ETV Bharat / state

ಅಸ್ಸಾಮಿಗಳನ್ನು ಚೀನೀಯರೆಂದು ಭಾವಿಸಿ ನಿಂದನೆ... ಈಶಾನ್ಯ ನಾಡಿನವರಿಗೆ ಅಭಯ ನೀಡಿದ ಭಾಸ್ಕರ್ ರಾವ್​ - ಕೊರೊನಾ ಸುದ್ದಿ

ಬೆಂಗಳೂರಿನಲ್ಲಿದ್ದ ಈಶಾನ್ಯ ರಾಜ್ಯಗಳ ಜನರು ಚೀನಾದವರಂತೆ ಕಾಣುವುದರಿಂದ ಕೆಲವು ಕಿಡಿಗೇಡಿಗಳು ಅವರ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದ್ದರು. ಇದನ್ನು ಮನಗಂಡ ನಗರ ಪೊಲೀಸ್​ ಆಯುಕ್ತರು, ಈ ರೀತಿ ಆರೋಪಗಳನ್ನು ಮಾಡಿದ್ರೆ, ನೀವು ಪೊಲೀಸರ ಸಹಾಯ ಪಡೆಯಿರಿ ಎಂದು ಹೇಳುವ ಮೂಲಕ ಅಭಯ ನೀಡಿದ್ದಾರೆ.

ನಗರ ಪೊಲೀಸ್​ ಆಯುಕ್ತರು
ನಗರ ಪೊಲೀಸ್​ ಆಯುಕ್ತರು
author img

By

Published : Mar 29, 2020, 4:54 PM IST

ಬೆಂಗಳೂರು: ಈಶಾನ್ಯ ರಾಜ್ಯದಿಂದ ಬಂದಿರುವ ಅಸ್ಸಾಂನ ಬಹಳಷ್ಟು ಜನರು ಚೀನಾದವರ ರೀತಿ ಇರುವ ಕಾರಣ, ಅವರನ್ನು ಕೆಲಕಿಡಿಗೇಡಿಗಳು ನೀವು ಚೀನಾದವರು ಇದ್ದ ಹಾಗೆ ಇದ್ದೀರಾ. ನಿಮ್ಮಿಂದ ನಮಗೆ ಕೊರೊನಾ ಬರುತ್ತೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ.

ಈ ವಿಚಾರ ತಿಳಿದ ನಗರ ಪೊಲೀಸ್​ ಆಯುಕ್ತರಾದ ಭಾಸ್ಕರ್​ ರಾವ್​ ಅವರು ನಿಮ್ಮ ಜೊತೆ ನಾವಿದ್ದೇವೆ. ನೀವು ನನ್ನ ಅಣ್ಣ ತಮ್ಮಂದಿರಿದ್ದಂತೆ. ನೀವು ಹೆದರಬೇಡಿ ನಿಮಗೆ ಯಾರಾದ್ರು ಹೀಯಾಳಿಸಿದ್ರೆ, ಸ್ಥಳೀಯ ಪೊಲೀಸ್​ ಠಾಣೆಯ ಸಹಾಯ ಪಡೆಯಿರಿ. ಅಥವಾ ನೀವೆ ನನಗೆ ಕರೆ ಮಾಡಬಹುದು ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

  • Some misguided persons have made unwanted Covid 19 remarks against our brethren from NorthEastern States. These misguided will be dealt with very sternly.Brothers & Sisters from NorthEast, you are secure here, approach nearest Policestation or Me directly Live Fearless.

    — Bhaskar Rao IPS (@deepolice12) March 29, 2020 " class="align-text-top noRightClick twitterSection" data=" ">

ಅಸ್ಸಾಂನ ಬಹಳಷ್ಟು ಜನರು ಹೋಟೆಲ್​ಗಳಲ್ಲಿ ಮತ್ತು ವಾಚ್​ ಮ್ಯಾನ್​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಚೀನಾದಿಂದ ಬಂದಿದೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಹಾಗಾಗಿ ಇವರು ನೋಡಲು ಸ್ವಲ್ಪ ಚೀನಿಯರ ರೀತಿ ಕಾಣುವುದರಿಂದ ಈ ರೀತಿ ಆರೋಪಗಳನ್ನ ಎದುರಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.