ETV Bharat / state

ಸಿಡಿ ಕೇಸ್​: ರಾಜಕಾರಣಿಗಳನ್ನ ಮನೆಗೆ ಊಟಕ್ಕೂ ಕರೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಡಿಕೆಶಿ

ಈ ವಿಡಿಯೋ ನಿಜನಾ‌ ಸುಳ್ಳಾ ಅಂತಾ ತನಿಖೆ ನಡೆಸಿ. ಈ ವಿಡಿಯೋ ತಿರುಚಿದ ವಿಡಿಯೋನಾ, ನಕಲಿ ವಿಡೊಯೋನಾ ಅಂಥ ಪರಿಶೀಲಿಸಿ. ರಮೇಶ್ ಜಾರಕಿಹೊಳಿ ಇದ್ರಾ, ಇಲ್ವಾ?. ಈ ಬಗ್ಗೆ ಎಲ್ಲವನ್ನೂ ಸಮಗ್ರವಾಗಿ ತನಿಖೆ ನಡೆಸಬೇಕು. ಹನಿ ಟ್ರ್ಯಾಪ್ ಅಂತಾರೆ. ಈ ಹನಿ ತಿನ್ನೋದಕ್ಕೆ ಏಕೆ ಹೋದ್ರಿ. ಹನಿ ಟ್ರ್ಯಾಪ್ ಆಗಿದೆ ಅಂದರೆ ಹನಿ ತಿನ್ನೋಕೆ ಹೋಗಬೇಕಲ್ಲ ಎಂದು ಸದನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಟಾಂಗ್ ನೀಡಿದರು.

author img

By

Published : Mar 22, 2021, 8:18 PM IST

ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಎಲ್ಲರ ಫೋನ್ ಟ್ರ್ಯಾಪ್ ಮಾಡಲಿ. ನಾವ್ಯಾರು ಬಟ್ಟೆ ಬಿಚ್ಚಿ ಅಂತ ಹೇಳಲಿಲ್ಲ. ಚೀಫ್ ಮಿನಿಸ್ಟರ್ ಭ್ರಷ್ಟರು ಅಂತ ಹೇಳಲಿಲ್ಲ. ಸಿದ್ದರಾಮಯ್ಯ ಗುಡ್ ಮ್ಯಾನ್ ಅಂತಲೂ ಹೇಳಿಲ್ಲ ಎಂದು ವಿಧಾನಸಭೆಯಲ್ಲಿ ಡಿ.ಕೆ. ಶಿವಕುಮಾರ್​ ಸಿಡಿ ವಿಚಾರವಾಗಿ ಕಿಡಿಕಾರಿದರು.

ವಿಧಾನಸಭೆಯಲ್ಲಿ ಸಿಡಿ ವಿಚಾರವಾಗಿ ಮಾತನಾಡುತ್ತಾ, ಈ ಮೊದಲು ರಾಜಕಾರಣಿಗಳನ್ನು ಭ್ರಷ್ಟಾಚಾರಿಗಳೆಂದು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದರು. ಆದರೆ ಇದು ಇಡೀ ರಾಜಕಾರಣಕ್ಕೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ರಾಜಕಾರಣಿಯನ್ನು ಊಟಕ್ಕೂ ಮನೆಗೆ ಕರೆಸಿಕೊಳ್ಳದಂತ ಪರಿಸ್ಥಿತಿ ಎದುರಾಗಿದೆ‌‌ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಡಿಯೋ ನಿಜನಾ‌ ಸುಳ್ಳಾ ಅಂತಾ ತನಿಖೆ ನಡೆಸಿ. ಈ ವಿಡಿಯೋ ತಿರುಚಿದ ವಿಡಿಯೋನಾ, ನಕಲಿ ವಿಡೊಯೋನಾ ಅಂಥ ಪರಿಶೀಲಿಸಿ. ರಮೇಶ್ ಜಾರಕಿಹೊಳಿ ಇದ್ರಾ, ಇಲ್ವಾ?. ಈ ಬಗ್ಗೆ ಎಲ್ಲವನ್ನೂ ಸಮಗ್ರವಾಗಿ ತನಿಖೆ ನಡೆಸಬೇಕು. ಹನಿ ಟ್ರ್ಯಾಪ್ ಅಂತಾರೆ. ಈ ಹನಿ ತಿನ್ನೋದಕ್ಕೆ ಏಕೆ ಹೋದ್ರಿ. ಹನಿ ಟ್ರ್ಯಾಪ್ ಆಗಿದೆ ಅಂದರೆ ಹನಿ ತಿನ್ನೋಕೆ ಹೋಗಬೇಕಲ್ಲ ಎಂದು ಟಾಂಗ್ ನೀಡಿದರು.

ವಿಧಾನಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್​

ರಮೇಶ್ ಜಾರಕಿಹೊಳಿ ಯೋಗಿ ಬಗ್ಗೆ ಹೇಳಿದ್ರು. ಸರ್ಕಾರ ರಚನೆಗೆ 9 ಕೋಟಿ ರೂ. ಸಾಲ ಮಾಡಿದ್ರು ಅಂತ ಹೇಳಿಕೆ ನೀಡಿದ್ದರು. ಇದು ಎಕನಾಮಿಕ್ಸ್ ಆಫೆನ್ಸ್ ಆಗೋದಿಲ್ವೇ?. ಇದರ ಬಗ್ಗೆ ನಿಮ್ಮ ಎಸಿಬಿ ತನಿಖೆ ಮಾಡ್ತಿಲ್ಲವೇ ಎಂದು ಡಿಕೆಶಿ ಪ್ರಶ್ನಿಸಿದರು.

ಈ ವೇಳೆ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಈ ಸಿನಿಮಾ ತೆಗೆದಿದ್ದು ಯಾರು? ಈ‌ ಸಿನಿಮಾ ನಿರ್ಮಾಪಕರು ಯಾರು? ಇದರ ಸ್ಕ್ರಿಪ್ಟ್ ರೈಟರ್ ಯಾರು? ಸಿನಿಮಾ ತೆಗೆದ ಲೊಕೇಷನ್ ಯಾವುದು ಅನ್ನೋದು ಎಲ್ಲವೂ ಹೊರ ಬರ್ತಾ ಇದೆ ಎಂದರು.

ಇದನ್ನೂ ಓದಿ.. ವಿಧಾನಸಭೆಯಲ್ಲಿ ಸಿಡಿದ ಸಿಡಿ: ಆರು ಸಚಿವರ ವಿರುದ್ಧ ಸಿದ್ದು ಮಾತಿನ ಬಾಣ, ಕಂಗಾಲಾದ ಆಡಳಿತ ಪಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.