ETV Bharat / state

ಇಂಡೋ-ಇಸ್ರೇಲ್ ಕೃಷಿ ಯೋಜನೆಯ ಕರ್ನಾಟಕದ ಮೂರು ಉತ್ಕೃಷ್ಟ ಕೇಂದ್ರಗಳ ಉದ್ಘಾಟನೆ

author img

By

Published : Jun 16, 2021, 3:59 PM IST

ತೋಟಗಾರಿಕೆ ಉತ್ಪನ್ನಗಳ ಗುಣಮಟ್ಟದ ಉತ್ಪಾದನೆ, ಉತ್ಪಾದಕತೆಯನ್ನು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಹೆಚ್ಚಿಸಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಸುಸ್ಥಿರತೆಯನ್ನು ಸಾಧಿಸಲು ಇಂಡೋ-ಇಸ್ರೇಲ್‌ ಕೃಷಿ ಯೋಜನೆ (IIAP)ಯಡಿಯಲ್ಲಿ ಈ ಉತ್ಕೃಷ್ಟ ಕೇಂದ್ರಗಳನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವನ್ನು ಒದಗಿಸಿರುವ ಭಾರತ ಸರ್ಕಾರ ಹಾಗೂ ಇಸ್ರೇಲ್‌ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು..

Indo-Israeli agriculture project of Karnataka
ಇಂಡೋ-ಇಸ್ರೇಲ್ ಕೃಷಿ ಯೋಜನೆ

ಬೆಂಗಳೂರು : ತೋಟಗಾರಿಕಾ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನಗಳ ಅಳವಡಿಕೆಗಾಗಿ ಇಂಡೋ-ಇಸ್ರೇಲ್ ಕೃಷಿ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿ ಸ್ಥಾಪಿಸಿರುವ ಮೂರು ಉತ್ಕೃಷ್ಟ ಕೇಂದ್ರಗಳನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಭಾರತ ಸರ್ಕಾರದ ಮಾನ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್​ಅವರು ಜಂಟಿಯಾಗಿ ಉದ್ಘಾಟನೆ ಮಾಡಿದರು.

ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ವಿಭಾಗವಾದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ ಮತ್ತು ಮಷಾವ್–ಇಸ್ರೇಲ್​ನ ಅಂತಾರಾಷ್ಟ್ರೀಯ ಅಭಿವೃದ್ಧಿ ಸಹಕಾರ ಏಜೆನ್ಸಿಯು ಇಸ್ರೇಲ್​ನ ಪ್ರಮುಖ ಜಿ2ಜಿ ಸಹಕಾರಿ ಸಂಸ್ಥೆಯಾಗಿದೆ. ಭಾರತದಾದ್ಯಂತ 12 ರಾಜ್ಯಗಳಲ್ಲಿ 29 ಸಕ್ರಿಯ ಉತ್ಕೃಷ್ಟ ಕೇಂದ್ರಗಳಲ್ಲಿ ಆಧುನಿಕ ಇಸ್ರೇಲ್ ಕೃಷಿ ತಂತ್ರಜ್ಞಾನಗಳನ್ನು ಸ್ಥಳೀಯ ಹವಾಗುಣಗಳಿಗನುಗುಣವಾಗಿ ಅನುಷ್ಠಾನಗೊಳಿಸುತ್ತಿದೆ.

ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 29 ಉತ್ಕೃಷ್ಟ ಕೇಂದ್ರಗಳಲ್ಲಿ ಮೂರು ಕೇಂದ್ರಗಳನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಕೋಲಾರದ ಮಾವು ಉತ್ಕೃಷ್ಟ ಕೇಂದ್ರ, ಬಾಗಲಕೋಟೆಯ ದಾಳಿಂಬೆ ಉತ್ಕೃಷ್ಟ ಕೇಂದ್ರ ಮತ್ತು ಧಾರವಾಡದ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ. ಈ ಉತ್ಕೃಷ್ಟ ಕೇಂದ್ರಗಳು ಸ್ಥಳೀಯ ಹವಾಗುಣಕ್ಕೆ ಹೊಂದುವಂತೆ ಇಸ್ರೇಲ್​ನ ನವೀನ ಕೃಷಿ ತಂತ್ರಜ್ಞಾನಗಳ ಕುರಿತಾಗಿ ರೈತರಿಗೆ ಜ್ಞಾನವನ್ನು ವೃದ್ಧಿಸುವ, ಉತ್ತಮ ಕೃಷಿ ಪದ್ಧತಿಗಳನ್ನು ಪ್ರಾತ್ಯಕ್ಷಿಸುವ ಮತ್ತು ರೈತರಿಗೆ ತರಬೇತಿ ನೀಡುವ ಒಂದು ಅತ್ಯಾಧುನಿಕ ಕೃಷಿ ವೇದಿಕೆ ಆಗಿದೆ.

ಹೊಸದಾಗಿ ಉದ್ಘಾಟಿಸಲಾದ ಕೇಂದ್ರಗಳು ರೈತರಿಗೆ ಸುಧಾರಿತ ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಂಡು ಹಾಗೂ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಲು ಹಾಗೂ ಅವರ ಆದಾಯವನ್ನು ದುಪ್ಪಟ್ಟುಗೊಳಿಸಲು ನೆರವಾಗುತ್ತವೆ. ಬಾಗಲಕೋಟೆಯ ದಾಳಿಂಬೆ ಉತ್ಕೃಷ್ಟ ಕೇಂದ್ರದಲ್ಲಿ ಸುಧಾರಿತ ತಂತ್ರಜ್ಞಾನಗಳಾದ ನಿಖರ ಬೇಸಾಯ ಪದ್ಧತಿಯನ್ವಯ ಉಪಗ್ರಹ ಚಿತ್ರಣದ ಆಧಾರದ ಮೇಲೆ ನೀರಿನ ನಿರ್ವಹಣೆ, ಸ್ವಯಂಚಾಲಿತ ರಸಾವರಿ ಪದ್ಧತಿ (ಹನಿ ನೀರಾವರಿ ಮುಖಾಂತರ ವಿಶೇಷ ರಸಗೊಬ್ಬರಗಳ ಪೂರೈಕೆ) ಹಾಗೂ ಸುಧಾರಿತ ದಾಳಿಂಬೆ ತಳಿಯಾದ ಸೂಪರ್‌ ಭಗವಾ ತಳಿಯ ಮೇಲಾವರಣಾ (ಕೆನೋಪಿ) ನಿರ್ವಹಣಾ ತಂತ್ರಗಳ ಪ್ರಯೋಜನಕಾರಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗುತ್ತಿದೆ.

ಕೋಲಾರದ ಮಾವು ಉತ್ಕೃಷ್ಟ ಕೇಂದ್ರದಲ್ಲಿ ಅತ್ಯಾಧುನಿಕ ಮತ್ತು ವಾಣಿಜ್ಯ ಹೈಟೆಕ್‌ ನರ್ಸರಿ (ಸಸ್ಯಪಾಲನೆ) ನಿರ್ವಹಣೆ ಮಾಡುವ ಮೂಲಕ ಹಾಗೂ ಇಸ್ರೇಲಿ ರೂಟ್ ಸ್ಟಾಕ್​ಗಳನ್ನು ಬಳಸಿ ಉತ್ತಮ ಇಳುವರಿ ನೀಡುವ ತಳಿಗಳ ಅಭಿವೃದ್ಧಿಯನ್ನೊಳಗೊಂಡಂತೆ ಮಾವಿನ ಬೆಳೆಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ. ಕೇಂದ್ರದಲ್ಲಿ ಮಾವಿನ ಬೆಳೆಯಲ್ಲಿ ಅಧಿಕ ಸಾಂಧ್ರತೆ ಪದ್ಧತಿಯ ಅಳವಡಿಕೆ ಹಾಗೂ ಹಳೆಯ ಅಥವಾ ಅನುತ್ಪಾದಕ ಮರಗಳ ಪುನಃಶ್ಚೇತನವನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ, ಹನಿ ನೀರಾವರಿ ಮತ್ತು ರಸಾವರಿ ಪದ್ಧತಿಗಳ ಅಳವಡಿಕೆಯಿಂದ ನೀರಿನ ಕ್ಷಮತೆ ಮತ್ತು ಸದ್ಬಳಕೆ ಮಾಡಲಾಗುತ್ತಿದೆ.

ಧಾರವಾಡದ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವು ಅತ್ಯಾಧುನಿಕ ಮತ್ತು ವಾಣಿಜ್ಯ ಹೈಟೆಕ್‌ ನರ್ಸರಿ ಹೊಂದಿದ್ದು, ಉತ್ತಮ ಗುಣಮಟ್ಟದ ತರಕಾರಿ ಸಸಿಗಳನ್ನು ಉತ್ಪಾದಿಸಲಾಗುತ್ತಿದೆ. ಇಸ್ರೇಲ್ ಮಾನದಂಡಗಳೊಂದಿಗೆ ಹಸಿರುಮನೆಗಳಲ್ಲಿ ಉತ್ತಮ ಬೇಸಾಯ ಪದ್ಧತಿಗಳನ್ನು ಪ್ರಾತ್ಯಕ್ಷಿಸಲಾಗುತ್ತಿದೆ. ತರಕಾರಿ ಬೆಳೆಗಳ ಇಸ್ರೇಲ್ ತಳಿಗಳನ್ನು ಸಹ ಪರಿಚಯಿಸಲಾಗುತ್ತಿದ್ದು, ತರಕಾರಿ ಬೆಳೆಗಳಲ್ಲಿ ನೆಮಟೋಡ್‌ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೃಷಿಯಲ್ಲಿ ಇಂಡೋ-ಇಸ್ರೇಲ್‌ ಅಭಿವೃದ್ಧಿ ಸಹಕಾರವನ್ನು ಮತ್ತಷ್ಟು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇಂಡೋ-ಇಸ್ರೇಲ್‌ ಉತ್ಕೃಷ್ಟ ಗ್ರಾಮಗಳನ್ನು (IIVOE) ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಉಪಕ್ರಮವನ್ನು ಕರ್ನಾಟಕವು ಸೇರಿದಂತೆ ಭಾರತದಾದ್ಯಂತ ಎಂಟು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಬಾಗಲಕೋಟೆ ಮತ್ತು ಕೋಲಾರ ಉತ್ಕೃಷ್ಟ ಕೇಂದ್ರಗಳ ಸುತ್ತಲಿನ 10 ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ.

ಇಂಡೋ-ಇಸ್ರೇಲ್‌ ಉತ್ಕೃಷ್ಟ ಗ್ರಾಮ ಕಾರ್ಯಕ್ರಮವು ಆಧುನಿಕ ಕೃಷಿ ಮೂಲಸೌಕರ್ಯವನ್ನು ಸ್ಥಾಪಿಸುವ ಮತ್ತು ಸಾಮರ್ಥ್ಯ ವೃದ್ಧಿಪಡಿಸುವ ಚಟುವಟಿಕೆಗಳೊಂದಿಗೆ ರೈತರನ್ನು ಬೆಂಬಲಿಸುವ ಹಾಗೂ ಪ್ರತಿಯೊಬ್ಬ ರೈತನ ಆದಾಯವನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಲಾಗುತ್ತಿದೆ. ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಕರ್ನಾಟಕದಲ್ಲಿ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ಕೊಯ್ಲೋತ್ತರ ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಸಂಬಂಧಿಸಿದಂತೆ ವಿಫುಲವಾದ ಅವಕಾಶಗಳಿವೆ.

ತೋಟಗಾರಿಕೆ ಉತ್ಪನ್ನಗಳ ಗುಣಮಟ್ಟದ ಉತ್ಪಾದನೆ, ಉತ್ಪಾದಕತೆಯನ್ನು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಹೆಚ್ಚಿಸಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಸುಸ್ಥಿರತೆಯನ್ನು ಸಾಧಿಸಲು ಇಂಡೋ-ಇಸ್ರೇಲ್‌ ಕೃಷಿ ಯೋಜನೆ (IIAP)ಯಡಿಯಲ್ಲಿ ಈ ಉತ್ಕೃಷ್ಟ ಕೇಂದ್ರಗಳನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವನ್ನು ಒದಗಿಸಿರುವ ಭಾರತ ಸರ್ಕಾರ ಹಾಗೂ ಇಸ್ರೇಲ್‌ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್‌ ತೋಮರ್‌ ಈ ಕೇಂದ್ರಗಳಿಂದ ನೂತನ ಇಸ್ರೇಲಿ ತಂತ್ರಜ್ಞಾನಗಳು ರೈತರಿಗೆ ಅಳವಡಿಸಿಕೊಳ್ಳಲು ದೊರಕಲಿದ್ದು, ಅವುಗಳನ್ನು ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ಇದರಿಂದಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದಾಗಿದೆ. ಈ ಉತ್ಕೃಷ್ಟ ಕೇಂದ್ರಗಳು ವಾರ್ಷಿಕ 50,000 ಕಸಿ/ಸಸಿಗಳ ಉತ್ಪಾದನೆ ಮತ್ತು 25 ಲಕ್ಷ ತರಕಾರಿ ಸಸಿಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು 20,000ಕ್ಕೂ ಅಧಿಕ ರೈತರುಗಳು ಈ ಉತ್ಕೃಷ್ಟ ಕೇಂದ್ರಗಳಿಗೆ ಭೇಟಿ ನೀಡಿ ತೋಟಗಾರಿಕೆ ಬೆಳೆಗಳಲ್ಲಿ ಆಧುನಿಕ ಬೇಸಾಯ ಪದ್ದತಿಗಳ ಬಗ್ಗೆ ಮಾಹಿತಿಯನ್ನು ಪಡೆದಿರುತ್ತಾರೆ” ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.