ETV Bharat / state

ಬಿಜೆಪಿಯಿಂದ ಕೋಟಿ ಕೋಟಿ ಆಫರ್​ ಬಂದ್ರು ನಾನು ಪಕ್ಷ ಬಿಡಲಿಲ್ಲ, ಈ ಬಾರಿ ಮಂತ್ರಿ ಸ್ಥಾನ ನೀಡಬೇಕು: ಬಿ ಕೆ ಸಂಗಮೇಶ್ - siddaramaih and dk shivakumar

ಭದ್ರಾವತಿ ಕ್ಷೇತ್ರದಿಂದ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ, ಬಿಜೆಪಿಯಿಂದ ಸಾಕಷ್ಟು ಆಫರ್​ ಬಂದರು ಪಕ್ಷ ಬಿಟ್ಟು ಹೋಗಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್​​ ಹೇಳಿದರು.

the-ministerial-posts-should-be-given-to-seniority-bk-sangamesh
ನಾಲ್ಕು ಬಾರಿ ಗೆದ್ದಿರುವ ನನಗೆ ಹಿರಿತನ ನೋಡಿ ಮಂತ್ರಿ ಸ್ಥಾನ ನೀಡಬೇಕು: ಬಿ.ಕೆ ಸಂಗಮೇಶ್
author img

By

Published : May 21, 2023, 3:37 PM IST

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಮಾಧ್ಯಗೋಷ್ಟಿಯಲ್ಲಿ ಮಾತನಾಡಿದರು..

ಬೆಂಗಳೂರು: ನಾಲ್ಕು ಬಾರಿ ಶಾಸಕನಾಗಿ ಗೆದ್ದು ಬರುತ್ತಿರುವ ನನಗೆ ಹಿರಿತನ ನೋಡಿ ಮಂತ್ರಿ ಸ್ಥಾನ ನೀಡಬೇಕು ಎಂದು ಭದ್ರಾವತಿ ಕಾಂಗ್ರೆಸ್​​ ಶಾಸಕ ಬಿ. ಕೆ ಸಂಗಮೇಶ್ ಒತ್ತಾಯಿಸಿದರು. ಬೆಂಗಳೂರಿನ ತಮ್ಮ ಕಚೇರಿ ಬಳಿ ಮಾಧ್ಯಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡಬೇಕೆಂದು ನಾನು ಡಿಸಿಎಂ ಡಿ ಕೆ ಶಿವಕುಮಾರ್​ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದರು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಾಲ್ಕನೇ‌ ಬಾರಿ ಜಯಗಳಿಸಿದ್ದೇನೆ. ಕಾಗೋಡು ತಿಮ್ಮಪ್ಪ ನಂತರ ನಾನೇ ಜಯ ಗಳಿಸಿರೋದು. ಸ್ವಾತಂತ್ರ್ಯ ಬಂದಾಗಿನಿಂದ ಭದ್ರಾವತಿಯ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಬಿಜೆಪಿಯಿಂದ ಸಾಕಷ್ಟು ಆಫರ್ ಬಂದರು ಕೂಡ ನಾನು ಪಕ್ಷ ಬಿಟ್ಟು ಹೋಗಲಿಲ್ಲ ಎಂದು ತಿಳಿಸಿದರು. ಸಂಗಮೇಶ್ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದ್ರು. ‌ಜನ ಮತ ಹಾಕಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಕೊಟ್ಟಿಲ್ಲ ಅಂದರೆ ಏನು ಮಾಡೋದಕ್ಕೆ ಆಗೋದಿಲ್ಲ. ಆದರೆ ನಾನು ಬಿಜೆಪಿಯ ಭದ್ರಕೊಟೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಗೆದ್ದಿದ್ದೇನೆ ಎಂದು ಸಂಗಮೇಶ್​ ತಿಳಿಸಿದರು.

ಶಿವಮೊಗ್ಗ ಜಿಲ್ಲಾವಾರು ವಿಷಯದಲ್ಲಿ ನಾನು ಹಿರಿಯನಿದ್ದೇನೆ. ಶಿವಮೊಗ್ಗದಲ್ಲಿ ಪ್ರಾಮಾಣಿಕವಾಗಿ ನಾಲ್ಕು ಬಾರಿ ಗೆದ್ದಿದ್ದೇನೆ. ಇದರಿಂದ ನನಗೆ ಸಚಿವ ಸ್ಥಾನದ ಜೊತೆ ಶಿವಮೊಗ್ಗ ಉಸ್ತುವಾರಿ ನೀಡಬೇಕು. ನನಗೆ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದಲ್ಲೇ ಇರುತ್ತೇನೆ. ನನ್ನ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ಕೊಡುವ ವಿಶ್ವಾಸವಿದೆ. ನನಗೆ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸಚಿವ ಸ್ಥಾನ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಭದ್ರಾವತಿ ಶಾಸಕರು ಇದೇ ವೇಳೆ ಹೇಳಿದ್ರು.

ಶಿವಮೊಗ್ಗ ಜಿಲ್ಲೆಯವರಿಗೆ ಸಚಿವ ಸ್ಥಾನ ಕೊಟ್ಟರೆ ಮುಂಬರುವ ಚುನಾವಣೆಗೆ ಅನುಕೂಲ ಆಗುತ್ತದೆ. ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಸಚಿವ ಸ್ಥಾನ ಕೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರಿಗೆ ಬಿಟ್ಟ ವಿಚಾರ. ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ನಾಲ್ಕು ಬಾರಿ ಕಾಂಗ್ರೆಸ್​​ನಿಂದ ಗೆದ್ದಿದ್ದೇನೆ. ಅವರು ಈ ಮುಂಚೆ ಜೆಡಿಎಸ್ ನಿಂದ ಗೆದ್ದಿದ್ದರೆ, ಈ ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಅವರೂ ಯೋಚನೆ ಮಾಡಲಿ. ಮಂತ್ರಿಗಿರಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಹಿರಿತನದ ಆಧಾರದಲ್ಲಿ ನನಗೆ ಮಂತ್ರಿ ಸ್ಥಾನ ನೀಡಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಸಂಗಮೇಶ್​ ಸ್ಪಷ್ಟಪಡಿಸಿದರು.

ಹೊಸ‌ಮುಖಗಳಿಗೆ ಅವಕಾಶ ಕೊಡಬೇಕು: ಮೂರು ನಾಲ್ಕು ಬಾರಿ ಗೆದ್ದವರಿಗೆ ಈ ಬಾರಿ ಅವಕಾಶ ನೀಡಬೇಕು. ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಹಿರಿಯರ ಬದಲು ಮೂರು ನಾಲ್ಕು ಗೆದ್ದು ಬರುತ್ತಿರುವ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು. ಇದು ನನ್ನ ವೈಯ್ಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು. ಕೆ ಹೆಚ್ ಮುನಿಯಪ್ಪ ಕೇಂದ್ರ ಸಚಿವ ಸ್ಥಾನ ಅನುಭವಿಸಿದ ಬಳಿಕನೂ ರಾಜ್ಯದಲ್ಲಿ ಮಂತ್ರಿ ಸ್ಥಾನ ಪಡೆದ ಬಗ್ಗೆ ಪ್ರತಿಕ್ರಿಯಿಸುತ್ತ, ಅಂತಹವರು ಹಿರಿಯರಿದ್ದಾರೆ. ಅವರೇ ಅರ್ಥಮಾಡಿಕೊಳ್ಳಬೇಕು‌ ಎಂದು ಶಾಸಕ ಸಂಗಮೇಶ್​ ಹೇಳಿದ್ರು.

ಇದನ್ನೂ ಓದಿ: 'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.