ETV Bharat / state

ಸಿಬಿಐ ಎದುರು ವಿಚಾರಣೆಗೆ ಹಾಜರಾಗಲಿರುವ ಡಿ. ಕೆ. ಶಿವಕುಮಾರ್​ ಹೇಳಿದ್ದೇನು?

ನಾನೇನು ಕ್ರಿಮಿನಲ್ ಅಪರಾಧ ಮಾಡಿದ್ದೇನಾ? ಅವರ ಬಳಿ ಪರ್ಮಿಶನ್ ಪಡೆಯೋಕೆ?. ಅವರಿಗೆ ನಾನೇ ಎಲ್ಲಾ ಸಹಕಾರ ಕೊಡ್ತಿದ್ದೇನೆ. ಸಹಕಾರ ಕೊಡದೆ ಓಡಿಹೋಗ್ತೇನಾ? ನಾನು ಅಂತವನಲ್ಲ, ಅವರು ವಿಚಾರಣೆಗೆ ಕರೆದಿದ್ದಾರೆ ನಾನು ಹೋಗ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಈ ರೀತಿ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
author img

By

Published : Nov 25, 2020, 2:18 PM IST

Updated : Nov 25, 2020, 3:41 PM IST

ಬೆಂಗಳೂರು: ನನಗೆ ಸಿಬಿಐನವರು ನೋಟಿಸ್ ಕೊಟ್ಟಿದ್ದರು. ಈ ಹಿನ್ನೆಲೆ ಇಂದು ವಿಚಾರಣೆಗೆ ತೆರಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 23 ರಂದೇ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಮಸ್ಕಿಗೆ ಹೋಗಿದ್ದರಿಂದ ಮನವಿ ಮಾಡಿದ್ದೆ. ಈಗ ನಾನು ಸಿಬಿಐ ಕಚೇರಿಗೆ ಹೋಗ್ತೇನೆ. ಅವರಿಗೆ ಕೊಟ್ಟ ಸಮಯದಲ್ಲೇ ನಾನು ಹೋಗ್ತೇನೆ. ವಿಚಾರಣೆಗೆ ಹಾಜರಾಗ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಾನೇನು ಕ್ರಿಮಿನಲ್ ಅಪರಾಧ ಮಾಡಿದ್ದೇನಾ? ಅವರ ಬಳಿ ಪರ್ಮಿಶನ್ ಪಡೆಯೋಕೆ? ಅವರಿಗೆ ನಾನೇ ಎಲ್ಲಾ ಸಹಕಾರ ಕೊಡ್ತಿದ್ದೇನೆ. ಸಹಕಾರ ಕೊಡದೆ ಓಡಿಹೋಗ್ತೇನಾ? ನಾನು ಅಂತವನಲ್ಲ, ಅವರ ವಿಚಾರಣೆಗೆ ಹೋಗ್ತೇನೆ. ಅವರ ಡ್ಯೂಟಿ ಅವರು ಮಾಡ್ತಾರೆ. 48 ದಿನ ಅವರ ಮ್ಯಾನ್ಯುವಲ್ ಓದಿದ್ದೇನೆ. ವಿಚಾರಣೆ ಹೇಗೆ ಏನು ಅನ್ನೋದನ್ನ ಓದಿದ್ದೇನೆ. ನಾನೊಬ್ಬನೇನಾ ಆಸ್ತಿ ಮಾಡಿರೋನು? ನನ್ನ ಮೇಲೆ ಯಾವುದಾದ್ರೂ ದೂರು ಇದ್ಯಾ?, ಯಾವುದಾದ್ರು ಲಂಚ ಹೊಡೆದಿದ್ದೇನಾ? ಐದು ವರ್ಷ ಪವರ್ ಮಿನಿಸ್ಟರ್ ಆಗಿದ್ದೆ. ಆಗೇನಾದ್ರೂ ನಾನು ಮಿಸ್ ಯೂಸ್ ಮಾಡಿದ್ದೇನಾ? ಬೇರೆ ಯಾರೂ ಏನೂ ಮಾಡಿಲ್ವಾ? ಎಂದು ಪ್ರಶ್ನಿಸಿದ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಮನವಿ:

ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡ ಡಿಕೆಶಿ, ಕಾರ್ಯಕರ್ತರು ಯಾರು ಸಿಬಿಐ ಕಚೇರಿಗೆ ಬರಬಾರದು. ಯಾರೋ ಏನೂ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವುದು ಬೇಡ. ಎಲ್ಲರಿಗೂ ನಾನು ರಿಕ್ವೆಸ್ಟ್ ಮಾಡ್ತೇನೆ. ಇದರಲ್ಲಿ ಮುಚ್ಚುವಂತದ್ದೂ ಏನೂ ಇಲ್ಲ. ಯಾರೂ ಆತಂಕ ಪಡುವುದೂ ಬೇಡ. ನಾನು ಪಕ್ಷ ಮತ್ತು ನಿಮಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ ಎಂದರು.

ಖಾಸಗಿ ಶಾಲೆಗಳ ಅನ್​​ಲೈನ್ ಶಿಕ್ಷಣಕ್ಕೆ ಕಠಿಣ ಕಾನೂನು ತರಬೇಕು: ಎಚ್. ವಿಶ್ವನಾಥ್

ಅಹ್ಮದ್​ ಪಟೇಲ್​ಗೆ ಸಂತಾಪ:

ಅಹ್ಮದ್ ಪಟೇಲ್ ನಿಧನ ನಮಗೆ ನೋವು ತಂದಿದೆ. ಬೆಳಗ್ಗೆ ಹೈದರಾಬಾದ್​​ನಲ್ಲಿದ್ದಾಗ ವಿಷಯ ತಿಳಿಯಿತು. ಪಕ್ಷ ನಿಷ್ಠರು, ಉತ್ತಮ ಮಾರ್ಗದರ್ಶಕರು. ಅವರು ಯಾವಾಗ ಬೇಕಾದರು ಅಧಿಕಾರ ಪಡೆಯಬಹುದಿತ್ತು. ಅವರು ಎಂದೂ ಮಂತ್ರಿ ಸ್ಥಾನ ಬಯಸಲಿಲ್ಲ. ಪಕ್ಷ ಸಂಘಟನೆ ಮಾಡಿಕೊಂಡೇ ಬಂದವರು. ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು. ಕಷ್ಟದ ದಿನಗಳಲ್ಲಿ ನನ್ನ ಪರ ನಿಂತವರು. ರಾಜ್ಯಸಭೆ ಚುನಾವಣೆ ವೇಳೆ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಅವರ ಶಾಸಕರನ್ನ ನನ್ನ ಜೊತೆ ಕಳಿಸಿದ್ದರು. ವಾರದ ಹಿಂದೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೆ. ಅವರ ಮಾರ್ಗದರ್ಶನ, ನೀಡಿದ ಧೈರ್ಯ ನಮಗೆ ಶಕ್ತಿ. ನನ್ನಂತಹ ಸಾವಿರಾರು ಮಂದಿಯನ್ನ ಗುರುತಿಸಿದವರು. ಅವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಅಂತ್ಯಕ್ರಿಯೆಗೆ ನಾನು‌ ಹೋಗ್ತೇನೆ ಎಂದು ಡಿ ಕೆ ಶಿವಕುಮಾರ ತಿಳಿಸಿದರು.

ಮನೆಯಿಂದ ತೆರಳಿದ ಡಿಕೆಶಿ:

ಸದಾಶಿವನಗರ ನಿವಾಸದಿಂದ ತೆರಳಿದ ಡಿಕೆಶಿ ನೇರವಾಗಿ ಎಂಎಲ್​​ಸಿ ಪ್ರಕಾಶ್ ರಾಥೋಡ್ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮೇಟಿ ಮೊಮ್ಮಗನ ವಿವಾಹ ಕಾರ್ಯಕ್ರಮಕ್ಕೆ ಭೇಟಿಕೊಟ್ಟು, ಅಲ್ಲಿಂದ ನೇರವಾಗಿ ಸಿಬಿಐ ಕಚೇರಿಗೆ ವಿಚಾರಣೆಗೆ ತೆರಳಲಿದ್ದಾರೆ.

Last Updated : Nov 25, 2020, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.