ETV Bharat / state

ಅನ್‌ಲಾಕ್ ಬಳಿಕ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಕೆ; ವಿತ್ತೀಯ ಕೊರತೆಯೇ ಸವಾಲು! - ರಾಜ್ಯದ ಆರ್ಥಿಕತೆ

ಆದಾಯ ಮೂಲ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಒಟ್ಟು ವೆಚ್ಚ, ಒಟ್ಟು ಆದಾಯದಿಂದ ಅಧಿಕವಾಗಲಿದ್ದು, ಆದಾಯ ಕೊರತೆ ಎದುರಾಗಲಿದೆ. ಹೀಗಾಗಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿಯ ಶೇ.3ರಷ್ಟು ವಿತ್ತೀಯ ಕೊರತೆ ಮಿತಿ ಮೀರುವುದು ಬಹುತೇಕ ಖಚಿತವಾಗಿದೆ.

Bangalore
ಬೆಂಗಳೂರು
author img

By

Published : Jul 6, 2020, 7:59 PM IST

ಬೆಂಗಳೂರು: ಎರಡು ತಿಂಗಳ ಲಾಕ್‌ಡೌನ್​ನಿಂದ ಸೊರಗಿದ್ದ ರಾಜ್ಯದ ಆರ್ಥಿಕತೆ ಇದೀಗ ಅನ್​ಲಾಕ್ ಬಳಿಕ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿಯ ತೆರಿಗೆ ಸಂಗ್ರಹದ ಪ್ರಮಾಣ ಕಡಿಮೆ ಇದ್ದು, ಮಂದಗತಿಯ ರಾಜಸ್ವ ಸ್ವೀಕೃತಿ ಇದೀಗ ಸರ್ಕಾರಕ್ಕೆ ವಿತ್ತೀಯ ಕೊರತೆ ಮೀರುವ ತಲೆನೋವು ಸೃಷ್ಟಿಸಿದೆ.

ಲಾಕ್‌ಡೌನ್ ರಾಜ್ಯದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿತ್ತು. ತೆರಿಗೆ ಮೂಲಕ್ಕೇ ಲಾಕ್‌ಡೌನ್ ಕೊಡಲಿ ಏಟು ಹಾಕಿದ್ದ ಕಾರಣ ರಾಜ್ಯದ ಖಜಾನೆ ಬರಿದಾಗಿತ್ತು. ಮೇ ತಿಂಗಳಿಂದ ಸರ್ಕಾರ ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭಿಸಿದಾಗಿನಿಂದ ಆರ್ಥಿಕತೆಯಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಅನ್‌ಲಾಕ್​​ನಲ್ಲಿ ಸೊರಗಿದ್ದ ರಾಜ್ಯದ ಬೊಕ್ಕಸ ನಿಧಾನವಾಗಿ ಹಿಗ್ಗಲಾರಂಭಿಸಿದೆ.

ಅನ್‌ಲಾಕ್ ಬಳಿಕ ಚೇತರಿಕೆ ಕಾಣುತ್ತಿದೆ ರಾಜ್ಯದ ಆರ್ಥಿಕತೆ

ಅನ್‌ಲಾಕ್ ಬಳಿಕದ ತೆರಿಗೆ ಸಂಗ್ರಹ ವಿವರ ಹೀಗಿದೆ..

  • ಜಿಎಸ್​ಟಿ ಸಂಗ್ರಹದ ಗತಿ

ರಾಜ್ಯದ ತೆರಿಗೆ ಸಂಗ್ರಹದಲ್ಲಿ ಅತಿ ದೊಡ್ಡ ಕೊಡುಗೆ ಇರುವುದು ವಾಣಿಜ್ಯ ತೆರಿಗೆ‌. ಲಾಕ್‌ಡೌನ್ ಸಮಯದಲ್ಲಿ ವಾಣಿಜ್ಯ ತೆರಿಗೆ (ಜಿಎಸ್​ಟಿ) ಸಂಗ್ರಹ ಬಹುತೇಕ ಸ್ತಬ್ದವಾಗಿತ್ತು. ಆದರೆ ಮೇ ತಿಂಗಳ ಅನ್‌ಲಾಕ್ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಚೇತರಿಕೆ ಕಾಣುತ್ತಿದ್ದ ಹಾಗೆಯೇ ಜಿಎಸ್​ಟಿ ಸಂಗ್ರಹವೂ ಸುಧಾರಿಸಲು ಪ್ರಾರಂಭವಾಯಿತು. ಅದರಂತೆ ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಜಿಎಸ್​ಟಿ ಸಂಗ್ರಹ ಸುಮಾರು 6710 ಕೋಟಿ ರೂ. ಆಗಿದೆ. ಜುಲೈ 6ಕ್ಕೆ ಜಿಎಸ್​ಟಿ ತೆರಿಗೆ ಫೈಲ್ ಮಾಡಲು ಕೊನೆಯ ದಿನವಾಗಿದ್ದು ಸುಮಾರು 2,500 ಕೋಟಿ ರೂ. ಅಧಿಕ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ರೂಪದಲ್ಲಿ ಮೇ ನಲ್ಲಿ 567 ಕೋಟಿ ರೂ. ಸಂಗ್ರಹಿಸಲಾಗಿದೆ. ಜೂನ್ ತಿಂಗಳ ಅಂಕಿ-ಅಂಶ ಇನ್ನೂ ಬರಬೇಕಾಗಿದ್ದು, ಸುಮಾರು 700-800 ಕೋಟಿ ರೂ. ಸಂಗ್ರಹದ ನಿರೀಕ್ಷೆ ಇದೆ.

  • ಅಬಕಾರಿ ತೆರಿಗೆಯ ಸಂಗ್ರಹ

ಅಬಕಾರಿ ತೆರಿಗೆ ರಾಜ್ಯದ ಬೊಕ್ಕಸ ತುಂಬಿಸುವ ಮತ್ತೊಂದು ಪ್ರಮುಖ ಆದಾಯ ಮೂಲ. ಅನ್​ಲಾಕ್​ ಬಳಿಕ ಅಬಕಾರಿ ತೆರಿಗೆ ಸಂಗ್ರಹದಲ್ಲೂ ಉತ್ತಮ ಚೇತರಿಕೆ ಕಾಣುತ್ತಿದೆ. ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ 1387.20 ಕೋ.ರೂ. ಅಬಕಾರಿ ತೆರಿಗೆ ಸಂಗ್ರಹಿಸಲಾಗಿದೆ. ಅದೇ ಜೂನ್ ನಲ್ಲಿ 2459.56 ಕೋಟಿ ರೂ.ಗೆ ಅಬಕಾರಿ ತೆರಿಗೆ ಸಂಗ್ರಹ ಏರಿಕೆ ಕಂಡಿದೆ. ಎರಡು ತಿಂಗಳಲ್ಲಿ ಒಟ್ಟು 3846.76 ಕೋಟಿ ರೂ. ಆದಾಯ ಸಂಗ್ರಹ ಮಾಡಲಾಗಿದೆ.

  • ಮುದ್ರಾಂಕ ಮತ್ತು ನೋಂದಣಿ ಶುಲ್ಕ

ಇತ್ತ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇಲಾಖೆ ನೀಡಿರುವ ಮಾಹಿತಿಯಂತೆ ಮೇ ತಿಂಗಳಲ್ಲಿ ರಾಜ್ಯಾದ್ಯಂತ 397 ಕೋಟಿ ರೂ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹಿಸಲಾಗಿದೆ. ಅದೇ ಜೂನ್ ನಲ್ಲಿ ಶುಲ್ಕ ಸಂಗ್ರಹ 713 ಕೋಟಿ ರೂ.ಗೆ ಏರಿಕೆಯಾಗಿದೆ.

  • ಸಾರಿಗೆ ಇಲಾಖೆ ಆದಾಯ ಸಂಗ್ರಹ

ಇತ್ತ ಸಾರಿಗೆ ಇಲಾಖೆಯೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಅನ್​ಲಾಕ್ ಬಳಿಕ ಹೊಸ ವಾಹನಗಳ ಖರೀದಿ, ನೋಂದಣಿ ಹೆಚ್ಚಾಗುತ್ತಿದ್ದು, ತೆರಿಗೆ ರೂಪದಲ್ಲಿ ಆದಾಯ ಸಂಗ್ರಹ ಹೆಚ್ಚಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆ ನೀಡಿದ ಅಂಕಿ ಅಂಶ ಪ್ರಕಾರ ಸಾರಿಗೆ ಇಲಾಖೆಯು ಮೋಟಾರು ವಾಹನ ತೆರಿಗೆ ರೂಪದಲ್ಲಿ ಮೇ ನಲ್ಲಿ 190.93 ಕೋಟಿ ರೂ. ಸಂಗ್ರಹಿಸಿದೆ. ಅದೇ ಜೂನ್ ನಲ್ಲಿ 359.17 ಕೋಟಿ ರೂ. ಆದಾಯ ಸಂಗ್ರಹ ಏರಿಕೆ ಕಂಡಿದೆ.

  • ವಿತ್ತೀಯ ಕೊರತೆಯ ಭೀತಿಯಲ್ಲಿ ಸರ್ಕಾರ

ಅನ್‌ಲಾಕ್ ಆದ ಬಳಿಕ ರಾಜ್ಯದ ಆದಾಯ ಸಂಗ್ರಹದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಆದಾಯ ಸಂಗ್ರಹ ಇನ್ನೂ ಕುಂಠಿತವಾಗಿರುವುದು ಆರ್ಥಿಕ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಮೇ ತಿಂಗಳಲ್ಲಿ ಸರ್ಕಾರ 4,443 ಕೋ.ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದ್ದರೆ, ಜೂನ್​ನಲ್ಲಿ 4615 ಕೋ.ರೂ. ತೆರಿಗೆ ಸಂಗ್ರಹಿಸಿತ್ತು. ಇತ್ತ ಅಬಕಾರಿ ಇಲಾಖೆ ಮೇ ತಿಂಗಳಲ್ಲಿ 2,052 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. ಜೂನ್ ನಲ್ಲಿ 2405 ಕೋಟಿ ರೂ. ಸಂಗ್ರಹಿಸಿತ್ತು. ಅದೇ ರೀತಿ ಕಳೆದ ವರ್ಷ ಮೋಟಾರು ತೆರಿಗೆ ಮೇ ತಿಂಗಳಲ್ಲಿ ಸಂಗ್ರಹವಾಗಿದ್ದು 575 ಕೋಟಿ ರೂ. ಹಾಗೂ ಜೂನ್‌ನಲ್ಲಿ 487 ಕೋಟಿ ರೂ. ಸಂಗ್ರಹವಾಗಿತ್ತು.

ಇನ್ನು ಕಳೆದ ವರ್ಷ ಮುದ್ರಾಂಕ ಮತ್ತು ನೋಂದಣಿ ಶುಲ್ಕ ರೂಪದಲ್ಲಿ ಮೇನಲ್ಲಿ 1,022 ಕೋಟಿ ರೂ. ಸಂಗ್ರಹವಾಗಿತ್ತು. ಜೂನ್ ನಲ್ಲಿ 989 ಕೋಟಿ ರೂ. ಸಂಗ್ರಹವಾಗಿತ್ತು.ಈ ಬಾರಿ ತರಿಗೆ ಸಂಗ್ರಹದಲ್ಲಿ ಭಾರೀ ಕುಂಠಿತವಾಗಿದ್ದು, ಸಂಪೂರ್ಣ ಚೇತರಿಕೆ ಕಾಣಲು ಇನ್ನೂ ಐದಾರು ತಿಂಗಳು ಬೇಕಾಗಬಹುದು ಎಂಬುದು ಅಧಿಕಾರಿಗಳ ಆತಂಕ. 2020-21 ಬಜೆಟ್​ನಲ್ಲಿ ಸರ್ಕಾರದ ನಿವ್ವಳ ಆದಾಯ ಸಂಗ್ರಹದ ಗುರಿ 17,9919.76 ಕೋ.ರೂ. ಆಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಆದಾಯ ಗುರಿ ತಲುಪುವುದು ಕಷ್ಟಸಾಧ್ಯವಾಗಿದೆ. ರಾಜ್ಯ ಸರ್ಕಾರ 2020-21 ಸಾಲಿನಲ್ಲಿ ಶೇ.2.55 ವಿತ್ತೀಯ ಕೊರತೆಯ ಮಿತಿಯನ್ನು ಇರಿಸಿದೆ. ಆದರೆ ಈ ಬಾರಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹೆಚ್ಚಿನ ಖರ್ಚು ವೆಚ್ಚಗಳನ್ನು ಮಾಡುತ್ತಿದೆ.

ಇತ್ತ ಆದಾಯ ಮೂಲ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಒಟ್ಟು ವೆಚ್ಚ, ಒಟ್ಟು ಆದಾಯಕ್ಕಿಂತ ಅಧಿಕವಾಗಲಿದ್ದು, ಆದಾಯ ಕೊರತೆ ಎದುರಾಗಲಿದೆ. ಹೀಗಾಗಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿಯ ಶೇ.3ರಷ್ಟು ವಿತ್ತೀಯ ಕೊರತೆ ಮಿತಿ ಮೀರುವುದು ಬಹುತೇಕ ಖಚಿತವಾಗಿದೆ. ಆದಾಯ ಸಂಗ್ರಹ ಇದೇ ಗತಿಯಲ್ಲಿದ್ದರೆ, ಈ ಬಾರಿ ವಿತ್ತೀಯ ಕೊರತೆ ಸುಮಾರು ಶೇ.5ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿತ್ತೀಯ ಕೊರತೆ ಹೆಚ್ಚಾದರೆ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಾಲದ ಮೊರೆ ಹೋಗಬೇಕಾಗುತ್ತದೆ. ಇದು ಸರ್ಕಾರದ ಬೊಕ್ಕಸದ ಮೇಲೆ ಭಾರೀ ಹೊರೆಯನ್ನು ಹಾಕಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.