ಬೆಂಗಳೂರು: ಆತನಿಗೆ ಎರಡು ಮದುವೆಯಾಗಿದೆ. ಹಾಗಿದ್ರೂ ತನ್ನ ಇಳಿ ವಯಸ್ಸಲ್ಲೂ ಪರಸ್ತ್ರಿ ವ್ಯಾಮೋಹ, ವೇಶ್ಯೆಯರ ಸಹವಾಸದ ಚಪಲ ಅಂಟಿಸಿಕೊಂಡಿದ್ದ. ಇದೇ ಕಾರಣಕ್ಕೆ ಕಳ್ಳತನಕ್ಕಿಳಿದಿದ್ದ ವೃದ್ಧನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಮೇಶ್ ವೇಶ್ಯೆಯರ ಸಹವಾಸಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದು, ಸದ್ಯ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದವನಾದ ಈತ ಎರಡು ವಿವಾಹವಾಗಿದ್ದು, ಮೂರು ಮಂದಿ ಮಕ್ಕಳಿದ್ದಾರೆ.
ದುಶ್ಚಟಗಳಿಗೆ ಮನೆಯವರು ಈತನನ್ನು ಹೊರ ಹಾಕಿದ್ದರು. ಹೀಗೆ ಹೊರಹೋದವನು ತಮಿಳುನಾಡು ಸೇರಿ ಕಳ್ಳತನ ಮಾಡಿ ವೇಶ್ಯೆಯರ ಸಹವಾಸ ಮಾಡುತ್ತಿದ್ದ. ತಮಿಳುನಾಡಿನಲ್ಲಿ ಏಳು ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸಿದ್ದಾನೆ.
ಇತ್ತೀಚಿಗೆ ಜೈಲಿನಿಂದ ಬಿಡುಗಡೆ ಹೊಂದಿದವನು ಬೆಂಗಳೂರಿಗೆ ಬಂದು ಅದೇ ಕೆಲಸ ಮುಂದುವರಿಸಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನಿಂದ 300 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಕಡಬ: ರಾತ್ರಿ ಕಳ್ಳರ ಕೈಚಳಕ, ಪೊಲೀಸರಿಗೆ ತಲೆನೋವಾದ ಪ್ರಕರಣ