ETV Bharat / state

ಪುನಶ್ಚೇತನಕ್ಕೆ ಬಾರದ ಗುತ್ತಿಗೆದಾರರು: ದಾಸಪ್ಪ ಹೆರಿಗೆ ಆಸ್ಪತ್ರೆಗೇ ಬೇಕಿದೆ ಶಸ್ತ್ರಚಿಕಿತ್ಸೆ - undefined

ನೆನೆಗುದಿಗೆ ಬೆಂಗಳೂರಿನ ಬಿದ್ದಿರುವ ದಾಸಪ್ಪ ಹೆರಿಗೆ ಆಸ್ಪತ್ರೆಯನ್ನು ದುರಸ್ತಿ ಮಾಡಲು ಗುತ್ತಿಗೆದಾರರು ಮುಂಬರದ ಕಾರಣ ಪಾಲಿಕೆ ಕೆಆರ್​ಡಿಎಲ್ ಮೂಲಕ ಕಾಮಗಾರಿ ಮಾಡಲು ನಿರ್ಧರಿಸಿದೆ.

ದಾಸಪ್ಪ ಹೆರಿಗೆ ಆಸ್ಪತ್ರೆಗೇ ಬೇಕಿದೆ "ಶಸ್ತ್ರಚಿಕಿತ್ಸೆ"
author img

By

Published : Jun 24, 2019, 12:55 AM IST

Updated : Jun 24, 2019, 1:21 AM IST

ಬೆಂಗಳೂರು: ಇದು ಸುಮಾರು 50 ವರ್ಷಗಳಿಂದಲೂ ಅದೆಷ್ಟೋ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ. ರೋಗಿಗಳ ಸಹಾಯಕ್ಕೆಂದೇ ದಾನ ನೀಡಿದ್ದ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿತ್ತು. ಆದರೆ ದಿನ ಕಳೆದಂತೆಲ್ಲಾ ಈ ಆಸ್ಪತ್ರೆ ತನ್ನ ಬಲ ಕಳೆದುಕೊಳ್ತಾ ಬಂದಿರುವ ಆಸ್ಪತ್ರೆ ಇದೀಗ ನೆನೆಗುದಿಗೆ ಬಿದ್ದಿದೆ.

ಅಂದಹಾಗೆ, ಆ ಆಸ್ಪತ್ರೆ ಯಾವುದು ಅಂದ್ರಾ? ಅದುವೇ ಬಡ ರೋಗಿಗಳ ಪಾಲಿಗೆ ಇದ್ದ ಬಿಬಿಎಂಪಿಯ ದಾಸಪ್ಪ ತಿರುಮಲಮ್ಮ ಆಸ್ಪತ್ರೆ. ಸರಿಯಾಗಿದ್ದ ಆಸ್ಪತ್ರೆಯನ್ನು ಹೈಟೆಕ್ ಮಾಡೋದಾಗಿ ಹೇಳಿ ಕಳೆದ 8 ತಿಂಗಳ ಹಿಂದೆ ಕಾಮಗಾರಿ ಆರಂಭ ಮಾಡಲಾಗುತ್ತು. ಈಗ ಕಾಮಗಾರಿ ಮಾಡಲು ಗುತ್ತಿಗೆದಾರರು ಯಾರೂ ಇತ್ತ ಸುಳಿದಿಲ್ಲ.

ಈ ಹಿಂದೆ ಮೇಯರ್ ಆಗಿದ್ದ ಸಂಪತ್ ರಾಜ್ ಅವರ ಅವಧಿಯಲ್ಲಿ ಬಿಬಿಎಂಪಿಯ ಕೂಗಳತೆಯ ದೂರದಲ್ಲಿರುವ ದಾಸಪ್ಪ ಆಸ್ಪತ್ರೆಯನ್ನು ಹೈಟೆಕ್ ಮಾಡೋದಾಗಿ ಹೇಳಿ ಅಲ್ಲಿದ್ದ ರೋಗಿಗಳನ್ನು ಖಾಲಿ‌ ಮಾಡಿಸಲಾಗಿತ್ತು. ಆದರೆ ಎರಡು ಬಾರಿ ಟೆಂಡರ್ ಕರೆದರೂ, ಯಾವೊಬ್ಬ ಗುತ್ತಿಗೆದಾರರೂ ಕೂಡ ಆಸ್ಪತ್ರೆಯ ಕೆಲಸ ಮಾಡಲು ತಯಾರಿಲ್ವಂತೆ. ಯಾರೋ ಸಣ್ಣಪುಟ್ಟ ಗುತ್ತಿಗೆದಾರರು ಬಂದು ಅಲ್ವಸ್ವಲ್ಪ ಕೆಲಸ ಮಾಡುತ್ತಾರೆ. ಒಂದು ವಾರ ಎರಡು ವಾರ ಆದ ಮೇಲೆ ಅರ್ಧಂಬರ್ಧ ಕಾಮಗಾರಿ ಮಾಡಿ ಹೋಗುತ್ತಿದ್ದಾರೆ.

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಬಿಕೆಯವರು, ಕೆಆರ್​ಡಿಎಲ್ ಮೂಲಕ ಕಾಮಗಾರಿ ಮಾಡಲು ನಿರ್ಧರಿಸಲಾಗಿದೆ. ಅದಷ್ಟು ಬೇಗ ಕಾಮಗಾರಿ ಮುಗಿಸಲಾಗುವುದು ಎಂದಿದ್ದಾರೆ. ‌

ದಾಸಪ್ಪ ಹೆರಿಗೆ ಆಸ್ಪತ್ರೆ

ಆದರೆ ಕಾಮಗಾರಿ ಆರಂಭ ಮಾಡಿದಾಗ ಆಸ್ಪತ್ರೆಯಲ್ಲಿದ್ದ ಬಡ ರೋಗಿಗಳಿಗೆ ಉಪಯೋಗವಾಗಬೇಕಿದ್ದ ಲಕ್ಷಾಂತರ ರೂ. ಮೌಲ್ಯದ ಮಾತ್ರೆಗಳು, ಗ್ಲೂಕೋಸ್‌ ಸೀಸಗಳು, ಸಿರೆಂಜ್, ಆಪರೇಷನ್​ಗಾಗಿ ಬಳಸುವ ವಸ್ತುಗಳು ಸೇರಿದಂತೆ ಇನ್ನು‌ ಹಲವು ವಸ್ತುಗಳು ಈ ಹಳೆ ಕಟ್ಟಡದಲ್ಲೆ ಅನುಪಯುಕ್ತವಾಗಿ ಬಿದ್ದಿದೆ. ಇದನ್ನು ಬೇರೆ ಯಾವುದಾದರೂ ಬಿಬಿಎಂಪಿ ಆಸ್ಪತ್ರೆಗೆ ನೀಡಿದರೆ ರೋಗಿಗಳಿಗೆ ಅನುಕೂಲವಾದರೂ ಆಗುತ್ತದೆ. ಆದರೆ ಅಧಿಕಾರಿಗಳು ಇವ್ಯಾವುದರೆಡೆಗೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದನೇ‌ ಇರಲಿ ಹೆರಿಗೆ ಆಸ್ಪತ್ರೆಗಳಲ್ಲೇ ಹೆಸರುವಾಸಿಯಾಗಿದ್ದ ದಾನಪ್ಪ ಆಸ್ಪತ್ರೆ ಇದೀಗ ದಿಕ್ಕುದಿಸೆಯಿಲ್ಲದೆ, ಪಾಳು ಬಿದ್ದಿದೆ.

ಈ ಹಿಂದೆ ಹೆರಿಗೆ ಕೊಠಡಿಯೊಳಗೆ ಮೇಲ್ಚಾವಣಿ ಕುಸಿದಿತ್ತು:

ಅಲ್ಲದೆ ದಾಸಪ್ಪ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಹೆರಿಗೆ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ನಂತರ ವಿಷಯ ತಿಳಿದು ಆಗಿನ ಮೇಯರ್, ಎಂಎಲ್ ಕೊಠಡಿಗೆ ಬೀಗ ಹಾಕಿಸಿದರು. ಆಗಿನಿಂದ ಆಸ್ಪತ್ರೆಯ ಪುನಶ್ಚೇತನದ ಕೆಲಸ ನಡೆಯುತ್ತಿದೆ.

ಇನ್ನು ಗುತ್ತಿಗೆದಾರರು ಬರದ ಕಾರಣ ಪಾಲಿಕೆ ಕೆಆರ್​ಡಿಎಲ್ ಮೂಲಕ ಕಾಮಗಾರಿ ಮಾಡಲು ನಿರ್ಧರಿಸಿದೆ. 60 ಲಕ್ಷದ ಕಾಮಗಾರಿ ಕೆಲಸ ಇದಾಗಿದ್ದು, 40 ಲಕ್ಷ ರೂ. ಪಾಲಿಕೆ ನೀಡಿದ್ದು, 20 ಲಕ್ಷ ರೂ. ನಗರೋತ್ಥಾನದ ಮೂಲಕ ಸಿಗಬೇಕಿದೆ. ಸದ್ಯ ಸಾರ್ವಜನಿಕರ ಬೇಡಿಕೆ ಮೇರೆಗೆ ಒಪಿಡಿ ಸೇವೆಯನ್ನ ಮಾತ್ರ ಆಸ್ಪತ್ರೆಯ ಒಂದು ಭಾಗದಲ್ಲಿ ನೀಡಲಾಗುತ್ತಿದೆ. ಇನ್ನು ಹೆರಿಗೆ ಕೇಸ್​​ಗಳು ಬಂದರೆ‌ ಪಕ್ಕದ ಜೆ.ಸಿ ರೋಡ್​​ನಲ್ಲಿರುವ ಸಿದ್ದಯ್ಯ ರೋಡ್ ಬಳಿಯ ರೆಫರೆಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇನ್ನು ಆಸ್ಪತ್ರೆಯು ಬಹಳ ಹಳೆಯದಾಗಿರುವುದರಿಂದ ಪುನಶ್ಚೇತನಕ್ಕೆ ಸ್ಯಾನಿಟರಿ ಬ್ಲಾಕ್ ಆಗಿದ್ದು ಅದನ್ನ ಸರಿ ಮಾಡಿಸುವುದೇ ದೊಡ್ಡ ಸಮಸ್ಯೆ ಆಗಿದೆ. ಅಷ್ಟೇ ಅಲ್ಲದೇ 1946ರ ಕಟ್ಟಡ ಇದಾಗಿದ್ದು, ಎಲೆಕ್ಟ್ರಿಕ್ ಕನೆಕ್ಷನ್ ಕೂಡ ಕಷ್ಟವಾಗುತ್ತಿದೆ.

Intro:ಪುನಶ್ಚೇತನಕ್ಕೆ ಬಾರದ ಗುತ್ತಿಗೆದಾರರು;ನೆನೆಗುದಿಗೆ ಬಿದ್ದ ದಾಸಪ್ಪ ಹೆರಿಗೆ ಆಸ್ಪತ್ರೆ..!

ಬೆಂಗಳೂರು: ಆ ಆಸ್ಪತ್ರೆ ಸುಮಾರು 50 ವರ್ಷಗಳಿಂದಲೂ ಅದೆಷ್ಟೋ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ. ರೋಗಿಗಳ ಸಹಾಯಕ್ಕೆಂದೆ ದಾನ ನೀಡದ್ದ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿತ್ತು. ದಿನ ಕಳೆದಂತೆಲ್ಲಾ ಈ ಆಸ್ಪತ್ರೆ ತನ್ನ ಬಲವನ್ನು ಕಳೆದುಕೊಳ್ತಾ ಬಂತು. ಒಂದು ಕಾಲದಲ್ಲಿ ಅಷ್ಟೊಂದು ಹೆಸರು ವಾಸಿಯಾಗಿದ್ದ ಆಸ್ಪತ್ರೆ ಇದೀಗ ನೋಡೋರು ಕೂಡಾ ದಿಕ್ಕಿಲ್ಲಂದಂತಾಗಿ ನೆನೆಗುದಿಗೆ ಬಿದ್ದಿದೆ.

ಅಂದಹಾಗೇ, ಆ ಆಸ್ಪತ್ರೆ ಯಾವುದು ಅಂದ್ರಾ? ಅದುವೇ ಬಡ ರೋಗಿಗಳ ಪಾಲಿಗೆ ಇದ್ದ ಬಿಬಿಎಂಪಿಯ ದಾಸಪ್ಪ ತಿರುಮಲಮ್ಮ
ಆಸ್ಪತ್ರೆ.. ನೆಟ್ಟಗಿದ್ದ ಆಸ್ಪತ್ರೆಯನ್ನು ಹೈಟೆಕ್ ಮಾಡೋದಾಗಿ ಹೇಳಿ ಕಳೆದ ಎಂಟು ತಿಂಗಳ ಹಿಂದೆ ಕಾಮಗಾರಿ ಆರಂಭ ಮಾಡಿದ್ದರು.. ಈಗ ಕಾಮಗಾರಿ ಮಾಡಲು ಗುತ್ತಿಗೆದಾರರು ಯಾರು ಇತ್ತ ತಲೆ ಇಟ್ಟು ಮಲಗ್ತಿಲ್ವಂತೆ..

ಈ ಹಿಂದೆ ಮೇಯರ್ ಆಗಿದ್ದ ಸಂಪತ್ ರಾಜ್ ಅವರ ಅವಧಿಯಲ್ಲಿ ಬಿಬಿಎಂಪಿಯ ಕೂಗಳತೆಯ ದೂರದಲ್ಲಿರುವ ದಾಸಪ್ಪ ಆಸ್ಪತ್ರೆಯನ್ನು ಹೈಟೆಕ್ ಮಾಡೋದಾಗಿ ಹೇಳಿ ಅಲ್ಲಿದ್ದ ರೋಗಿಗಳನ್ನು ಖಾಲಿ‌ ಮಾಡಿಸಿದರು.. ಆದರೆ ಎರಡು ಬಾರಿ ಟೆಂಡರ್ ಕರೆದರೂ, ಯಾವೊಬ್ಬ ಗುತ್ತಿಗೆದಾರರು ಕೂಡ ಆಸ್ಪತ್ರೆಯ ಕೆಲಸ ಮಾಡಲು ಟೆಂಡರ್ ತಗೋಳೋಕೆ ಬರುತ್ತಿಲ್ವಂತೆ.. ಯಾರೋ ಸಣ್ಣ ಪುಟ್ಟ ಗುತ್ತಿಗೆದಾರರು ಬಂದು ಅಲ್ವ ಸ್ವಲ್ಪ ಕೆಲಸ ಮಾಡುತ್ತಾರೆ..‌ ಒಂದು ವಾರ ಎರಡು ವಾರ ಆದ ಮೇಲೆ ಅರ್ಧಂಬರ್ಧ ಕಾಮಗಾರಿ ಮಾಡಿ ಹೋಗುತ್ತಿದ್ದಾರೆ.. ಈ ಸಂಬಂಧ ಮೇಯರ್ ಗಂಗಾಂಭಿಕೆಯವರನ್ನ ಕೇಳಿದರೆ ಕೆಆರ್ಐಡಿಎಲ್ ಮೂಲಕ ಕಾಮಗಾರಿ ಮಾಡಲು ನಿರ್ಧರಿಸಲಾಗಿದೆ.. ಅದಷ್ಟು ಬೇಗ ಕಾಮಗಾರಿ ಮುಗಿಸೋದಾಗಿ ಹೇಳಿದ್ದಾರೆ..‌

ಆದರೆ ಕಾಮಗಾರಿ ಆರಂಭ ಮಾಡಿದಾಗ ಆಸ್ಪತ್ರೆಯಲ್ಲಿದ್ದ  ಬಡ ರೋಗಿಗಳಿಗೆ ಉಪಯೋಗವಾಗಬೇಕಿದ್ದ ಲಕ್ಷಾಂತರ ರೂಪಾಯಿಯ ಮಾತ್ರೆಗಳು, ಸಿರಫ್ಬಾಟೆಲ್ಗಳು, ಗ್ಲೂಕೋಸ್‌ ಬಾಟೆಲ್ಗಳು, ಸಿರೆಂಜ್, ಆಪರೇಷನ್‌ ಗಾಗಿ ಬಳಸುವ ವಸ್ತುಗಳು ಸೇರಿದಂತೆ ಇನ್ನು‌ ಹಲವು ವಸ್ತುಗಳು ಈ ಹಳೆ ಕಟ್ಟಡದಲ್ಲಿ ಇದೆ.. ಇದನ್ನು ಬೇರೆಯ ಯಾವುದಾದರೂ ಬಿಬಿಎಂಪಿ ಆಸ್ಪತ್ರೆಗಾದರು ನೀಡಿದ್ದರೆ ರೋಗಿಗಳಿಗೆ ಅನುಕೂಲವಾದರು ಆಗುತ್ತಿತ್ತು.. ಆದರೆ ಅಧಿಕಾರಿಗಳು ಅದನ್ನು ಮಾಡಿಲ್ಲ.

ಅದನೇ‌ ಇರಲಿ ಹೆರಿಗೆ ಆಸ್ಪತ್ರೆಗಳಲ್ಲೇ ಹೆಸರುವಾಸಿಯಾಗಿದ್ದ ದಾನಪ್ಪ ಆಸ್ಪತ್ರೆ ಇದೀಗ ದಿಕ್ಕುದಿಸೆಯಿಲ್ಲದೆ, ಪಾಳು ಬಿದ್ದಿದೆ ಇನ್ನು ಗುತ್ತಿಗೆದಾರರು ಬರದ ಕಾರಣ ಪಾಲಿಕೆ ಕೆಆರ್ಐಡಿಎಲ್ ಮೂಲಕ ಕಾಮಗಾರಿ ಮಾಡಲು ನಿರ್ಧರಿಸಿದೆ. 60 ಲಕ್ಷದ ಕಾಮಗಾರಿ ಕೆಲಸ ಇದಾಗಿದ್ದು, 40ಲಕ್ಷ ಪಾಲಿಕೆ ನೀಡಿದ್ದು, 20 ಲಕ್ಷ ನಗರೋತ್ಥಾನದ ಮೂಲಕ ಕೆಲಸ ನಡೆಯಬೇಕಿದೆ..

ಸದ್ಯ ಸಾರ್ವಜನಿಕರ ಬೇಡಿಕೆ ಬೇರೆಗೆ ಒಪಿಡಿ ಸೇವೆಯನ್ನ ಮಾತ್ರ ಆಸ್ಪತ್ರೆಯ ಒಂದು ಭಾಗದಲ್ಲಿ ನೀಡಲಾಗುತ್ತಿದೆ.. ಇನ್ನು ಹೆರಿಗೆ ಕೇಸ್ ಗಳು ಬಂದರೆ‌ ಪಕ್ಕದ ಜೆ ಸಿ ರೋಡ್ ನಲ್ಲಿರುವ ಸಿದ್ದಯ್ಯ ರೋಡ್ ಬಳಿಯ ರಫರೆಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ..

==================

*ಈ ಹಿಂದೆ ಹೆರಿಗೆ ರೂಮಿನೊಳಗೆ ಮೇಲ್ಚಾವಣಿ ಕುಸಿದಿತ್ತು!!!*

ಅಂದಹಾಗೇ, ದಾಸಪ್ಪ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಹೆರಿಗೆ ಕೊಠಡಿಯಲ್ಲಿ ಮೇಲ್ಛಾವಣಿ ಕುಸಿದಿ ಬಿದಿತ್ತು. ನಂತರ ವಿಷಯ ತಿಳಿದು ಆಗಿನ ಮೇಯರ್, ಎಂಎಲ್ ಕೊಠಡಿಗೆ ಬೀಗ ಹಾಕಿಸಿದರು.. ಆಗಿನಿಂದ ಆಸ್ಪತ್ರೆಯ ಪುನಶ್ಚೇತನದ ಕೆಲಸ ನಡೆಯುತ್ತಿದೆ..

ಇನ್ನು ಆಸ್ಪತ್ರೆಯು ಬಹಳ ಹಳೆಯದಾಗಿ ಇರುವುದರಿಂದ ಪುನಶ್ಚೇತನಕ್ಕೆ ಸ್ಯಾನಿಟರಿ ಬ್ಲಾಕ್ ಆಗಿದ್ದು ಅದನ್ನ ಸರಿ ಮಾಡಿಸುವುದೇ ದೊಡ್ಡ ಸಮಸ್ಯೆ ಆಗಿದೆ.. ಅಷ್ಟೇಲ್ಲದೇ 1946ದ ಕಟ್ಟಡ ಇದಾಗಿದ್ದು, ಎಲೆಕ್ಟ್ರಿಕ್ ಕನೆಕ್ಷನ್ ಕೂಡ ಕಷ್ಟವಾಗುತ್ತಿದೆ..ಇದೆಲ್ಲವನ್ನೂ ಸರಿ ಮಾಡಿಸಲು ಇನ್ನು 17-19 ಲಕ್ಷದಷ್ಟು ಹಣ ಬೇಕಾಗಿದೆ..
ಈ ಕಾಮಗಾರಿ ನಿಧಾನಗತಿಗೆ ಮತ್ತೊಂದು ಕಾರಣ ಚುನಾವಣಾ ಎಫೆಕ್ಟ್ ಅಂತಲ್ಲೂ ಹೇಳಲಾಗುತ್ತಿದೆ.. ಸರಿಯಾದ ಸಮಯಕ್ಕೆ‌ ಹಣ ಬಿಡುಗಡೆ ಆದರೆ ಅದಷ್ಟು ಬೇಗ ಕೆಲಸ ಮುಗಿಯಲಿದೆ..‌

KN_BNG_02_23_DASAPA_HOSPITAL_SCRIPT_STORY_DEEPA_7201801

ಬೈಟ್; ಗಂಗಾಂಬಿಕೆ- ಮೇಯರ್Body:..Conclusion:..
Last Updated : Jun 24, 2019, 1:21 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.