ETV Bharat / state

ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮಾರಕ: ಬಸವರಾಜ ಹೊರಟ್ಟಿ ಕಳವಳ

author img

By

Published : Dec 11, 2021, 5:51 PM IST

ನೂತನ ಪಿಂಚಣಿ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸಿದಲ್ಲಿ ಸರ್ಕಾರಿ ನೌಕರರಲ್ಲಿ ತಾರತಮ್ಯಗಳನ್ನು ಹೋಗಲಾಡಿಸಬಹುದು ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಬೆಂಗಳೂರು : ನೂತನ ಪಿಂಚಣಿ ಯೋಜನೆಯಂತಹ ಮಾರಕ ಯೋಜನೆಯನ್ನು ಕೇಂದ್ರ ಸರ್ಕಾರಿ ನೌಕರರಿಗೆ 2004, ಜನವರಿ 1 ರಿಂದ ಜಾರಿಗೆ ತಂದಿತ್ತು. ಇನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 2006 ಏಪ್ರಿಲ್ 1 ರಿಂದ ಸೇವೆಗೆ ಸೇರುವ ನೌಕರರುಗಳಿಗೆ ಅನ್ವಯವಾಗುವಂತ ಪಿಂಚಣಿ ರಹಿತ ಯೋಜನೆ ಜಾರಿಗೆ ತಂದಿರುವುದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.

ನೂತನ ಪಿಂಚಣಿ ಯೋಜನೆ(ಎನ್‌ಪಿ‌ಎಸ್)ರದ್ದುಗೊಳಿಸುವಂತೆ ಒತ್ತಾಯಿಸಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ನಗರದಲ್ಲಿ ಇಂದಿನಿಂದ ಎರಡು ದಿನಗಳ "ರಾಷ್ಟ್ರೀಯ ಕಾರ್ಯಾಗಾರ" ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಪಿಂಚಣಿ ವ್ಯವಸ್ಥೆಯಿಂದ ಆಗಬಹುದಾದ ಅನಾನುಕೂಲಗಳು ಮತ್ತು ಈ ಯೋಜನೆಯಲ್ಲಿ ಮಾರ್ಪಾಡು/ಬದಲಾವಣೆ ಮಾಡಲು ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸಲು ಏಳು ಜನ ಉನ್ನತ ಅಧಿಕಾರಿಗಳ ಸಮಿತಿಯನ್ನು 2018 ರಲ್ಲೇ ರಾಜ್ಯ ಸರ್ಕಾರ ರಚಿಸಿದೆ.

ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮಾರಕ

ಅದರ ಸಾಧಕ - ಬಾದಕಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಸರ್ಕಾರದ ಆದೇಶವಿದ್ದರೂ ಇಲ್ಲಿಯವರೆಗೂ ಈ ಸಮಿತಿಯಿಂದ ನಿಯಮಿತವಾಗಿ ಸಭೆ ನಡೆಸದೇ ಇರುವುದು ಅತ್ಯಂತ ದೌರ್ಭಾಗ್ಯ ಮತ್ತು ಇದು ಹೊಸ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ಬಗ್ಗೆ ತೋರಿದ ಮಲತಾಯಿ ಧೋರಣೆಯಂತೆ ಭಾಸವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ಸಮಿತಿಯು ಬರೀ ಕಾಲ ಹರಣ ಮಾಡದೇ ಸರ್ಕಾರವು ತುರ್ತಾಗಿ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ಸಲುವಾಗಿ ಸಾಧಕ - ಬಾದಕಗಳನ್ನು ಅಧ್ಯಯನ ಮಾಡಿಸಿ ಸರ್ಕಾರಿ ನೌಕರರ ಮತ್ತು ಅವರ ಕುಟುಂಬದವರ ಒಳತಿಗಾಗಿ ಒಂದು ಸ್ಪಷ್ಟ ವರದಿ ಪಡೆದು ಅದನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನ ಮಾಡುವುದರ ಮೂಲಕ ಸರ್ಕಾರಿ ನೌಕರರ ಮಾನಸಿಕ ಸ್ಥೈರ್ಯ ಹೆಚ್ಚಿಸಿ ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದರು.

ಹೊಸ ಪಿಂಚಣಿ ಯೋಜನೆ ತಾರತಮ್ಯದಿಂದ ಕೂಡಿದೆ

ಹೊಸ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಮಾರಕವಾಗಿ ಪರಿಗಣಿತವಾಗಿರುವುದಕ್ಕೆ ಈ ಕೆಳಕಂಡ ಅಂಶಗಳು ಸಾಕ್ಷಿಯಾಗಿರುತ್ತವೆ. ಹೊಸ ಪಿಂಚಣಿ ಯೋಜನೆ ಸರ್ಕಾರಿ ನೌಕರರಲ್ಲಿ ಎರಡು ಗುಂಪುಗಳನ್ನಾಗಿ ವಿಂಗಡಿಸಿ (ಹಳೆ ಪಿಂಚಣಿ ಪಡೆಯುವ ನೌಕರರು ಮತ್ತು ಹೊಸ ಪಿಂಚಣಿ ಪಡೆಯುವ ನೌಕರರು) ತಾರತಮ್ಯಕ್ಕೆ ಕಾರಣವಾಗಿರುತ್ತದೆ.

ಹೊಸ ಪಿಂಚಣಿ ಯೋಜನೆಯಲ್ಲಿ ನಿಶ್ಚಿತ ಕುಟುಂಬ ಪಿಂಚಣಿಗೆ ಅವಕಾಶ ಇಲ್ಲದೇ ಇರುವುದು ಅಭದ್ರತೆ ಸೃಷ್ಟಿಸುತ್ತದೆ. ಹೊಸ ಪಿಂಚಣಿ ಯೋಜನೆ ಮಾರುಕಟ್ಟೆ ಆಧಾರಿತವಾಗಿರುವುದರಿಂದ ಪಿಂಚಣಿ ಪಡೆಯುವುದು ಅನಿಶ್ಚಿತೆಯಾಗಿ ನೌಕರರಲ್ಲಿ ಆತಂಕಕ್ಕೆ ಕಾರಣವಾಗಿರುತ್ತದೆ ಎಂದು ಸಭಾಪತಿಗಳು ಕಳವಳ ವ್ಯಕ್ತಪಡಿಸಿದರು.

ಶೇ 10 ರಷ್ಟು ವಂತಿಕೆ ಕಡಿತ, ಕಡಿಮೆ ಸಂಬಳದ ಆತಂಕ

ಹೊಸ ಪಿಂಚಣಿ ಯೋಜನೆಯಲ್ಲಿ ನೌಕರರ ಸಂಬಳದಿಂದ ಶೇ. 10 ರಂತ ವಂತಿಕೆ ಕಡಿತ ಮಾಡುವುದರಿಂದ ಸಂಬಳ ಕಡಿಮೆಯಾಗಿ ಅದೇ ತೆರನಾದ, ಸಮಾನ ಕೆಲಸ ನಿರ್ವಹಿಸುತ್ತಿರುವ ಹಳೆ ಪಿಂಚಣಿ ಯೋಜನೆ ನೌಕರರಿಗಿಂತ ಕಡಿಮೆ ಸಂಬಳ ಪಡೆಯುವುದರಿಂದ ಸಮಾನ ಕೆಲಸಕ್ಕೆ ಅಸಮಾನ ಸಂಬಳ ನೀಡಿದಂತಾಗಿ Treating equals unequally ಎಂಬ ತಾರತಮ್ಯಕ್ಕೆ ಕಾರಣವಾಗುತ್ತದೆ.

ಹೊಸ ಪಿಂಚಣಿ ಯೋಜನೆಯಲ್ಲಿ GPF ನಲ್ಲಿದ್ದಂತೆ ನೌಕರರು ತಮ್ಮ ಕೌಟುಂಬಿಕ ಅಗತ್ಯತೆಗಳಿಗೆ ಅನುಗುಣವಾಗಿ ಹಣ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಇನ್ನಷ್ಟು ಸಾಲಗಾರರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. 2004 ರಿಂದ 2021 ರ ವರೆಗೆ ನೌಕರರ ವಂತಿಕೆಯನ್ನು ಯಾವ ಹೂಡಿಕೆ ಇಲ್ಲದೇ ಹಾಗೂ ಬಡ್ಡಿ ಇಲ್ಲದೇ ಸರ್ಕಾರಗಳು ತಮ್ಮ ಖಾತೆಗಳಲ್ಲಿ ಇಟ್ಟುಕೊಂಡಿರುವುದು ನೌಕರರಿಗೆ ಮಾಡಿರುವ ಅನ್ಯಾಯ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಸೂಚ್ಯಂಕದ ಅನುಗುಣವಾಗಿ ನೀಡಲಾಗುತ್ತಿರುವ ತುಟ್ಟಿಭತ್ಯೆ (DA) ಪ್ರಯೋಜನವನ್ನು ಹೊಸ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಪಿಂಚಣಿಯೊಂದಿಗೆ ನೀಡದೇ ಇರುವುದರಿಂದ ತಾರತಮ್ಯ ಮಾಡಿದಂತಾಗುತ್ತದೆ.

ಪಿಂಚಣಿ ಪರಿಷ್ಕರಣೆಗಿಲ್ಲ ಅವಕಾಶ

ವೇತನ ಆಯೋಗಗಳ ಪಿಂಚಣಿ ಪರಿಷ್ಕರಿಸಿದಂತೆ ಹೊಸ ಪಿಂಚಣಿಯಡಿ ಯಾವುದೇ ಪರಿಷ್ಕರಣೆಗೆ ಅವಕಾಶ ಇಲ್ಲದೇ ಇರುವುದು ತಾರತಮ್ಯಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹೊಸ ಪಿಂಚಣಿ ಯೋಜನೆಗೆ ಒಳಪಡುವ ನೌಕರರು ಅಕಾಲಿಕ ಮರಣ ಹೊಂದಿದ ಸಂದರ್ಭಗಳಲ್ಲಿ ಅವರ ಅವಲಂಭಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಯಾವುದೇ ಅಂಶಗಳನ್ನು ಈ ನಿಯಮಗಳು ಒಳಗೊಂಡಿರುವುದಿಲ್ಲ ಎಂದರು.

ನೂತನ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಮಾರಕವಾಗಿದೆ. ಈ ಯೋಜನೆಯಡಿ ನೌಕರನು ತನ್ನ 60 ವರ್ಷ ಮೀರುವ ಮುನ್ನ ಪೂರ್ಣ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಹೂಡಿಕೆ ಹಿಂತೆಗೆದುಕೊಳ್ಳುವ ಸೌಲಭ್ಯವು ಕೇವಲ ಅವಕಾಶಗಳಿಗೆ ಮಾತ್ರ 3 ಸೀಮಿತವಾಗಿರುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದಾತನ ವಂತಿಗೆಯನ್ನು ಈ ಯೋಜನೆಯಡಿ ಹೂಡಿಕೆ ಎಂದು ಪರಿಗಣಿಸಲಾಗದು.

ಅಂತಿಮ ಹಿಂತೆಗೆದುಕೊಳ್ಳುವಿಕೆಯ ಮೊತ್ತದಲ್ಲಿ ಶೇ. 60 ರಷ್ಟು ಹೂಡಿಕೆಯಷ್ಟು ತೆರಿಗೆಯನ್ನು ಭರಿಸಬೇಕಾಗುವುದು. ಆದರೆ, ಉಳಿದ ಹೂಡಿಕೆಗಳಾದ ಜಿ.ಪಿ.ಎಫ್ (G.P.F) ಇ.ಪಿ.ಎಫ್.ಗಳು ಯಾವುದೇ ತೆರಿಗೆಗೆ ಒಳಪಡದೇ ಇರುವುದರಿಂದ ಸರ್ಕಾರಿ ನೌಕರರಿಗೆ ಮಾರಕವಾಗಿದೆ ಎಂದು ಸಭಾಪತಿಗಳು ಹೇಳಿದರು.

ನೂತನ ಪಿಂಚಣಿಯನ್ನು ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಸ್ಥಾಪಿಸಿದಲ್ಲಿ ಸರ್ಕಾರಿ ನೌಕರರಲ್ಲಿ ತಾರತಮ್ಯಗಳನ್ನು ಹೋಗಲಾಡಿಸಬಹುದು ಎಂದು ಅಭಿಪ್ರಾಯಪಟ್ಟರು. ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ, ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಷ್ ಲಂಬಾ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.