ETV Bharat / state

ಶಿಕ್ಷಣ ನೀತಿ ಸ್ವಾಯತ್ತತೆಯ ಪರಿಕಲ್ಪನೆ.. ಸಾಧ್ಯತೆಗಳುಂಟಾ ಇಲ್ಲ ಸವಾಲುಗಳೇ ಜಾಸ್ತಿನಾ..? - ಶಿಕ್ಷಣ ತಜ್ಞರು

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದಿದ್ದು, ಸ್ವಾಯತ್ತತೆಯ ಪರಿಕಲ್ಪನೆಯ ಬಗ್ಗೆ ಪರ ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಮುಂದಿನ 15 ವರ್ಷಗಳಲ್ಲಿ ಪದವಿ ಕಾಲೇಜುಗಳು ಸ್ವಾಯತ್ತತೆ ಸಾಧಿಸಲು ಇರುವ ಸವಾಲುಗಳ ಕುರಿತಾಗಿ ಒಂದು ವರದಿ ಇಲ್ಲಿದೆ.

The concept of educational policy autonomy
ಸ್ವಾಯತ್ತತೆಯ ಪರಿಕಲ್ಪನೆಯ ಬಗ್ಗೆ ಪರ-ವಿರೋಧದ ಮಾತು
author img

By

Published : Sep 7, 2020, 3:08 PM IST

ಬೆಂಗಳೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿದೆ. ಇದರ ಪ್ರಕಾರ ವಿಶ್ವ ವಿದ್ಯಾಲಯಗಳಿಗೆ ಸಂಯೋಜಿತವಾಗಿರುವ ಎಲ್ಲಾ ಪದವಿ ಕಾಲೇಜುಗಳು, ಮುಂದಿನ 15 ವರ್ಷಗಳಲ್ಲಿ ಸ್ವಾಯತ್ತ ಸಂಸ್ಥೆಗಳಾಗಿ ಪರಿವರ್ತನೆ ಆಗಬೇಕೆಂದು ಯೋಜಿಸಲಾಗಿದೆ. ಅಂದರೆ ಒಂದು ವಿಶ್ವ ವಿದ್ಯಾಲಯದಡಿ 100ಕ್ಕೂ ಹೆಚ್ಚು ಅಂಗಸಂಸ್ಥೆಗಳು ಕೆಲಸ ಮಾಡುತ್ತವೆ.

ವಿವಿ ಸೂಚಿಸಿದಂತೆ ಪರೀಕ್ಷೆ, ಪಠ್ಯಕ್ರಮಗಳು, ಕೋರ್ಸ್​​​​ಗಳು ಇರಲಿದ್ದು, ಇದನ್ನೇ ಅಳವಡಿಸಿಕೊಳ್ಳಬೇಕಾಗುತ್ತೆ. ಇನ್ಮುಂದೆ ತಾಂತ್ರಿಕ, ಕಾನೂನು, ಆರೋಗ್ಯ ಎಂಬ ಪ್ರತಿಯೊಂದಕ್ಕೂ ವಿಶ್ವವಿದ್ಯಾಲಯಗಳು ಇರೋದಿಲ್ಲ. ಬದಲಿಗೆ ಇವೆಲ್ಲ ಸಮಗ್ರ ಉನ್ನತ ಶಿಕ್ಷಣದಲ್ಲಿ ಬರಲಿವೆ. ಇದರ ನಡುವೆ ಸ್ವಾಯತ್ತತೆ ಆಗಿ ರೂಪಾಂತರವಾಗಲು ಸಾಧ್ಯನಾ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕೆಂದರೆ, ಬಹುತೇಕ ಕಾಲೇಜುಗಳು ಸ್ವಂತ ಕಟ್ಟಡಗಳನ್ನು ಹೊಂದಿರದೇ ಇರುವುದನ್ನ ಗಮನಿಸಬಹುದು.‌ ಆದರೆ, ಅಟಾನಮಸ್ ಪಡೆಯಲು ಸ್ವಂತ ಕಟ್ಟಡ ಹೊಂದಿರಬೇಕು ಅಥವಾ ಕನಿಷ್ಠ 30 ವರ್ಷ ಲೀಸ್​​ಗೆ ಪಡೆದ ಕಟ್ಟಡ ಹೊಂದಿರಬೇಕು.

ಸ್ವಾಯತ್ತತೆಯ ಪರಿಕಲ್ಪನೆಯ ಬಗ್ಗೆ ಪರ-ವಿರೋಧದ ಮಾತು

ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿಯ ಸಮಸ್ಯೆ ನಿವಾರಣೆ, ಶಿಕ್ಷಣದಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಅಳವಡಿಸಿಕೊಳ್ಳಲು ಬೇಕಾದ ಸೌಕರ್ಯ ಹಾಗೂ ಇದನ್ನ ಪೂರೈಸಲು ಆರ್ಥಿಕವಾಗಿ ಸದೃಢವೇ ಎಂಬುದನ್ನು ಪರಿಶೀಲಿಸಬೇಕು. ಇವೆಲ್ಲವನ್ನೂ ಸಾಧಿಸಿದರೆ 2035ರ ವೇಳೆಗೆ ಸ್ವಾಯತ್ತತೆ ಪಡೆಯಬಹುದಾಗಿದೆ ಎಂಬುದು ತಜ್ಞರ ಮಾತಾಗಿದೆ.

ದೇಶದಲ್ಲಿ ಡಿಗ್ರಿ ಪಡೆದವರ ಸಂಖ್ಯೆ ಇಂದಿಗೂ ಸಹ ಶೇ.40%ರಷ್ಟಿದೆ. ಆದರೆ, ಕೇವಲ 39,000 ಡಿಗ್ರಿ ಕಾಲೇಜುಗಳಿವೆ. ಎಲ್ಲಾ ಕಾಲೇಜುಗಳನ್ನು ಅಟೋನಮಸ್ ಮಾಡುವುದು ಕಷ್ಟ ಎಂಬುದು ಇನ್ಸ್​​ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ ಸಂಸ್ಥೆಯ ಶಿಕ್ಷಣ ಮಾರ್ಗದರ್ಶಕ ಎಂ.ಲಕ್ಷ್ಮಣ್ ಮಾತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 10 ನೇ ತರಗತಿ ಓದಿ ಬಿಟ್ಟವರು ಶೇ. 60 ರಷ್ಟಿದ್ದಾರೆ. ಸ್ವಾಯತ್ತತೆ ಎಂಬುದು ಮುಂದುವರೆದ ದೇಶದಲ್ಲಿ ಮಾತ್ರ ತರಲು ಸಾಧ್ಯ. ಡಿಗ್ರಿ ಕಾಲೇಜುಗಳನ್ನು ಸ್ವಾಯತ್ತತೆಗೆ ತರುವ ಪರಿಕಲ್ಪನೆ ಕಷ್ಟ. ಶಿಕ್ಷಣ ನೀತಿ ಸ್ವಾಯತ್ತತೆಯ ಪರಿಕಲ್ಪನೆ ಎರಡು ತಪ್ಪು ಎಂಬುದು ಅವರ ಅಭಿಪ್ರಾಯ. ಈ ಕುರಿತು ಚರ್ಚೆ ನಡೆಯುತ್ತಿವೆ. ಸರ್ಕಾರ ಯಾವ ರೀತಿ ಇದನ್ನು ನಿಭಾಯಿಸುತ್ತೆ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.