ಬೆಂಗಳೂರು : ರಾಜ್ಯ ಸರ್ಕಾರ ನಾಳೆ ರಾತ್ರಿ 9 ರಿಂದ ಕೊರೊನಾ ಕರ್ಫ್ಯೂ ಹೇರಲು ಮುಂದಾಗಿದೆ. ಕೇವಲ ಬೆಳಗ್ಗೆ 6 ರಿಂದ 10 ಗಂಟೆಗೆ ತರಕಾರಿ ಹಣ್ಣಿಗೆ ಮಾತ್ರ ಅವಕಾಶ ಮಾಡಿ ಕೊಟ್ಟಿದೆ.
ಆದರೆ, ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಂಡಿ ತಿನಿಸುಗಳನ್ನು ಮಾರುವವರು, ಪಾನಿ ಪೂರಿ ವ್ಯಾಪಾರಗಾರರು, ಗೋಬಿ ಮಂಚೂರಿ ಮಾರುವವರು ಹಾಗೂ ಸಂಜೆ ವೇಳೆ ವ್ಯಾಪಾರ ಮಾಡುವ ಇತರಿರಬಹುದು. ಇವರೆಲ್ಲಾ 14 ದಿನ ಮನೆಯಲ್ಲೇ ಇದ್ದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅವರ ಜೀವನಕ್ಕೆ ಮತ್ತು ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ನಿರ್ದೇಶವನ್ನು ಕೊಟ್ಟು ಬೀದಿ ಬದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಕಠಿಣ ಕ್ರಮಕ್ಕೆ ಆಟೋ- ಟ್ಯಾಕ್ಸಿ ಚಾಲಕರಿಂದ ವಿರೋಧ
ಸರ್ಕಾರದ ನಿರ್ಲಕ್ಷ್ಯದಿಂದ ಕೊರೊನಾ ಹೆಚ್ಚಳವಾಗಿದೆ. ಇವರ ದುರಾಡಳಿತದಿಂದ ರಾಜ್ಯದ ಜನ ಬೆಲೆ ತೆರಬೇಕಾಗಿದೆ. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ರಾಜ್ಯದ ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಸರ್ಕಾರ ಬರಬೇಕು.
ಈ ರೀತಿ ಕರ್ಫ್ಯೂನಿಂದ ಚಾಲಕರು ಬೀದಿಗೆ ಬರುತ್ತಾರೆ. ಕೂಡಲೇ ಚಾಲಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಅಂತ ರಾಜ್ಯದ ಟ್ಯಾಕ್ಸಿ ಚಾಲಕರ ಒಕ್ಕೂಟ ಒತ್ತಾಯ ಮಾಡಿದೆ.
ಓದಿ: ಸೋಂಕಿತ ಶವಗಳ ಅಂತ್ಯಸಂಸ್ಕಾರ ಮಾಡಿ ಮಾದರಿಯಾದ ಮುಸ್ಲಿಂ ಯುವಕರ ತಂಡ.. ಇದು ಭಾವೈಕ್ಯತೆಯ ಪ್ರತೀಕ