ETV Bharat / state

ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ - yadiyuru lake

ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ನಾನಾ ಕಡೆಗಳಲ್ಲಿ ಕೂರಿಸಲಾಗಿದ್ದ ಗಣಪತಿಗಳನ್ನು ಭವ್ಯ ಮೆರೆವಣಿಗೆ ಮಾಡುವ ಮೂಲಕ ಸಾಮೂಹಿಕವಾಗಿ ನಗರದ ಯಡಿಯೂರು ಕೆರೆಯಲ್ಲಿ ಸೋಮವಾರ ರಾತ್ರಿ ನಿಮ್ಮಜನ ಮಾಡಲಾಗಿದೆ.

ಗಣೇಶ ಮೂರ್ತಿಗಳ ನಿಮಜ್ಜನ
author img

By

Published : Sep 3, 2019, 8:34 AM IST

ಬೆಂಗಳೂರು: ತುಂತುರು ಮಳೆ ಹನಿಯ ನಡುವೆ ಸಿಲಿಕಾನ್ ಸಿಟಿಯ ಮಂದಿ ನಗರದ ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಿದ್ದಾರೆ.

ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ನಾನಾ ಕಡೆಗಳಲ್ಲಿ ಕೂರಿಸಲಾಗಿದ್ದ ಗಣಪತಿಗಳನ್ನು ಭವ್ಯ ಮೆರೆವಣಿಗೆ ಮಾಡುವ ಮೂಲಕ ಸಾಮೂಹಿಕವಾಗಿ ಗಣೇಶ ಮೂರ್ತಿ ಹಾಗೂ ಗೌರಿಯನ್ನು ನಿಮಜ್ಜನ ಮಾಡಲಾಗಿದೆ.

ಸೋಮವಾರ ಗಣೇಶ ಹಬ್ಬದ ಮೊದಲ ದಿನವಾದ್ದರಿಂದ ಮನೆಗಳಲ್ಲಿ ಕೂರಿಸಿದ್ದವರೇ ಹೆಚ್ಚಾಗಿ ಕುಟುಂಬ ಸಮೇತ ಆಗಮಿಸಿ ಗಣೇಶನನ್ನು ನಿಮಜ್ಜನ ಮಾಡಿದ್ದಾರೆ. ಇದರ ಜೊತೆಗೆ ಈ ಬಾರಿ‌ ಬಿಬಿಎಂಪಿ ಪಿಒಪಿ ಗಣೇಶ ಮೂರ್ತಿ ಮಾರಟ ಮಾಡದಂತೆ ಕಟ್ಟುನಿಟ್ಟಾಗಿ ಕ್ರಮ‌ ಕೈಗೊಂಡಿದ್ದರಿಂದ ಹೆಚ್ಚಾಗಿ ಮಣ್ಣಿನ ಗಣೇಶ ಮೂರ್ತಿಗಳೇ ಕಂಡು ಬಂದಿದ್ದು ವಿಶೇಷವಾಗಿತ್ತು.

ಅಲ್ಲದೆ ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಯಡಿಯೂರು ಕೆರೆಬಳಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

Intro:ಗಣೇಶ ನಿಮಜ್ಜನ!!! ಪ್ಯಾಕೇಜ್ ಸ್ಕ್ರಿಪ್ಟ್

ತುಂತುರು ಮಳೆ ಹನಿಯ ನಡುವೆ ಸಿಲಿಕಾನ್ ಸಿಟಿಯ ಮಂದಿ ನಗರದ ಯಡಿಯೂರು ಕೆರೆಯಲ್ಲಿ  ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.ಗೌರಿ- ಗಣೇಶ ಹಬ್ಬದ ಪ್ರಯುಕ್ತ ನಗರದ ನಾನಾ ಕಡೆಗಳಲ್ಲಿ ಕೂರಿಸಲಾಗಿದ್ದ, ಗಣಪತಿಗಳನ್ನು ಭವ್ಯ ಮೆರವಣಿಗೆ ಮಾಡುವ ಮೂಲಕ ಸಾಮೂಹಿಕವಾಗಿ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಿದರು. ವಿಘ್ನ ವಿನಾಯಕನಿಗೆ ಜೈ ಕಾರ ಕೂಗುವುದರ ಜೊತೆಗೆ ಗೌರಿತನಯನನ್ನು ಸಂಭ್ರಮದಿಂದಬಿಳ್ಕೋಡುತಿದ್ದರು.
ಇಂದು ಗಣೇಶ ಹಬ್ಬದ ಮೊದಲ ದಿನವಾದ್ದರಿಂದ ಮನೆಗಳಲ್ಲಿ ಕೂರಿಸಿದ್ದವರೆ ಹೆಚ್ಚಾಗಿ ಕುಟುಂಬ ಸಮೇತ ಆಗಮಿಸಿ ಗಣೇಶನನ್ನು ನಿಮಜ್ಜನ ಮಾಡುತ್ತಿದ್ದದ್ದು ಹೆಚ್ಚಾಗಿ ಕಂಡು ಬಂದಿತು.ಇದರ ಜೊತೆಗೆ ಈ ಬಾರಿ‌ ಬಿಬಿಎಮ್ ಪಿ ಪಿಒಪಿ ಗಣೇಶ ಮೂರ್ತಿಗಳ ಮಾರಟ ಮಾಡದಂತೆ ಕಟ್ಟು ನಿಟ್ಟಾಗಿ ಕ್ರಮ‌ಕೈಗೊಂಡಿದ್ದರಿಂದ ಹೆಚ್ಚಾಗಿ ಮಣ್ಣಿನ ಗಣೇಶ ಮೂರ್ತಿಗಳೆ ಕಂಡು ಬಂದಿದ್ದು ವಿಶೇಷವಾಗಿತ್ತು. Body:ಅಲ್ಲದೆ ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗೆನಡೆಯದಂತೆ ಮುನ್ನೆಚ್ಚರಿಕೆಯಾಗಿ ಯಡಿಯೂರು ಕೆರೆಬಳಿ ಬಿಗಿ ಪೊಲೀಸ್ ಬಂದೋ ಬಸ್ತ್‌ ಮಾಡಲಾಗಿತ್ತು.ಅಲ್ಲದೆ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗ ರಾತ್ರಿ ೧೧ ಗಂಟೆವರೆಗೆ ಮಾತ್ರ ಸಮಯ ನಿಗದಿಯಾಗಿ ಮಾಡಿದ್ದರು . ಅದರೆ ೧೧ ಗಂಟೆ ಯಾದರು ಸಹ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು
ಹೆಚ್ಚಿನ ಸಂಖ್ಯೆಯಲ್ಲಿ ಯಡಿಯೂರು ಕೆರೆಗೆ ಬರುತ್ತಿದ್ದ ಕಾರಣ ಕೆಲವರನ್ನು ಹಲಸೂರು ಕೆರೆ್ಗೆಗೆ ಹೋಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವಂತೆ ಪೊಲೀಸರುಸಾರ್ವಜನಿಕರಲ್ಲಿವಿನಂತಿ ಮಾಡುತ್ತಿದ್ದರು.
ಇನ್ನೂ ಯಡಿಯೂರು ಕೆರೆಯಲ್ಲಿ ಬಿಬಿಎಮ್ ಪಿ ನಿಗದಿ ಪಡಿಸಿದ್ದ ಸ್ಥಳದಲ್ಲಿ ಸಾರ್ವಜನಿಕರು ಗಣೇಶ
ಮೂರ್ತಿಗಳನ್ನು ಸ್ವಯಂ ಸೇವಕರಿಗೆ ನೀಡಿದರೆ ಸಾಕು ಸ್ವಯಂ ಸೇವಕರೆ ಕೆರೆಯಲ್ಲಿ ಗಣಪ ಮೂರ್ತಿಗಳ ವಿಸರ್ಜನೆ ಮಾಡುತ್ತಿದ್ದರು.ಇನ್ನೂ ಗಣೇಶನನ್ನು
ವಿಸರ್ಜಿಸಿದ ಯುವಕರು ಪ್ರಸಾದವನ್ನುಸಾರ್ವಜನಿಕರಿಗೆ
ವಿನಿಯೋಗ ಮಾಡಿಸಂಭ್ರಮದಿಂದಲೇ ಗಣಪನನ್ನು
ಬೀಳ್ಕೋಟ್ಟು ಮನೆಕಡೆ ಹೊರಡುತಿದ್ದರು.
.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.