ETV Bharat / state

ನೆರೆ ಬಂದ್ರೂ ಕರ್ನಾಟಕ ಕಡೆಗಣಿಸಿದ ಮೋದಿ.. ಪರಿಷತ್​ ಕಲಾಪದಲ್ಲಿ ಕೇಂದ್ರದ ವಿರುದ್ಧ ಕಿಡಿ.. - karnataka politics

ವಿಧಾನ ಪರಿಷತ್ ಕಲಾಪದಲ್ಲಿ ನೆರೆ ಪರಿಹಾರ ಕುರಿತು ಗಂಭೀರ ಚರ್ಚೆ ನಡೆಯಿತು. ನೆರೆಹಾನಿ ಪರಿಹಾರ ವಿಚಾರದಲ್ಲಿ ಕರ್ನಾಟಕವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ವಿಧಾನ ಪರಿಷತ್​ನಲ್ಲಿ ಆಕ್ರೋಶ ವ್ಯಕ್ತವಾಯಿತು.

ಮೋದಿಯ ಕರ್ನಾಟಕ‌ ಕಡೆಗಣನೆ ಸಲ್ಲ
author img

By

Published : Oct 11, 2019, 8:20 PM IST

ಬೆಂಗಳೂರು: ನೆರೆಹಾನಿ ಪರಿಹಾರ ವಿಚಾರದಲ್ಲಿ ಕರ್ನಾಟಕವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ವಿಧಾನ ಪರಿಷತ್​ನಲ್ಲಿ ಗಂಭೀರ ಚರ್ಚೆ ಮಾಡಲಾಯಿತು. ಮೋದಿ‌ ಸರ್ಕಾರದ ಈ ವರ್ತನೆ ಸರಿಯಲ್ಲ ಎಂದು ವಿಪಕ್ಷಗಳ ಸದಸ್ಯರು ಕಿಡಿಕಾರಿದರು.

ವಿಧಾನ ಪರಿಷತ್ ಕಲಾಪದಲ್ಲಿ ನೆರೆ ಪರಿಹಾರ ಕುರಿತು ಗಂಭೀರ ಚರ್ಚೆ ನಡೆಯಿತು. ಬರೀ ಮನೆ ಕಳೆದುಕೊಂಡವರು ಮಾತ್ರವಲ್ಲ ಅಲ್ಲಿ ಇದ್ದ ಇತರರ ಪಾಡೇನು ಎನ್ನುವ ಬಗ್ಗೆಯೂ ಯೋಚಿಸಬೇಕು. ತಜ್ಞರ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್‌ನ ಜಯಮಾಲಾ ಒತ್ತಾಯಿಸಿದರು.

96 ಕೋಟಿ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೌಷ್ಟಿಕ ಆಹಾರ ಚಿಕ್ಕಿ‌ ತಯಾರಿಕೆಗೆ ಕೊಡಲಾಗುತ್ತಿದೆ. ಈ ಬಾರಿ ಅದರ ತಯಾರಿಕೆಯನ್ನು ಸಂತ್ರಸ್ತರಿಗೆ ನೀಡಿ ತಯಾರಿಕೆಗೆ ಆ ಭಾಗದಲ್ಲಿ ಯೂನಿಟ್ ಹಾಕಿಸಿಕೊಟ್ಟು ನೆರೆ ಬಾಧಿತರಿಗೆ ನೆರವಾಗಿ ಎಂದು ಸರ್ಕಾರಕ್ಕೆ ಜಯಮಾಲಾ ಸಲಹೆ ನೀಡಿದರು.

ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿಧಿ ಬಳಕೆಗೆ‌ ಇರುವ ನಿಯಮ ಸಡಿಲಿಕೆ ಮಾಡಲು ಮನವಿ ಮಾಡಿದರು. ಗುಡ್ಡ ಕುಸಿತ, ಜಮೀನಿನಲ್ಲಿ ಮಣ್ಣು ಸಂಗ್ರಹ, ಮನೆಗಳಲ್ಲಿ ಕೆಸರು ಸಂಗ್ರಹವಾಗಿರುವುದನ್ನು ತೆರವಿಗೆ ಕ್ರಮಕೈಗೊಳ್ಳಬೇಕು. ನೆರೆ ಹಾನಿ ಸಂಬಂಧ ಕೇಂದ್ರಕ್ಕೆ ವಾಸ್ತವ ವರದಿ ನೀಡಿ, ಕೇಂದ್ರ ಎಂದೂ ಕೂಡ‌ ಕೇಳಿದಷ್ಟು ಹಣ ನೀಡಿದ ಉದಾಹರಣೆ ಇಲ್ಲ. ಆದರೂ ನಾವು ನಮ್ಮ ನಷ್ಟ ಅವರಿಗೆ ತಲುಪಿಸಬೇಕು ಎಂದರು.

ಈ ವೇಳೆ ಸಚಿವ ಈಶ್ವರಪ್ಪ10 ಸಾವಿರ ಕೊಟ್ಟಿರೋದು ಸಾಕಾಗಲಿದೆ ಎಂದಿದ್ದಾರೆ. ಆದರೆ, ಈಶ್ವರಪ್ಪನವರೇ ನಿಮ್ಮ ಹೊಟ್ಟೆ ತುಂಬಿರಬಹುದು. ಆದರೆ, ನಮ್ಮ ಜನ ಬಿಸ್ಕೇಟ್ ತಿಂದು ಬದುಕುತ್ತಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈಶ್ವರಪ್ಪ ಆ ರೀತಿ ಹೇಳಿಕೆ ನೀಡಿಲ್ಲ, ಹಾಗಾಗಿ ಕಡತದಿಂದ‌ ತೆಗೆಯಲು ಮನವಿ ಮಾಡಿದರು. ಇದಕ್ಕೆ ಪ್ರತಿ ಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಆಡಳಿತ, ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಆಕ್ಷೇಪ ವ್ಯಕ್ತಪಡಿಸಿದರಾದರು. ವಿರೋಧ ಪಕ್ಷ ಸದಸ್ಯರ ಮಾತನ್ನು ತಾಳ್ಮೆಯಿಂದ ಕೇಳುತ್ತಿದ್ದೇವೆ. ಆದರೆ, ಈ ರೀತಿ ನಿರಾಧಾರ ಆರೋಪ ಸಲ್ಲದು ಎಂದು ಹೇಳಿ ಮತ್ತೆ ಇಂತಹ ಹೇಳಿಕೆ ನೀಡದಂತೆ ಮನವಿ ಮಾಡಿ ವಿವಾದಕ್ಕೆ ತೆರೆ ಎಳೆಯಲೆತ್ನಿಸಿದರು.

ಮಾತು ಮುಂದುವರೆಸಿದ ತಿಪ್ಪಣ್ಣ, ಎರಡೂ ಕಡೆ ಒಂದೇ ಸರ್ಕಾರ ಇದ್ದರೆ ಚಿನ್ನದ ಮಳೆ ಸುರಿಯುವ ನಿರೀಕ್ಷೆ‌ ಇತ್ತು. ಆದರೆ, ಅದು ಆಗಲಿಲ್ಲ. ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗಲೂ ನೆರೆ ಬಂದಿತ್ತು ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ಇಲ್ಲಿ ಬಿಜೆಪಿ ಸರ್ಕಾರವಿದ್ದರೂ ಪಿಎಂ ಅಂದು 1600 ಕೋಟಿ ಹಣ ಬಿಡುಗಡೆ ಮಾಡಿದ್ದರು. ಆದರೆ, ಕರ್ನಾಟಕ ನೆರೆಗೆ ಸುಮ್ಮನಿರುವ ಮೋದಿ, ಬಿಹಾರ ನೆರೆಗೆ ಟ್ವೀಟ್ ಮಾಡಿದ್ದಾರೆ. ಈಗ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಸಹಾಯಕ್ಕೆ ಬಂದಿಲ್ಲ ನಾವೇನು ಮಾಡಬೇಕು. ಮೋದಿ ಸರ್ಕಾರದ ಕರ್ನಾಟಕದ‌ ಕಡೆಗಣನೆ ಒಳ್ಳೆಯದಲ್ಲ ಎಂದು ಹೇಳಿದರು.

ಸದಸ್ಯರ ನೆರೆ ಪರಿಹಾರ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿ, ನೆರೆ ಸಂತ್ರಸ್ತರರಿಗೆ ಪರಿಹಾರ ಕಲ್ಪಿಸಲು ಎಬಿಸಿಡಿ ಎಂದು ನಾಲ್ಕು ವರ್ಗ ಮಾಡಿದ್ದು, ಎ ಮತ್ತು ಬಿ ಕೆಟಗರಿ ಅಡಿ ರಾಜ್ಯ ಸರ್ಕಾರವೇ ಸಂಪೂರ್ಣ ಪರಿಹಾರ ನೀಡಲಿದೆ.

ಮನೆ ನಿರ್ಮಾಣಕ್ಕೆ ₹5ಲಕ್ಷ, ದುರಸ್ತಿ ಕಾರ್ಯಕ್ಕೆ ₹50 ಸಾವಿರ ಕೊಡುತ್ತಿದ್ದೇವೆ. ಗುಡ್ಡ ಕುಸಿತವಾಗಿರುವ ಕಡೆ ಮಣ್ಣು ತೆಗೆಯುವ ಕೆಲಸ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ಅಗತ್ಯ ಹಣವನ್ನು ಬಿಡುಗಡೆ ಮಾಡಿದ್ದು ಅಧಿವೇಶನದ ಬಳಿಕ ಮತ್ತಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

Intro:

ಬೆಂಗಳೂರು:ನೆರೆಹಾನಿ ಪರಿಹಾರ ವಿಚಾರದಲ್ಲಿ ಕರ್ನಾಟಕವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ನಲ್ಲಿ ಗಂಭೀರ ಆರೋಪ ಮಾಡಲಾಯಿತು. ಮೋದಿ‌ ಸರ್ಕಾರದ ಈ ವರ್ತನೆ ಸರಿಯಲ್ಲ ಎಂದು ಕಿಡಿಕಾರಲಾಯಿತು.

ವಿಧಾನ ಪರಿಷತ್ ಕಲಾಪದಲ್ಲಿ ನೆರೆ ಪರಿಹಾರ ಕುರಿತು ಗಂಭೀರ ಚರ್ಚೆ ನಡೆಯಿತು. ಬರೀ ಮನೆ ಕಳೆದುಕೊಂಡವರು ಮಾತ್ರವಲ್ಲ ಅಲ್ಲಿ ಇದ್ದ ಇತರರ ಪಾಡೇನು ಎನ್ನುವ ಬಗ್ಗೆಯೂ ಯೋಚಿಸಬೇಕು ತಜ್ಞರ ಸಮಿತಿ ರಚಿಸಬೇಕು ಎಂದು ಜಯಮಾಲಾ ಒತ್ತಾಯಿಸಿದರು.

96ಕೋಟಿ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೌಷ್ಟಿಕ ಆಹಾರ ಚಿಕ್ಕಿ‌ತಯಾರಿಕೆಗೆ ಕೊಡಲಾಗುತ್ತಿದೆ ಈ ಬಾರಿ ತಯಾರಿಕೆಯನ್ನು ಸಂತ್ರಸ್ತರಿಗೆ ನೀಡಿ ತಯಾರಿಕೆಗೆ ಆ ಭಾಗದಲ್ಲಿ ಯುನಿಟ್ ಹಾಕಿಸಿಕೊಟ್ಟು ನೆರೆ ಬಾದಿತರಿಗೆ ನೆರವಾಗಿ ಎಂದು ಸರ್ಕಾರಕ್ಕೆ ಜಯಮಾಲಾ ಸಲಹೆ ನೀಡಿದರು.

ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ,
ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿಧಿ ಬಳಕೆಗೆ‌ ಇರುವ ನಿಯಮ ಸಡಿಲಿಕೆ ಮಾಡಲು ಮನವಿ ಮಾಡಿದರು.ಗುಡ್ಡ ಕುಸಿತ,ಜಮೀನಿನಲ್ಲಿ ಮಣ್ಣು ಸಂಗ್ರಹ,ಮನೆಗಳಲ್ಲಿ ಕೆಸರು ಸಂಗ್ರಹವಾಗಿದ್ದು ತೆರವುಗೆ ಕ್ರಮ ಕೈಗೊಳ್ಳಬೇಕು,ಹಾನಿ ಸಂಬಂಧ ಕೇಂದ್ರಕ್ಕೆ ವಾಸ್ತವ ವರದಿ ನೀಡಿ, ಕೇಂದ್ರ ಎಂದೂ ಕೂಡ‌ ಕೇಳಿದಷ್ಟು ಹಣ ನೀಡಿದ ಉದಾಹರಣೆ ಇಲ್ಲ.ಆದರೂ ನಾವು ನಮ್ಮ ನಷ್ಟ ಅವರಿಗೆ ತಲುಪಿಸಬೇಕು ಎಂದರು.

ಸದಸ್ಯ ತಿಪ್ಪಣ್ಣ ಕಮಕನೂರು ಮಾತನಾಡಿ,ನೆರೆಹಾನಿ ಕುರಿತು ಸರ್ಕಸರದ ಗಮನ ಸೆಳೆದರು ಈ ವೇಳೆ ಸಚಿವ ಈಶ್ವರಪ್ಪ10 ಸಾವಿರ ಕೊಟ್ಟಿರೋದು ಸಾಕಾಗಲಿದೆ ಎಂದಿದ್ದಾರೆ ಆದರೆ ಈಶ್ವರಪ್ಪನವರೇ ನಿಮ್ಮ ಹೊಟ್ಟೆ ತುಂಬಿರಬಹುದು ಆದರೆ ನಮ್ಮ ಜನ ಬಿಸ್ಕೆಟ್ ತಿಂದು ಬದುಕುತ್ತಿದ್ದಾರೆ ಎಂದು ಉಲ್ಲೇಖಿಸಿದರು ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು ಈಶ್ವರಪ್ಪ ಆ ರೀತಿ ಹೇಳಿಕೆ ನೀಡಿಲ್ಲ, ಹಾಗಾಗಿ ಕಡತದಿಂದ‌ ತೆಗೆಯಲು ಮನವಿ ಮಾಡಿದರು ಇದಕ್ಕೆ ಪ್ರತಿ ಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು ಈ ವೇಳೆ
ಆಡಳಿತ,ಪ್ರತಿಪಕ್ಷ ಸದಸ್ಯರ ನಡುವ ಮಾತಿನ ಚಕಮಕಿ ನಡೆಯಿತು.ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಆಕ್ಷೇಪ ವ್ಯಕ್ತಪಡಿಸಿದರಾದರೂ ವಿರೋಧ ಪಕ್ಷ ಸದಸ್ಯರ ಮಾತನ್ನು ತಾಳ್ಮೆಯಿಂದ ಕೇಳುತ್ತಿದ್ದೇವೆ ಆದರೆ ಈ ರೀತಿ ನಿರಾಧಾರ ಆರೋಪ ಸಲ್ಲದು ಎಂದು ಹೇಳಿ ಮತ್ತೆ ಇಂತಹ ಹೇಳಿಕೆ ನೀಡದಂತೆ ಮನವಿ ಮಾಡಿ ವಿವಾದಕ್ಕೆ ತೆರೆ ಎಳೆದರು.

ಮಾತು ಮುಂದುವರೆಸಿದ ತಿಪ್ಪಣ್ಣ,ಎರಡೂ ಕಡೆ ಒಂದೇ ಸರ್ಕಾರ ಇದ್ದರೆ ಚಿನ್ನದ ಮಳೆ ಸುರಿಯುವ ನಿರೀಕ್ಷೆ‌ ಇತ್ತು ಆದರೆ ಅದು ಆಗಲಿಲ್ಲ, ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗಲೂ ನೆರೆ ಬಂದಿತ್ತು ಆಗ ಯಡಿಯೂರಪ್ಪ ಸಿಎಂ.ಇಲ್ಲಿ ಬಿಜೆಪಿ ಸರ್ಕಸರವಿದ್ದರೂ ಪಿಎಂ ಅಂದು 1600 ಕೋಟಿ ಹಣ ಬಿಡುಗಡೆ ಮಾಡಿದ್ದರು, ಆದರೆ ಕರ್ನಾಟಕ ನೆರೆಗೆ ಸುಮ್ಮನಿರುವ ಮೋದಿ ಬಿಹಾರ ನೆರೆಗೆ ಟ್ವೀಟ್ ಮಾಡಿದ್ದಾರೆ, ಈಗ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಸಹಾಯಕ್ಕೆ ಬಂದಿಲ್ಲ ನಾವೇನು ಮಾಡಬೇಕು,ಮೋದಿ ಸರ್ಕಾರದ ಕರ್ನಾಟಕದ‌ ಕಡೆಗಣನೆ ಒಳ್ಳೆಯದಲ್ಲ ಎಂದು ತಿವಿದರು.

ಸದಸ್ಯರ ನೆರೆ ಪರಿಹಾರ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿ,ನೆರೆ ಸಂತ್ರಸ್ತರರಿಗೆ ಪರಿಹಾರ ಕಲ್ಪಿಸಲು ಎ.ಬಿ.ಸಿ.ಡಿ ಎಂದು ನಾಲ್ಕು ವರ್ಗ ಮಾಡಿದ್ದು,ಎ ಮತ್ತು ಬಿ ಕೆಟಗರಿ ಅಡಿ ರಾಜ್ಯ ಸರ್ಕಾರವೇ ಸಂಪೂರ್ಣ ಪರಿಹಾರ ನೀಡಲಿದೆ, ಮನೆ ನಿರ್ಮಾಣಕ್ಕೆ 5 ಲಕ್ಷ, ದುರಸ್ತಿ ಕಾರ್ಯಕ್ಕೆ 50 ಸಾವಿರ ಕೊಡುತ್ತಿದ್ದೇವೆ, ಗುಡ್ಡ ಕುಸಿತವಾಗಿರುವ ಕಡೆ ಮಣ್ಣು ತೆಗೆಯುವ ಕೆಲಸ ಮಾಡಲಾಗುತ್ತಿದೆ,ರಾಜ್ಯ ಸರ್ಕಾರ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ,ಅಗತ್ಯ ಹಣವನ್ನು ಬಿಡುಗಡೆ ಮಾಡಿದ್ದು ಅಧಿವೇಶನದ ಬಳಿಕ ಮತ್ತಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.