ETV Bharat / state

ಹೊರಟಿದ್ದು ಕೊಲೆ ಪ್ರಕರಣ ಬೆನ್ನತ್ತಿ.. ಬಲೆಗೆ ಬಿತ್ತು ಬೃಹತ್​ ಕಾರು ಕಳ್ಳತನ ಮಾರಾಟ ಜಾಲ..

ಚಾಲಕ ಅಬ್ದುಲ್​ಗೂ ಕದ್ದ ಹಣದಲ್ಲಿ ಷೇರು ಕೊಡುವುದಾಗಿ ನಂಬಿಸಿ ₹75 ಲಕ್ಷ ಹಣ ದೋಚಿದ್ದರು. ದರೋಡೆ ಬಳಿಕ ಕುಣಿಗಲ್ ಬಳಿ ಐವರು ಸೇರಿ ಹಣವಿರುವ ಬಾಕ್ಸ್ ಒಡೆದು ತೆಗೆದುಕೊಂಡಿದ್ದರು. ದಾರಿ ಮಧ್ಯೆ ಅಬ್ದುಲ್ ತಾನು ವಾಪಸ್​ ಹೋಗುತ್ತೇನೆ ಹಣ ಬೇಡ ಎಂದಿದ್ದ. ಇದರಿಂದ‌ ರೊಚ್ಚಿಗೆದ್ದ ಆರೋಪಿಗಳು ಪ್ಲ್ಯಾನ್ ಮಾಡಿ ಆತನನ್ನು ಕಾರಿನಲ್ಲೇ ಕೊಲೆ ಮಾಡಿದ್ದರು. ಕೊಲೆ ಮಾಡಿದ ಬಳಿಕ ಸಕಲೇಶಪುರ ಬಳಿಯ ಫಾರೆಸ್ಟ್ ಏರಿಯಾದಲ್ಲಿ ಬಿಸಾಕಿ ಹೋಗಿದ್ದರು..

kamal panth
ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​
author img

By

Published : Jul 14, 2021, 7:27 PM IST

ಬೆಂಗಳೂರು :‌ ಮೂರು ವರ್ಷದ ಹಿಂದೆ ನಡೆದಿದ್ದ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣ ಬೇಧಿಸಿದ್ದ ಗೋವಿಂದಪುರ ಠಾಣೆ ಪೊಲೀಸರಿಗೆ ಇದೇ ಕೇಸ್​ನಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಜಪ್ತಿ ಮಾಡಲು‌ ಮುಂದಾಗಿದ್ದಾಗ ಮತ್ತೊಂದು ಕಾರು ಕಳ್ಳತನ ಮಾರಾಟ ಜಾಲ ಬಯಲಿಗೆ ಬಂದಿದೆ.

ದುಬಾರಿ ಬೆಲೆಯ ಕಾರುಗಳನ್ನು ಕದ್ದು ನೋಂದಣಿ ಸಂಖ್ಯೆ ಬದಲಿಸಿ ಟ್ಯಾಂಪರಿಂಗ್ ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಗೋವಿಂದಪುರ‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1.80 ಕೋಟಿ ಮೌಲ್ಯದ ಎರಡು ಟೆಂಪೋ‌ ಟ್ರಾವೆಲರ್, ಮಹಿಂದ್ರಾ ಹಾಗೂ‌ ಹೊಂಡಾ ಸೇರಿದಂತೆ ವಿವಿಧ ಕಂಪನಿಗಳ 20 ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ : 2018ರಲ್ಲಿ ಎಕ್ಸಿಸ್ ಬ್ಯಾಂಕ್ ಎಟಿಎಂ ಹಣ ದರೋಡೆ ಮಾಡಲಾಗಿತ್ತು. ಹಣ ತುಂಬಲು ಗನ್ ಮ್ಯಾನ್ ಹಾಗೂ ಕಸ್ಟೋಡಿಯನ್ ಎಟಿಎಂ ಒಳಗೆ ಹೋಗಿದ್ದರು. ಈ ವೇಳೆ ಡ್ರೈವರ್ ಅಬ್ದುಲ್ ಶಾಹಿದ್‌ನನ್ನು ಪುಸಲಾಯಿಸಿ ತಮ್ಮ ಕಾರಿನೊಳಗೆ ಕೂರಿಸಿಕೊಂಡಿದ್ದ ಬಂಧಿತ ಆರೋಪಿಗಳಾದ ಮಂಡ್ಯ ಮೂಲದ ಪ್ರಸನ್ನ, ಕುಮಾರ್, ಮಧು ಹಾಗೂ ಮಹೇಶ್ ಎಂಬುವರು ಹಣ ದೋಚಿ ಎಸ್ಕೇಪ್ ಆಗಿದ್ದರು.

ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಮಾಹಿತಿ..

ಚಾಲಕ ಅಬ್ದುಲ್​ಗೂ ಕದ್ದ ಹಣದಲ್ಲಿ ಷೇರು ಕೊಡುವುದಾಗಿ ನಂಬಿಸಿ ₹75 ಲಕ್ಷ ಹಣ ದೋಚಿದ್ದರು. ದರೋಡೆ ಬಳಿಕ ಕುಣಿಗಲ್ ಬಳಿ ಐವರು ಸೇರಿ ಹಣವಿರುವ ಬಾಕ್ಸ್ ಒಡೆದು ತೆಗೆದುಕೊಂಡಿದ್ದರು. ದಾರಿ ಮಧ್ಯೆ ಅಬ್ದುಲ್ ತಾನು ವಾಪಸ್​ ಹೋಗುತ್ತೇನೆ ಹಣ ಬೇಡ ಎಂದಿದ್ದ. ಇದರಿಂದ‌ ರೊಚ್ಚಿಗೆದ್ದ ಆರೋಪಿಗಳು ಪ್ಲ್ಯಾನ್ ಮಾಡಿ ಆತನನ್ನು ಕಾರಿನಲ್ಲೇ ಕೊಲೆ ಮಾಡಿದ್ದರು. ಕೊಲೆ ಮಾಡಿದ ಬಳಿಕ ಸಕಲೇಶಪುರ ಬಳಿಯ ಫಾರೆಸ್ಟ್ ಏರಿಯಾದಲ್ಲಿ ಬಿಸಾಕಿ ಹೋಗಿದ್ದರು.

ಈ ಸಂಬಂಧ‌ ಗೋವಿಂದಪುರ‌ ಪೊಲೀಸರಿಗೆ ಮೂರು ವರ್ಷದ ಹಿಂದೆ ಪ್ರಕರಣ ಹಸ್ತಾಂತರವಾಗಿತ್ತು‌.‌ ಈ‌ ಪ್ರಕರಣದ ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿತ್ತು.‌ ಇದೀಗ ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ‌.

ವಾಹನ ಜಪ್ತಿಗೆ ಮುಂದಾದ ಪೊಲೀಸರಿಗೆ ಕಾರು ಕಳ್ಳತನ ಜಾಲ ಬೆಳಕಿಗೆ

ಇತ್ತೀಚಿಗೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದ ಗೋವಿಂದಪುರ ಠಾಣಾ ಪೊಲೀಸರು ಕೃತ್ಯಕ್ಕೆ ಬಳಸಿದ್ದ ವಾಹನಕ್ಕಾಗಿ ಹುಡುಕಾಡುವಾಗ ಬೃಹತ್ ಕಳ್ಳತನ ಬಯಲಿಗೆಳೆದಿದ್ದಾರೆ. ವಾಹನ ಕಳ್ಳತನ‌ ಪ್ರಕರಣವೊಂದರ ಆರೋಪಿ ನೀಡಿದ ಸುಳಿವಿನ ಮೇರೆಗೆ ಅನುಮಾನದ ಆಧಾರದಲ್ಲಿ ಹೊಸೂರಿನ ಶಬ್ಬೀರ್ ಖಾನ್ ಎಂಬಾತನನ್ನ ವಶಕ್ಕೆ‌ ಪಡೆದಿದ್ದರು.

ಈ ವೇಳೆ ಸಮರ್ಪಕ ಮಾಹಿತಿ ನೀಡದಿದ್ದಾಗ ಶಬ್ಬೀರ್ ವಿಚಾರಣೆ ತೀವ್ರಗೊಳಿಸಿದ್ದರು. ಸ್ನೇಹಿತರೊಂದಿಗೆ ಸೇರಿ ಕಾರು ಕಳ್ಳತನದಲ್ಲಿ ಭಾಗಿಯಾಗಿರುವುದನ್ನ ಶಬ್ಬೀರ್ ಬಾಯ್ಬಿಟ್ಟಿದ್ದ.‌ ಈತನನ್ನು ಬಂಧಿಸಿ 1.80 ಕೋಟಿ ಮೌಲ್ಯದ 20 ಕಾರುಗಳನ್ನ ಜಪ್ತಿ ಮಾಡಿಕೊಳ್ಳುವಲ್ಲಿ ಪೊಲೀಸರು ಸಫಲಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಕಳ್ಳತನ, ತಮಿಳುನಾಡಿನಲ್ಲಿ ಮಾರಾಟ

ಬಂಧಿತ ಆರೋಪಿ ಶಬ್ಬೀರ್ ಖಾನ್ ಜೊತೆ ತಲೆಮರೆಸಿಕೊಂಡಿರುವ ಸಹಚರರಾದ ಶರಣ್ ಹಾಗೂ ಶಕ್ತಿವೇಲುಗಾಗಿ ಪೊಲೀಸರು‌ ಶೋಧಕಾರ್ಯ ಮುಂದುವರೆಸಿದ್ದಾರೆ. ಸಾರ್ವಜನಿಕ‌ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳನ್ನು ತಮ್ಮ‌‌ ಕೈಚಳಕದಿಂದ ಕದ್ದು ಹೊಸೂರು ಬಳಿ‌ ಕರ್ನಾಟಕ ನೋಂದಣಿ‌ ಫಲಕ ಬದಲಾಯಿಸಿ ಆ ಜಾಗಕ್ಕೆ ತಮಿಳುನಾಡು ರಿಜಿಸ್ಟ್ರಾರ್ ನಂಬರ್‌ಗಳನ್ನು ಹಾಕಿ ಮಾರಾಟ ಮಾಡುತ್ತಿದ್ದರು. ಲಾಕ್​ಡೌನ್​ ಹಿನ್ನೆಲೆ ಹಣಕಾಸಿಗಾಗಿ ಕಾರು ಮಾರಾಟ ಮಾಡುತ್ತಿರುವುದಾಗಿ ಹೇಳಿ ಸಾರ್ವಜನಿಕರಿಗೆ ಯಾಮಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ : ಕೆಆರ್​ಎಸ್​ ಡ್ಯಾಂ ಬಿರುಕು ಹೇಳಿಕೆ: ಸುಮಲತಾ ವಿರುದ್ಧ ಸಚಿವ ಅಶೋಕ್​ ಸಿಡಿಮಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.