ಬೆಂಗಳೂರು: ಮಾರಣಾಂತಿಕ ಖಾಯಿಲೆ ಇದೆ ಎಂದು ವೈದ್ಯರು ರಿಪೋರ್ಟ್ ನೀಡಿದಕ್ಕೆ ವೇದನೆಗೆ ಒಳಗಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.
ಬನ್ನೇರುಘಟ್ಟ ನಿವಾಸಿ ರಾಘವೇಂದ್ರ (40) ನೇಣಿಗೆ ಶರಣಾದ ಮೃತ ವ್ಯಕ್ತಿ. ಅನಾರೋಗ್ಯ ಹಿನ್ನೆಲೆ ಒಂದು ವಾರದ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಬ್ಲಡ್ ಟೆಸ್ಟ್ ಮಾಡಿಸಿದ್ದ. ಬ್ಲಡ್ ರಿಪೋರ್ಟ್ಗಾಗಿ ಡಾಕ್ಟರ್ ಮತ್ತೆ ನಿನ್ನೆಗೆ ಡೇಟ್ ನೀಡಿದ್ದರು. ಹೀಗಾಗಿ ನಿನ್ನೆ ಆಸ್ಪತ್ರೆಗೆ ಬಂದ ರಾಘವೇಂದ್ರನಿಗೆ ಡಾಕ್ಟರ್ ಮಾರಣಾಂತಿಕ ಖಾಯಿಲೆ ಇದೆ ಎಂಬ ರಿಪೋರ್ಟ್ ನೀಡಿದ್ದಾರೆ ಎನ್ನಲಾಗಿದೆ. ತಪಾಸಣಾ ವರದಿಯನ್ನು ನೋಡಿ ಮನನೊಂದು ವಿಕ್ಟೋರಿಯಾ ಆಸ್ಪತ್ರೆ ಟಿ ಬ್ಲಾಕ್ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.