾಖೆಗಳ ಒಟ್ಟು 19,775 ಕೋಟಿ ರೂ. ಹಾಗೂ ಬಂಡವಾಳ ವೆಚ್ಚದಲ್ಲಿ 4,000 ಕೋಟಿ ರೂ.ಗೂ ಅಧಿಕ ಮೊತ್ತ ಕಡಿತವಾಗಿತ್ತು. ಮುಂದುವರಿದ ಕಾಮಗಾರಿಗಳಿಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡಿದೆ. ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಹಂತದಲ್ಲಿ ಕೊರೊನಾ 2ನೇ ಅಲೆ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದು, ಸಿಎಂ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ.

ಉತ್ಪಾದನೆ, ತಯಾರಿಕೆ, ನಿರ್ಮಾಣ, ಮಾಹಿತಿ&ತಂತ್ರಜ್ಞಾನ ಸೇರಿದಂತೆ ಕೆಲವು ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಆಟೋಮೊಬೈಲ್, ಶಾಪಿಂಗ್​ ಮಾಲ್​, ವ್ಯಾಪಾರ, ಸಿದ್ಧ ಉಡುಪು ಇನ್ನಿತರ ಕ್ಷೇತ್ರಗಳಿಗೆ ವಿಧಿಸಿದ ನಿರ್ಬಂಧದ ಪರಿಣಾಮ ಪರೋಕ್ಷ ಆದಾಯ ಮೂಲಗಳು ಸೊರಗಲಿವೆ. ಹೋಟೆಲ್​, ಮದ್ಯದಂಗಡಿಗಳಿಗೆ ಲಭ್ಯ ಪಾರ್ಸೆಲ್​ ಅವಕಾಶ ತಕ್ಕಮಟ್ಟಿಗೆ ಆದಾಯ ತರಬಹುದು. ಅಬಕಾರಿ ಹೊರತುಪಡಿಸಿ ಸರ್ಕಾರದ ನೇರ ಆದಾಯ ಮೂಲಗಳಾದ ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಕ್ಕೆ ಹೊಡೆತ ಬೀಳಲಿದೆ.

ರಾಜ್ಯದ ಜಿಡಿಪಿ ಕುಸಿತ ಈ ಬಾರಿ ಬಹುತೇಕ ಖಚಿತವಾಗಿರುವುದರಿಂದ ನಮ್ಮ ವೈಯಕ್ತಿಕ ಹಣಕಾಸು ಸ್ಥಿತಿಗತಿಯನ್ನೇ ಮತ್ತಷ್ಟು ಬುಡಮೇಲು ಮಾಡಲಿದೆ. ಹಣದುಬ್ಬರ ಹೆಚ್ಚುವಿಕೆ, ಗ್ರಾಹಕರ ವಸ್ತುಗಳು ದುಬಾರಿಯಾಗುವಿಕೆ, ಉದ್ಯೋಗಗಳ ಸಂಖ್ಯೆಯಲ್ಲಿ ತೀವ್ರ ಕುಸಿತದ ಆತಂಕ ಎದುರಾಗಿದೆ.

ಜಿಎಸ್​ಟಿ ಪರಿಹಾರ ನಷ್ಟದ ಬಾಕಿ ಮೊತ್ತಕ್ಕೆ ಕೇಂದ್ರಕ್ಕೆ ಮನವಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಜಿಎಸ್​ಟಿ ಪರಿಹಾರ ನಷ್ಟದ ಬಾಕಿ ಮೊತ್ತ 11 ಸಾವಿರ ಕೋಟಿ ರೂ.‌ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿಎಸ್​ಟಿ ಮಂಡಳಿಯ ರಾಜ್ಯ ಪ್ರತಿನಿಧಿಯೂ ಆಗಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಜಿಎಸ್​ಟಿ ಮಂಡಳಿಯ 43ನೇ ಸಭೆಯಲ್ಲಿ ಭಾಗವಹಿಸಿದ್ದ ಅವರು, 2021 - 22ನೇ ಸಾಲಿನ ಜಿಎಸ್​ಟಿ ಪರಿಹಾರದ ನಷ್ಟದ ಹಣವನ್ನು ಕೇಂದ್ರ ಸರ್ಕಾರವೇ ಸಾಲಪಡೆದು ರಾಜ್ಯಕ್ಕೆ ನೀಡಬೇಕು. 2020- 21ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ 11 ಸಾವಿರ ಕೋಟಿ ರೂ. ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.