ETV Bharat / state

ಸಚಿವ ವಿ. ಸೋಮಣ್ಣರಿಂದ ದ್ವೇಷದ ರಾಜಕೀಯ: ಈಶ್ವರ ಖಂಡ್ರೆ - The politics of hate by Somanna said by Ishwar Khandre

ಬಾಲ್ಕಿ ಪುರಸಭೆ ವ್ಯಾಪ್ತಿಯ ವಸತಿ ಯೋಜನೆಗಳಿಗೆ ಸೀಮಿತವಾಗಿ ತನಿಖೆಗೆ ವಸತಿ ಸಚಿವ ವಿ.ಸೋಮಣ್ಣ ಆದೇಶಿಸಿರುವುದು ಬಿಜೆಪಿಯ ದ್ವೇಷದ ರಾಜಕೀಯಕ್ಕೆ ನಿದರ್ಶನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಆರೋಪಿಸಿದ್ದಾರೆ. ಹಣ ಮಂಜೂರಾತಿ ತಡೆ ಹಿಡಿಯುವ ಬದಲು ಕಳೆದ 10 ವರ್ಷದಲ್ಲಿನ ವಸತಿ ಯೋಜನೆಗಳ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಖಂಡ್ರೆ ಆಗ್ರಹಿಸಿದ್ದಾರೆ.

ishwar-khandre
ಈಶ್ವರ ಖಂಡ್ರೆ
author img

By

Published : Jan 10, 2020, 2:41 PM IST

ಬೆಂಗಳೂರು: ಬಾಲ್ಕಿ ಪುರಸಭೆ ವ್ಯಾಪ್ತಿಯ ವಸತಿ ಯೋಜನೆಗಳಿಗೆ ಸೀಮಿತವಾಗಿ ತನಿಖೆಗೆ ವಸತಿ ಸಚಿವ ವಿ.ಸೋಮಣ್ಣ ಆದೇಶಿಸಿರುವುದು ಬಿಜೆಪಿಯ ದ್ವೇಷದ ರಾಜಕೀಯಕ್ಕೆ ನಿದರ್ಶನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ದೂರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆಯ ಹಣ ಮಂಜೂರಾತಿ ತಡೆ ಹಿಡಿಯುವ ಬದಲು ಇಡೀ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಾದ ವಸತಿ ಯೋಜನೆಗಳ ಕುರಿತು ನ್ಯಾಯಾಂಗ ತನಿಖೆ ಮಾಡಿಸಿ ಎಂದು ಆಗ್ರಹಿಸಿದ್ದಾರೆ.

ಈಶ್ವರ ಖಂಡ್ರೆ

ಹಿಂದಿನ ಸರ್ಕಾರದ ವಸತಿ ಯೋಜನೆಗಳಿಗೆ 211 ಕೋಟಿ ರೂಪಾಯಿ ಹಣ ವಸತಿ ಯೋಜನೆಗೆ ಕೊಡುತ್ತಿದ್ದೇವೆ ಎಂದು ಸೋಮಣ್ಣ ಹೇಳುತ್ತಾರೆ. ಆದರೆ ಇದು ಕೇವಲ ಕಣ್ಣೊರೆಸುವ ತಂತ್ರ ಮಾತ್ರ. ಹಾಲಿ ಯೋಜನೆಗಳಿಗೆ ಸಾವಿರದಿಂದ ಒಂದೂವರೆ ಸಾವಿರ ಕೋಟಿ ಹಣ ಬೇಕು. ಆದ್ರೆ ಕಳೆದ ಎಂಟು ತಿಂಗಳಿನಿಂದ ಹಣ ಬಿಡುಗಡೆ ಆಗಿಲ್ಲ. ಸರ್ಕಾರವೇ ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ರೀತಿ ವರ್ತಿಸುತ್ತಿದೆ. ನ್ಯಾಯಯುತವಾಗಿ ಅವರಿಗೆ ಬರುವ ಹಣವ್ನನು ಬೇರೆಡೆ ತಿರುಗಿಸಿ, ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಕಟ್ಟಿಸಲು ಹೊರಟಿರುವುದು ಘೋರ ಅನ್ಯಾಯ ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿನ 7 ಲಕ್ಷ ಮನೆ ವಾಪಸ್ ಪಡೆಯುವ ಹೇಳಿಕೆಯನ್ನು ಸಚಿವ ಸೋಮಣ್ಣ ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಅಡಗಿದೆ, 3 ಲಕ್ಷ ಕ್ರಮ ಬದ್ಧವಾಗಿರುವ ಮನೆಗಳಿದ್ದಾವೆ, ಎಲ್ಲಾ ನಿಯಮಾವಳಿ ಮುಗಿಸಿವೆ. ಉಳಿದವು ಮಂಜೂರಾತಿ ಹಂತದಲ್ಲಿವೆ. ಈಗ ಬೇರೆಡೆ ಮನೆ ಕಟ್ಟುತ್ತೇವೆ, ಬೇರೆಯವರಿಗೆ ಕೊಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಖಂಡ್ರೆ ಕಿಡಿಕಾರಿದ್ರು.

ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಹೈಕಮಾಂಡ್ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ, ಯಾರಿಗೆ‌ ಕೊಟ್ಟರೆ ಪಕ್ಷ ಬಲವರ್ಧನೆಯಾಗಲಿದೆ ಎನ್ನುವುದನ್ನು ತಿಳಿದು ಹೈಕಮಾಂಡ್ ನಿರ್ಧರಿಸಲಿದೆ. ಆದರೆ ಈ ವಿಚಾರ ಸಂಬಂಧ ನಾನು ಹೈಕಮಾಂಡ್ ಭೇಟಿ ಮಾಡಲ್ಲ, ಮುಂದೆ ಅಗತ್ಯವಿದ್ದರೆ ಮಾತ್ರ ಭೇಟಿ ಮಾಡಲಿದ್ದೇನೆ ಎಂದರು.

ಮಂಗಳೂರು ಹಿಂಸಾಚಾರ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಆದರೆ ಘಟನೆಯ ಸತ್ಯಾಸತ್ಯತೆ ಬಹಿರಂಗವಾಗಲು ನ್ಯಾಯಾಂಗ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಬೇಕು ಎಂದು ಖಂಡ್ರೆ ಆಗ್ರಹಿಸಿದರು.

ಇನ್ನು, ಜ್ಯೋತಿ ನಿವಾಸ ಕಾಲೇಜಿಗೆ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಕ್ಕೆ ಗೃಹ ಸಚಿವರು ವಿರೋಧಿಸಿದ್ದು ಖಂಡನೀಯ. ಪ್ರತಿಯೊಂದನ್ನೂ ಕಾಮಾಲೆಯ ಕಣ್ಣನಿಂದ ನೋಡುತ್ತಾರೆ. ಕಾನೂನು ಸುವ್ಯವಸ್ಥೆ ಹದಗೆಡಲು ಬಿಜೆಪಿ ಸರ್ಕಾರವೇ ಕಾರಣವೆಂದು ವಾಗ್ದಾಳಿ ನಡೆಸಿದ್ರು.

Intro:

ಬೆಂಗಳೂರು: ಬಾಲ್ಕಿ ಪುರಸಭೆ ವ್ಯಾಪ್ತಿಯ ವಸತಿ ಯೋಜನೆಗಳಿಗೆ ಸೀಮಿತವಾಗಿ ತನಿಖೆಗೆ ವಸತಿ ಸಚಿವ ವಿ.ಸೋಮಣ್ಣ ಆದೇಶಿಸಿರವುದು ಬಿಜೆಪಿಯ ದ್ವೇಷದ ರಾಜಕೀಯಕ್ಕೆ ನಿದರ್ಶನವಾಗಿದ್ದು ಹಣ ಮಂಜೂರಾತಿ ತಡೆ ಹಿಡಿಯುವ ಬದಲು ಇಡೀ ರಾಜ್ಯದ ಕಳೆದ 10 ವರ್ಷದ ವಸತಿ ಯೋಜನೆಗಳ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ‌ನಡೆಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ವಸತಿ ಯೋಜನೆಗಳಿಗೆ
211 ಕೋಟಿ ಹಣ ವಸತಿ ಯೋಜನೆ ಕೊಡುತ್ತಿದ್ದೇವೆ ಎಂದು ಸೋಮಣ್ಣ ಹೇಳುತ್ತಾರೆ ಆದರೆ ಇದು ಕೇವಲ ಕಣ್ಣೊರೆಸುವ ತಂತ್ರ ಮಾತ್ರ ಹಾಲಿ ಯೋಜನೆಗಳಿಗೆ ಸಾವಿರದಿಂದ ಒಂದೂವರೆ ಸಾವಿರ ಕೋಟಿ ಹಣ ಬೇಕು, ಆದರೆ ಕಳದ ಎಂಟು ತಿಂಗಳುನಿಂದ ಹಣ ಬಿಡುಗಡೆ ಆಗಿಲ್ಲ.ಸರ್ಕಾರವೇ ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ರೀತಿ ವರ್ತಿಸುತ್ತಿದೆ ನ್ಯಾಯಯುತವಾಗಿ ಅವರಿಗೆ ಬರುವ ಹಣ ಬೇರೆಡೆ ತಿರುಗಿಸಿ, ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಕಟ್ಟಿಸಲು ಹೊರಟಿರುವುದು ಘೋರ ಅನ್ಯಾಯ, ಇದರ ವಿರುದ್ಧ ದನಿ ಎತ್ತಿದರೆ ಸೇಡಿನ ರಾಜಕೀಯ ಮಾಡಲಾಗುತ್ತದೆ.ನಾನು ಸುದ್ದಿಗೋಷ್ಟಿ ನಡೆಸಿ ಇದನ್ನೆಲ್ಲಾ ಹೇಳುತ್ತಿದ್ದಂತೆ ರಾಜೀವ್ ಗಾಂಧಿ ವಸತಿ‌ ನಿಗಮದ ಹತ್ತು ಅಧಿಕಾರಿಗಳ ತಂಡವನ್ನು ನಮ್ಮ ಪುರಸಭೆಗೆ ವಿತರಣೆಯಾಗಿದ್ದ ಮನೆಗಳ ತನಿಖೆಗೆ ತರಾತುರಿಯಲ್ಲಿ ಕಳಿಸಿದ್ದಾರೆ ಕೇವಲ ಒಂದೇ ಒಂದು ಪುರಸಭೆಯ ತನಿಖೆ ಏಕೆ? 224 ಕ್ಷೇತ್ರಗಳಿವೆ ಎಲ್ಲಾ ಕಡೆ ಮಾಡಬೇಕಿತ್ತು ಆದರೆ ಹಣ ತಡೆ ಹಿಡಿಯಲು ಕುಂಟು ನೆಪ ಬೇಕು ಎನ್ನುವ ಕಾರಣಕ್ಕೆ‌ ಇದನ್ನು ಮಾಡುತ್ತಿದ್ದಾರೆ. ತನಿಖೆಯ ನೆಪದಲ್ಲಿ ಹಣ ಬಿಡುಗಡೆ ಸ್ಥಗಿತ ಮಾಡುತ್ತಿರವುದು ಜನ ವಿರೋಧಿ ಕೃತ್ಯ, ತನಿಖೆ ಆಗಲು ನನ್ನ ವಿರೋಧವಿಲ್ಲ ಆದರೆ, ಇಡೀ‌ರಾಜ್ಯದಲ್ಲಿ ಕಳೆದ 10 ವರ್ಷಕ್ಕೆ ಅನ್ವಯವಾಗುವಂತೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

ಹಿಂದಿನ ಸರ್ಕಾರದ ವೇಳೆಯಲ್ಲಿನ 7 ಲಕ್ಷ ಮನೆ ವಾಪಸ್ ಪಡೆಯುವ ಹೇಳಿಕೆ ಸೋಮಣ್ಣ ನೀಡಿದ್ದಾರೆ ಇದರ ಹಿಂದೆ ರಾಜಕೀಯ ಅಡಗಿದೆ, 3 ಲಕ್ಷ ಕ್ರಮ ಬದ್ದವಾಗಿರುವ ಮನೆಗಳಿದ್ದಾವೆ, ಎಲ್ಲಾ ನಿಯಮಾವಳಿ ಮುಗಿಸಿವೆ ಉಳಿದವು ಮಂಜೂರಾತಿ ಹಂತದಲ್ಲಿವೆ ಈಗ ಬೇರೆ ಕಡೆ ಮನೆ ಕಟ್ಟುತ್ತವೆ, ಬೇರೆಯವರಿಗೆ ಕೊಡುತ್ತೇವೆ ಎನ್ನುವುದು ಸರಿಯಲ್ಲ.ಹಿಂದೆ ಬಿಜೆಪಿ ಸರ್ಕಾರದ ವೇಳೆ ಇವರೇ ವಸತಿ ಸಚಿವರಿದ್ದರು ಆಗಲೂ ನಂತರ ಬಂದ ನಮ್ಮ‌ ಸರ್ಕಾರ ಅವರ ಯೋಜನೆಗ ಹಣ ನೀಡಿ ಯೋಜನೆ ಪೂರ್ಣ ಆಗುವಂತೆ ಮಾಡಿದ್ದೆವು ಆದರೆ ಇವರು ತಡೆ ಹಿಡಿದು ದ್ವೇಶದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಸಂಬಂಧ ಹೈಕಮಾಂಡ್ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ, ಯಾರಿಗೆ‌ ಕೊಟ್ಟರೆ ಪಕ್ಷ ಬಲವರ್ಧನೆಯಾಗಲಿದೆ ಎನ್ನುವುದನ್ನು ತಿಳಿದು ಹೈಕಮಾಂಡ್ ನಿರ್ಧರಿಸಲಿದೆ ಆದರೆ ಈ ವಿಚಾರ ಸಂಬಂಧ ನಾನು ಹೈಕಮಾಂಡ್ ಭೇಟಿ ಮಾಡಲ್ಲ, ಮುಂದೆ ಅಗತ್ಯವಿದ್ದರೆ ಮಾತ್ರ ಭೇಟಿ ಮಾಡಲಿದ್ದೇನೆ ಎಂದರು.

ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ ಆದರೆ ಘಟನೆತ ಸತ್ಯಾಸತ್ಯತೆ ಬಹಿರಂಗವಾಗಲು ಗೋಲಿಬಾರ್ ಘಟನೆ ಕುರಿತು ನ್ಯಾಯಾಂಗ ತನಿಖೆ ಆಗಬೇಕು, ತಪ್ಪಿತಸ್ಥ ವಿರುದ್ಧ ಕ್ರಮ ಆಗಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದರು.

ಜ್ಯೋತಿ ನಿವಾಸ ಮಹಿಳಾ ಕಾಲೇಜಿನಲ್ಲಿ ಬಿಜೆಪಿ ಯವರು ಸಿಎಎ ಒರ ಒತ್ತಾಯಪೂರ್ವಕವಾಗಿ ಸಹಿ ಸಂಗ್ರಹ ಮಾಡಲ ಹೋಗಿ‌ ಹೆದರಿಸಿ, ಬೆದರಿಸಿ ದಬ್ಬಾಳಿಕೆ ನಡೆಸಿ ಧಮ್ಕಿಕಿ ಹಾಕಿದ್ದು ಖಂಡನೀಯ.ವಿದ್ಯಾ ಸಂಸ್ಥಗಳು ಜ್ಞಾನಾರ್ಜನೆಯ ತಾಣ ಆಗಬೇಕೇ ಹೊರತು ,ಕ್ಷುಲ್ಲಕ ರಾಜಕೀಯ ಅಡ್ಡೆಗಳಲ್ಲ, ಬಿಜೆಪಿ ಸರ್ಕಾರಗಳು ಕ್ಷುಲ್ಲಕ‌ ರಾಜಕೀಯ ತಾಣಗಳನ್ನಾಗಿ ಮಾಡಿ, ಕೋಮ‌ಸಾಮರಸ್ಯ ಕೆಡಿಸಿ‌ಜಾತಿ ಜಾತಿಗಳ ನಡುವೆ ಸಂಘರ್ಷ ತಂದಯ, ವಿದ್ಯಾರ್ಥಿಗಳ‌ ದನಿ ಧಮನ ಮಾಡಲು ಹೊರಟಿದ್ದಾರೆ.ಜಾಮಿಯಾ ವಿವಿ ಘಟನೆಗೆ ಕೂಡಲೇ ಕ್ರಮಕ್ಕೆ ಮುಂದಾದ ಸರ್ಕಾರ ಜೆ ಎನ್ ಯು ವಿವಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದೇ ಇದಕ್ಕೆ ನಿದರ್ಶನ ಎಂದರು.

ಜ್ಯೋತಿ ನಿವಾಸ ಕಾಲೇಜಿಗೆ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಕ್ಕೆ ಗೃಹ ಸಚಿವರು ವಿರೋಧಿಸಿದ್ದು ಖಂಡಬೀಯ, ಪ್ರತಿಯೊಂದನ್ನೂ ಕಾಮಾಲರ ಕಣ್ಣನಿಂದ ನೋಡುತ್ತಾರೆ, ಕಾನೂನು ಸುವ್ಯವಸ್ಥೆ ಹದಗಡೆದಲು ಬಿಜೆಪಿ ಸರ್ಕಾರಗಳೇ ಕಾರಣ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.