ETV Bharat / state

ಕೆಲಸದ ಅವಧಿಯನ್ನು 8ರ ಬದಲು, 12 ಗಂಟೆಗೆ ಹೆಚ್ಚಿಸಿತಾ ಕೇಂದ್ರ? ಹೋರಾಟಕ್ಕೆ ಸಿಐಟಿಯು ಕರೆ - ಸಿಐಟಿಯು

ಲಾಕ್​ಡೌನ್​ನಿಂದಾಗಿ ದೇಶಾದ್ಯಂತ ಕಾರ್ಮಿಕರ ಕೆಲಸವನ್ನು ಎಂಟು ಗಂಟೆಯಿಂದ ಹನ್ನೆರಡು ಗಂಟೆಗೆ ಹೆಚ್ಚುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದು ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಸಿಐಟಿಯು ತಿಳಿಸಿದೆ.

workers
ನೌಕರರು
author img

By

Published : Apr 30, 2020, 11:41 AM IST

ಬೆಂಗಳೂರು: ಈಗಾಗಲೇ ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಕಾರ್ಮಿಕರ ಕೆಲಸವನ್ನು ಎಂಟು ಗಂಟೆಯಿಂದ ಹನ್ನೆರಡು ಗಂಟೆಗೆ ಹೆಚ್ಚು ಮಾಡಿ ಅಧಿಸೂಚನೆ ಹೊರಡಿಸಿದ್ದು, ಇಡೀ ದೇಶದಲ್ಲಿ ಇದೇ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಿಐಟಿಯು ಆರೋಪಿಸಿದೆ.

ಕೊರೊನಾ ಮತ್ತು ಲಾಕ್ ಡೌನ್ ಹೆಸರಲ್ಲಿ ಈಗಾಗಲೇ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ದಿನದ ಕೆಲಸದ ಅವಧಿಯನ್ನೂ ಹೆಚ್ಚಿಸಿದರೆ ಕಾರ್ಮಿಕರ ಹಕ್ಕು ಕಸಿದಂತಾಗುತ್ತದೆ. ಶೋಷಣೆಯಾದಂತೆ ಆಗುತ್ತದೆ ಎಂದು ಸಿಐಟಿಯು ತಿಳಿಸಿದೆ.

CITU
ಸಿಐಟಿಯು ಪತ್ರ

ಈ ಹಿನ್ನಲೆ ಕಾರ್ಮಿಕ ವರ್ಗದ ಶೋಷಣೆ ವಿರೋಧಿಸಿ, ಕಾರ್ಮಿಕರ ದಿನವಾದ, ಮೇ ದಿನವನ್ನು ತಮ್ಮ ತಮ್ಮ ಮನೆ ಮಹಡಿ ಅಥವಾ ಕಾರ್ಯಸ್ಥಳದಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತು ಸಂಘದ ಧ್ವಜಗಳನ್ನು ಹಾರಿಸಿ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ಕರೆನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.