ETV Bharat / state

ಸಾವರ್ಕರ್ ಜಯಂತಿ: ನಮನ ಸಲ್ಲಿಸಿದ ರಾಜಕೀಯ ಗಣ್ಯರು

ಸ್ವಾತಂತ್ರ್ಯ ಹೋರಾಟಗಾರ, ಅಖಂಡ ದೇಶಪ್ರೇಮದ ಅಸ್ಮಿತೆಯ ಸಂಕೇತ, ಪ್ರಖರ ವಾಗ್ಮಿ, ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿಯಂದು ಅವರಿಗೆ ನಮಿಸೋಣ ಎಂದು ಸಿಎಂ ಬಿಎಸ್​ವೈ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ಟ್ವೀಟ್​ ಮಾಡುವ ಮುಖಾಂತರ ಜಯಂತಿಯ ಶುಭಾಶಯ ತಿಳಿಸಿದ್ದಾರೆ.

The political elite who bowed to the Savarkar
ಸಾವರ್ಕರ್ ಜಯಂತಿ
author img

By

Published : May 28, 2020, 9:22 AM IST

ಬೆಂಗಳೂರು: ವೀರ ಸಾವರ್ಕರ್ ಜಯಂತಿಯ ದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು, ಸಚಿವರು ಸಾವರ್ಕರ್​ಗೆ ನಮನ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ, ಅಖಂಡ ದೇಶಪ್ರೇಮದ ಅಸ್ಮಿತೆಯ ಸಂಕೇತ, ಪ್ರಖರ ವಾಗ್ಮಿ, ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿಯಂದು ಅವರಿಗೆ ನಮಿಸೋಣ ಎಂದು ಸಿಎಂ ಬಿಎಸ್​ವೈ ಟ್ವೀಟ್ ಮಾಡಿದ್ದಾರೆ. ‌

  • ಅಸಾಧಾರಣ ದೇಶಭಕ್ತ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಅದ್ವಿತೀಯ ಚಿಂತಕ, ಪ್ರಖರ ರಾಷ್ಟ್ರವಾದಿ ನಾಯಕ, ಶ್ರೀ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜಯಂತಿಯಂದು ಅವರಿಗೆ ನನ್ನ ಅನಂತ ಪ್ರಣಾಮಗಳು. ಇಂದಿಗೂ ಕೋಟ್ಯಂತರ ಜನರಿಗೆ ಸಶಕ್ತ ರಾಷ್ಟ್ರನಿರ್ಮಾಣದತ್ತ ತಮ್ಮನ್ನು ತೊಡಗಿಸಿಕೊಳ್ಳಲು ಸಾರ್ವಕರ್ ಹೆಸರು ಪ್ರೇರಣೆ ನೀಡುತ್ತಿದೆ. #VeerSavarkar pic.twitter.com/CmEzZtGIRX

    — B.S. Yediyurappa (@BSYBJP) May 28, 2020 " class="align-text-top noRightClick twitterSection" data=" ">

ಇಂದು ಬರಹಗಾರ, ಕವಿ,ಸಮಾಜ ಸುಧಾರಕ ವೀರ ಸಾವರ್ಕರ್ ಜಯಂತಿ. ಭಾರತವನ್ನು ಸ್ವತಂತ್ರಗೊಳಿಸಲು ಸಾಕಷ್ಟು ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಬರಲು‌ ಸಾವರ್ಕರ್ ಸ್ಪೂರ್ತಿಯಾಗಿದ್ದರು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮಾಡಿದ್ದಾರೆ‌.

  • Remembering Veer Savarkar a prolific writer & poet and social reformer on his Jayanti. He inspired many youngsters to join freedom struggle by his work to free India from the clutches of imperialism. pic.twitter.com/phYYvo5lRf

    — Sadananda Gowda (@DVSadanandGowda) May 28, 2020 " class="align-text-top noRightClick twitterSection" data=" ">

ಆರೋಗ್ಯ ಸಚಿವ ಬಿ.ಶ್ರೀರಾಮುಲು ಕೂಡ ಟ್ವೀಟ್ ಮಾಡಿದ್ದು, ಬ್ರಿಟಿಷರು ತಮ್ಮ ಸರ್ಕಾರಕ್ಕೆ ಯಾರಿಂದ ಅತಿ ಹೆಚ್ಚು ಅಪಾಯ ಇತ್ತೋ. ಅವರನ್ನು ಆಯ್ದು ಅಂಡಮಾನ್ ಜೈಲಿನ ಕಾಲಾಪಾನಿ ಶಿಕ್ಷೆಗೆ ಒಳಪಡಿಸುತ್ತಿದ್ದರು. ಅಂಥ ಶಿಕ್ಷೆಗೊಳಗಾದವರು ಸ್ವಾತಂತ್ರ್ಯವೀರ ಸಾವರ್ಕರ್. ಅವರ ದೇಶಭಕ್ತಿ ಕೇವಲ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಾತ್ರ ಅಲ್ಲ, ಹಲವು ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟದಲ್ಲಿ ಎದ್ದು ಕಾಣುತ್ತಿತ್ತು. ಅಂಥಾ ಮಹಾತ್ಮನ ಜನ್ಮದಿನವಾದ ಇಂದು ಸಾವರ್ಕರ್ ನಮ್ಮ ದೇಶಕ್ಕೆ ಮತ್ತೊಮ್ಮೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ‌.

  • ಭಾರತವನ್ನು ದಾಸ್ಯದ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಕಗ್ಗತ್ತಲ ಕಾರಾಗೃಹ ವಾಸವನ್ನು ಕೆಚ್ಚೆದೆಯಿಂದ ಎದುರಿಸಿದ ವೀರಪುತ್ರ ಸಾವರ್ಕರ್! ತಮ್ಮ ರಾಷ್ಟ್ರೀಯವಾದಿ ಚಿಂತನೆಗಳಿಂದ ಬ್ರಿಟೀಶರ ಎದೆ ನಡುಗಿಸಿದ್ದ ವೀರ ಸಾವರ್ಕರ್ ರ ಜಯಂತಿಯಂದು ಅವರಿಗೆ ಕೋಟಿ ಕೋಟಿ ನಮನಗಳು.

    My tributes to fearless freedom fighter #VeerSavarkar pic.twitter.com/gGG8qlN1Q5

    — Dr Sudhakar K (@mla_sudhakar) May 28, 2020 " class="align-text-top noRightClick twitterSection" data=" ">

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಭಾರತವನ್ನು ದಾಸ್ಯದ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಕಗ್ಗತ್ತಲ ಕಾರಾಗೃಹ ವಾಸವನ್ನು ಕೆಚ್ಚೆದೆಯಿಂದ ಎದುರಿಸಿದ ವೀರಪುತ್ರ ಸಾವರ್ಕರ್! ತಮ್ಮ ರಾಷ್ಟ್ರೀಯವಾದಿ ಚಿಂತನೆಗಳಿಂದ ಬ್ರಿಟೀಶರ ಎದೆ ನಡುಗಿಸಿದ್ದ ವೀರ ಸಾವರ್ಕರ್ ರ ಜಯಂತಿಯಂದು ಅವರಿಗೆ ಕೋಟಿ ಕೋಟಿ ನಮನಗಳು‌ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.