ಬೆಂಗಳೂರು: ಸದ್ಯ ಈಗ ಎಲ್ಲಿ ನೋಡಿದ್ರೂ ಟಿಕ್‌ಟಾಕ್‌ನದ್ದೇ ಹವಾ.. ಮಕ್ಕಳಿಂದ ಹಿಡಿದು ಮುದುಕರವರೆಗೂ ಟಿಕ್‌ಟಾಕ್ ಮಾಡ್ಕೊಂಡು ಟೈಂಪಾಸ್ ಮಾಡುತ್ತಿದ್ದಾರೆ. ಈ ಟಿಕ್‌ಟಾಕ್ ಎಷ್ಟರ ಮಟ್ಟಿಗೆ ಇಂದಿನ ಯುವ ಪೀಳಿಗೆಯನ್ನು ಆಕರ್ಷಿಸಿದೆ ಎಂದರೆ, ಟಿಕ್‌ಟಾಕ್ ಮಾಡುವ ಸಲುವಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳುಂಟು. ಆದರೆ, ಈಗ ಸೆಲೆಬ್ರಿಟಿ ಒಬ್ಬರು ಪ್ರಾಣವೇ ಇಲ್ಲದ ಅಸ್ಥಿ ಪಂಜರದ ಜೊತೆ ಟಿಕ್‌ಟಾಕ್ ಮಾಡಿ ಸಖತ್ ಸೌಂಡ್ ಮಾಡುತ್ತಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು, ಸಿಲಿಕಾನ್ ಸಿಟಿಯ ಬಿಜಿಎಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಅಲ್ಲದೆ ಫ್ರೀ ಟೈಮ್ನಲ್ಲಿ ಸಂಗೀತ ನಿರ್ದೇಶನವನ್ನೂ ಮಾಡುತ್ತಾರೆ. ಡಾಕ್ಟರ್ ಕಿರಣ್ ತೋಟಂಬೈಲು ಐ ಲವ್ ಯೂ ಚಿತ್ರಕ್ಕೆ ಸಂಗೀತ ನೀಡಿದ್ದು, ಈ ಚಿತ್ರದ ಹಾಡುಗಳು ಈಗಾಗಲೇ ಟಿಕ್ಟಾಕ್ನಲ್ಲಿ ಸಖತ್ ಸೌಂಡ್ ಮಾಡ್ತಿವೆ. ಅದರಲ್ಲೂ ಬಂಗಾರದಲ್ಲಿ ಗೊಂಬೆ ಮಾಡಿದ ಶೃಂಗಾರವೆಲ್ಲ ನಿಂಗೆ ನೀಡಿದ ಎರಡು ಟಿಕ್ಟಾಕ್ನಲ್ಲಿ ಸಖತ್ ಫೇಮಸ್ ಆಗಿದ್ದು, ಎಷ್ಟೋ ಜೋಡಿಗಳು ಹುಚ್ಚೆದ್ದು ಈ ಹಾಡನ್ನು ಟಿಕ್‌ಟಾಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇನ್ನು, ಈಗ ಇದೇ ಹಾಡು ಡಾಕ್ಟರ್ ಕಿರಣ್ ತೋಟಂಬೈಲು ಅವರನ್ನು ಆವರಿಸಿದ್ದು. ತಾವೂ ಒಂದು ಕೈ ನೋಡೇ ಬಿಡೋಣ ಎಂದು. ಅವರೇ ಕಂಪೋಸ್ ಮಾಡಿದ ಹಾಡಿಗೆ ಆಸ್ಪತ್ರೆಯೊಳಗೆ ಫ್ರೀಟೈಂನಲ್ಲಿ ಟಿಕ್‌ಟಾಕ್ ಮಾಡಿದ್ದಾರೆ. ಆದರೆ, ಡಾ. ಕಿರಣ್ ಈ ಹಾಡಿನಲ್ಲಿ ಅಸ್ಥಿ ಪಂಜರದ ಜೊತೆ ರೋಮ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದಾರೆ. ಇದೇ ಟಿಕ್‌ಟಾಕ್ ಹಾಡು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.