ETV Bharat / state

ಕ್ರಿಕೆಟ್​ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ... ಯುವಕನನ್ನು ಇರಿದ ಸ್ನೇಹಿತ ಎಸ್ಕೇಪ್​

ಕ್ರಿಕೆಟ್​ ವಿಚಾರವಾಗಿ ಶುರುವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಸರಸ್ವತಿ ಬಡಾವಣೆಯಲ್ಲಿ ನಡೆದಿದೆ.

ಜಗಳ ಕೊಲೆಯಲ್ಲಿ ಅಂತ್ಯ
author img

By

Published : Nov 21, 2019, 7:20 PM IST

ಬೆಂಗಳೂರು: ಕ್ರಿಕೆಟ್​ ವಿಚಾರವಾಗಿ ಶುರುವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಸರಸ್ವತಿ ಬಡಾವಣೆಯಲ್ಲಿ ನಡೆದಿದೆ.

ಉಮಾಮಹೇಶ್​ ಹತ ಯುವಕ. ಆಂಧ್ರ ಮೂಲದವನಾದ ಈತ ಬೆಂಗಳೂರಿನ ನಂದಿನಿ ಲೇಔಟ್​​ನ ಸರಸ್ವತಿ ಬಡಾವಣೆಯಲ್ಲಿ ವಾಸವಿದ್ದ.

ಖಾಸಗಿ ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ ಈತ ನಿನ್ನೆ ರಾತ್ರಿ ಸ್ನೇಹಿತರಿಂದ ಚಾಕುವಿನ ಇರಿತಕ್ಕೊಳಗಾಗಿ ಇಂದು ಮುಂಜಾನೆ ಸಾವಿಗೀಡಾಗಿದ್ದಾನೆ.

ಕ್ರಿಕೆಟ್​ ವಿಚಾರವಾಗಿ ಜಗಳ

ನಿನ್ನೆ ಸಂಜೆ ಸರಸ್ವತಿ ಬಡಾವಣೆಯಲ್ಲಿರುವ ಬೇಕರಿ ಬಳಿ ಸ್ನೇಹಿತರ ಜೊತೆ ಉಮಾಮಹೇಶ್ ಬಂದಿದ್ದ. ಈ ವೇಳೆ ಕ್ರಿಕೆಟ್ ವಿಚಾರವಾಗಿ ಸ್ನೇಹಿತನ ಜೊತೆ ಜಗಳವಾಡಿದ್ದಾನಂತೆ. ಇದೇ ವೇಳೆ ಮತ್ತೊಬ್ಬ ಸ್ನೇಹಿತ ಉಮಾಮಹೇಶ್ ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ನಂತರ ಉಳಿದ ಸ್ನೇಹಿತರೆಲ್ಲ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರೇ ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಇನ್ನೂ ಉಮಾಮಹೇಶ್ ಕಾಲೇಜು ಮೆಟ್ಟಿಲೇರಿದಾಗಿನಿಂದಲೂ ಓದುತ್ತಿರಲಿಲ್ಲವಂತೆ. ಸ್ನೇಹಿತರು, ಮೋಜು, ಮಸ್ತಿಯೆಂದು ಓಡಾಡ್ತಾ ಇದ್ನಂತೆ. ಅದೇ ರೀತಿ ಎರಡು ದಿನಗಳ ಹಿಂದೆ ಇದೇ ಉಮಾಮಹೇಶ್ ಕ್ರಿಕೆಟ್ ವಿಚಾರವಾಗಿ ಸ್ನೇಹಿತನೊಬ್ಬನ ಮೇಲೆ ಹಲ್ಲೆ ಮಾಡಿದ್ನಂತೆ. ಅದೇ ಸಿಟ್ಟಿನಿಂದ ಸ್ನೇಹಿತರು ಕೊಲೆ ಮಾಡಿರಬಹುದು ಎಂದು ಹೇಳಲಾಗ್ತಿದೆ. ಇನ್ನು ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲೂ ಹಲವರ ನಡುವೆ ಹಣಕಾಸು ವ್ಯವಹಾರ ಮಾಡ್ತಿದ್ದ ಎಂದು ಹೇಳಲಾಗ್ತಿದೆ. ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಆರೋಪಿಗಳ‌ ಪತ್ತೆಗಾಗಿ ಬಲೆ‌ ಬೀಸಿದ್ದಾರೆ.

Intro:ಯುವಕರ ನಡುವಿನ ಸಣ್ಣ ಜಗಳ‌ ಕೊಲೆಯಲ್ಲಿ ಅಂತ್ಯ:ಕ್ರಿಕೇಟ್ ಆಟದ ವಿಚಾರ ಕೊಲೆ ಗುಮಾನಿ

BYTE: ಶಶಿಕುಮಾರ್, ಡಿಸಿಪಿ ಉತ್ತರ ವಿಭಾಗ

ಸಕತ್‌ ಸ್ಟೈಲಿಶ್ ಹುಡುಗ ಮೋಜು ಮಸ್ತಿ, ಕಾಲೇಜ್ ಪ್ರೆಂಡ್ಸ್ ಅಂತ ಸಕತ್ ಸುತ್ತಾಡ್ತಿದ್ದ ಆದ್ರೇ ಜೊತೆಗೆ ಇದ್ದ ಸುತ್ತಾ ಸ್ನೇಹಿತರೇ ಆತನ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಹೆಸರು ಉಮಾಮಹೇಶ್.ಮೂಲತಃ ಆಂಧ್ರ ಮೂಲದವಾನಾಗಿದ್ದು ಬೆಂಗಳೂರಿನ ನಂದಿನಿ ಲೇಔಟ್ ನ‌ ಸರಸ್ವತಿ ಬಡಾವಣೆಯಲ್ಲಿ ವಾಸವಾಗಿದ್ದ.

ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ದ್ವಿತಿಯ ವರ್ಷ ವ್ಯಾಸಂಗ ಮಾಡುತ್ತಿದ್ದ ಈತ ನಿನ್ನೆ ರಾತ್ರಿ ಸ್ನೇಹಿತರಿಂದ ಚಾಕುವಿನ ಇರಿತಕ್ಕೊಳಗಾಗಿ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಸರಸ್ವತಿ ಬಡಾವಣೆಯಲ್ಲಿರುವ ಬೇಕರಿ ಬಳಿ ಸ್ನೇಹಿತರ ಜೊತೆ ಉಮಾಮಹೇಶ್ ಬಂದಿದ್ದ.ಈ ವೇಳೆ ಕ್ರಿಕೇಟ್ ವಿಚಾರವಾಗಿ ಸ್ನೇಹಿತನ ಜೊತೆ ಜಗಳವಾಡಿದ್ದಾನಂತೆ.ಇದೇ ವೇಳೆ ಮತ್ತೊಬ್ಬ ಸ್ನೇಹಿತ ಉಮಾಮಹೇಶ್ ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.ನಂತರ ಉಳಿದ ಸ್ನೇಹಿತರೆಲ್ಲ‌ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ.ಬಳಿಕ ಉಮಾಮಹೇಶ್ ಗೆ ಚಾಕು ಚುಚ್ಚಿದ ಬಳಿಕ ಏನೂ ಮಾಡಬೇಕೆಂದು ಗೊತ್ತಾಗದೆ,ಬೇಕರಿ ಒಳಗಡೆಗೆ ಬಂದು ಕುಳಿತಿದ್ದಾನೆ.ನಂತರ ಸ್ಥಳೀಯರೇ ಉಮಾಮಹೇಶ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದು ಉಮಾಮಹೇಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಇನ್ನೂ ಉಮಾಮಹೇಶ್ ಕಾಲೇಜ್ ಮೆಟ್ಟಿಲೇರಿದಾಗಿನಿಂದಲೂ ಓದುತ್ತಿರಲಿಲ್ಲವಂತೆ. ಸ್ನೇಹಿತರು ಅವರು ಇವರು ಅಂತ ಓಡಾಡ್ತಾ ಇದ್ನಂತೆ.ಅದೇ ರೀತಿ ಎರಡು ದಿನಗಳ ಹಿಂದೆ ಇದೇ ಉಮಾಮಹೇಶ್ ಕ್ರಿಕೇಟ್ ವಿಚಾರವಾಗಿ ಸ್ನೇಹಿತನೊಬ್ಬನ ಮೇಲೆ ಹಲ್ಲೆ ಮಾಡಿದ್ನಂತೆ.ಅದೇ ಸಿಟ್ಟಿನಿಂದ ಸ್ನೇಹಿತರು ಕೊಲೆ ಮಾಡಿರಬಹುದು ಅಂತ ಹೇಳಲಾಗ್ತಿದೆ.ಇನ್ನೂ ಕ್ರಿಕೇಟ್ ಬೆಟ್ಟಿಂಗ್ ವಿಚಾರದಲ್ಲೂ ಹಲವರ ನಡುವೆ ಹಣಕಾಸು ವ್ಯವಹಾರ ಮಾಡ್ತಿದ್ದ ಅಂತ ಹೇಳಲಾಗ್ತಿದೆ.ಸದ್ಯ ಪ್ರಕರಣ ಕೈಗೆತ್ತಿಕೊಂಡಿರೋ ನಂದಿನಿ ಲೇಔಟ್ ಪೊಲೀಸರು ಆರೋಪಿಗಳ‌ಪತ್ತೆ ಗಾಗಿ ಬಲೆ‌ಬೀಸಿದ್ದಾರೆ.Body:KN_BNG_08_MURDER_7204498Conclusion:KN_BNG_08_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.