ETV Bharat / state

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಪೊರೇಟರ್ ಇಮ್ರಾನ್ ಪಾಷಾ ಅರ್ಜಿ ವಿಚಾರಣೆ

ಜೂನ್ 8 ರಂದು ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಬಿಡುಗಡೆ ಆಗಿ ರೋಡ್ ಶೋ ನಡೆಸಿದ್ದರು. ಈ ಕುರಿತು ಜೆ ಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇಮ್ರಾನ್ ಪಾಷಾ ಸೇರಿ ಒಟ್ಟು 27 ಜನರನ್ನ ವಶಕ್ಕೆ ಪಡೆಯಲಾಗಿತ್ತು.

ಕಾರ್ಪೊರೇಟರ್ ಇಮ್ರಾನ್ ಪಾಷಾ ಅರ್ಜಿ ವಿಚಾರಣೆ
ಕಾರ್ಪೊರೇಟರ್ ಇಮ್ರಾನ್ ಪಾಷಾ ಅರ್ಜಿ ವಿಚಾರಣೆ
author img

By

Published : Jun 22, 2020, 11:29 AM IST

ಬೆಂಗಳೂರು: ಇಂದು ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಸಹಚರರ ಅರ್ಜಿ ವಿಚಾರಣೆಯು, ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದಲ್ಲಿ ‌ನಡೆಯಲಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರುವ ನಿರೀಕ್ಷೆಯಲ್ಲಿ ಇಮ್ರಾನ್ ಪಾಷಾ ಇದ್ದಾರೆ.

ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೋವಿಡ್ ಭೀತಿ ಮರೆತು, ಗುಂಪು ಗೂಡಿ ಸಂಭ್ರಮಾಚರಣೆ ಮಾಡಿ ಕಾನೂನು ಉಲ್ಲಂಘನೆ ಆರೋಪದಡಿ ಜೈಲು ಸೇರಿದ್ದಾರೆ.

ಜೂನ್ 8 ರಂದು ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಬಿಡುಗಡೆ ಆಗಿ ರೋಡ್ ಶೋ ನಡೆಸಿದ್ದರು. ಈ ಕುರಿತು ಜೆ ಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇಮ್ರಾನ್ ಪಾಷಾ ಸೇರಿ ಒಟ್ಟು 27 ಜನರನ್ನ ವಶಕ್ಕೆ ಪಡೆಯಲಾಗಿತ್ತು.

ಓದಿ:ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಬಿಗ್ ಶಾಕ್: ಪೊಲೀಸ್ ಇಲಾಖೆಯಲ್ಲಿ 67 ಕೊರೊನಾ ಕೇಸ್​​ ಪತ್ತೆ

ಇದರಲ್ಲಿ 23 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿ ಎಸಿಎಂಎಂ ಕೋರ್ಟ್ ಆದೇಶ ನೀಡಿತ್ತು. ಪಾಷಾ ಕೊರೊನಾಗೆ ತುತ್ತಾದ ಕಾರಣ ಜೈಲಿನಲ್ಲಿ ಪ್ರತ್ಯೇಕವಾಗಿರಿಸಿ ನೋಡಿಕೊಳ್ಳಲಾಗಿತ್ತು.‌

ಪಾಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ಮನೆಯಲ್ಲೇ ಕ್ವಾರಂಟೈನ್ ಆಗಲು ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಈ ನಡುವೆ ಆಸ್ಪತ್ರೆಯಿಂದ ಹೊರ ಬಂದ ಇಮ್ರಾನ್ ಬೆಂಬಲಿಗರ ಜೊತೆ ರ‍್ಯಾಲಿ ಮಾಡಿದ್ದರು. ತಕ್ಷಣ ಇದರ ಗಂಭೀರತೆ ಅರಿತು ಜೆ ಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಪೊರೇಟರ್​ ಪಾಷಾ ಅವರನ್ನು ಬಂಧಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.