ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ. ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಸಚಿವ ವಿ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಸಂಗಡಿಗರು ಹಾಗೂ ನಟ ಸೃಜನ್ ಲೋಕೇಶ್ ಸಂಗಡಿಗರ ನಡುವೆ ಗಲಾಟೆ ನಡೆದಿದೆ ಎಂದು ಕೆಲವು ಕಡೆ ವರದಿಯಾಗಿತ್ತು. ಸ್ಯಾಂಡಲ್ವುಡ್ ನಟರನ್ನೊಳಗೊಂಡ ಬ್ಯಾಡ್ಮಿಂಟನ್ ಟೂರ್ನಮೆಂಟ್ಗೆ ಸೃಜನ್ ಲೋಕೇಶ್ ತಂಡ ನಿತ್ಯ ತರಬೇತಿ ನಡೆಸುತ್ತಿತ್ತು. ಭಾನುವಾರ ತರಬೇತಿ ಮುಗಿದ ಬಳಿಕ ಏರು ಧ್ವನಿಯಲ್ಲಿ ಕಿರುಚಾಡಿದ ವಿಷಯಕ್ಕಾಗಿ ಗಲಾಟೆ ನಡೆದಿತ್ತು ಎಂದು ಕೆಲವೆಡೆ ವರದಿಯಾಗಿತ್ತು.
ಆದರೆ ಗಲಾಟೆ ವಿಚಾರವಾಗಿ ಎರಡೂ ಗುಂಪಿನವರಾಗಲಿ ಹಾಗೂ ಕಿಂಗ್ಸ್ ಕ್ಲಬ್ನ ಆಡಳಿತ ಮಂಡಳಿಯಾಗಲಿ ದೂರು ನೀಡದೇ ಇರುವುದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ..
-
ಸಾಮಾಜಿಕ ಜಾಲತಾಣಗಳಲ್ಲಿ ನನಗೂ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.
— Arun Somanna (@arunsomanna) November 2, 2022 " class="align-text-top noRightClick twitterSection" data="
">ಸಾಮಾಜಿಕ ಜಾಲತಾಣಗಳಲ್ಲಿ ನನಗೂ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.
— Arun Somanna (@arunsomanna) November 2, 2022ಸಾಮಾಜಿಕ ಜಾಲತಾಣಗಳಲ್ಲಿ ನನಗೂ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.
— Arun Somanna (@arunsomanna) November 2, 2022
ಇದನ್ನೂ ಓದಿ: ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್: ಸಂಘಟನೆಗಳ ವಿರುದ್ಧ ಮಹಿಳೆಯಿಂದ ಪೊಲೀಸರಿಗೆ ದೂರು!
ಆರೋಪ ಅಲ್ಲಗಳೆದ ಅರುಣ್ ಸೋಮಣ್ಣ: ಆರೋಪ ಅಲ್ಲಗಳೆದ ಅರುಣ್ ಸೋಮಣ್ಣ: ಘಟನೆಯ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅರುಣ್ ಸೋಮಣ್ಣ, ಇದೊಂದು ಸುಳ್ಳು ಸುದ್ದಿಯಾಗಿದೆ. ಆ ಥರಹದ ಯಾವುದೇ ಘಟನೆ ನಡೆದಿಲ್ಲ. ನನ್ನ ವಿರೋಧಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.