ಬೆಂಗಳೂರು: ರಾಜ್ಯಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ಆಗಮಿಸುವ ವಿಷಯವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗೊತ್ತಿಲ್ಲ ಎಂದರೆ, ಇದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವಿರಬಹುದಾ ಎಂದು ಬಿಜೆಪಿ ಪ್ರಶ್ನಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯುತ್ತಿರುವುದು ಡಿಕೆಶಿ ಅವರಿಗೆ ತಿಳಿದಿಲ್ಲವಂತೆ. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬೆನ್ನಿನ ಹಿಂದೆ ಪಿತೂರಿ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂಬ ಡಿ.ಕೆ. ಶಿವಕುಮಾರ್ ಅವರ ಮಾತನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮತ್ತವರ ಪಟಾಲಂ ಒಪ್ಪುತ್ತಿಲ್ಲ. ಹೀಗಾಗಿಯೇ ಸಿದ್ದರಾಮೋತ್ಸವ ಆಯೋಜನೆಯಾಗಿದೆ. ಸಿದ್ದರಾಮಯ್ಯ ಬಣದ ನಾಯಕರನ್ನು ನಿಯಂತ್ರಿಸಲಾಗದೆ ಡಿಕೆಶಿ ಅಸಹಾಯಕರಾಗಿದ್ದಾರೆ ಎಂದು ಬಿಜೆಪಿ ಡಮ್ಮಿ ಡಿಕೆಶಿ ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ ಮಾಡಿ ಕಾಲೆಳೆದಿದೆ.
-
ವಿಪಕ್ಷ ನಾಯಕ @siddaramaiah ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿರುವುದು @DKShivakumar ಅವರಿಗೆ ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು?
— BJP Karnataka (@BJP4Karnataka) July 3, 2022 " class="align-text-top noRightClick twitterSection" data="
ಪಕ್ಷದ ಅಧ್ಯಕ್ಷರಿಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು #ಡಮ್ಮಿಡಿಕೆಶಿ ಆಗಿದ್ದೇಕೆ?
">ವಿಪಕ್ಷ ನಾಯಕ @siddaramaiah ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿರುವುದು @DKShivakumar ಅವರಿಗೆ ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು?
— BJP Karnataka (@BJP4Karnataka) July 3, 2022
ಪಕ್ಷದ ಅಧ್ಯಕ್ಷರಿಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು #ಡಮ್ಮಿಡಿಕೆಶಿ ಆಗಿದ್ದೇಕೆ?ವಿಪಕ್ಷ ನಾಯಕ @siddaramaiah ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿರುವುದು @DKShivakumar ಅವರಿಗೆ ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು?
— BJP Karnataka (@BJP4Karnataka) July 3, 2022
ಪಕ್ಷದ ಅಧ್ಯಕ್ಷರಿಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು #ಡಮ್ಮಿಡಿಕೆಶಿ ಆಗಿದ್ದೇಕೆ?
ಕೆಪಿಸಿಸಿ ಅಧ್ಯಕ್ಷರ ಮಾತು ಮೀರಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದಾದರೆ, ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವ ಪ್ರಶ್ನೆ ಈಗ ಉದ್ಭವವಾಗುತ್ತಿದೆ. ನನ್ನ ಜನ್ಮದಿನೋತ್ಸವಕ್ಕೆ ರಾಹುಲ್ ಗಾಂಧಿ ಬರುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಬರುವ ವಿಷಯವೇ ಗೊತ್ತಿಲ್ಲ ಎಂದು ಡಿಕೆಶಿ ಹೇಳುತ್ತಿದ್ದಾರೆ. ಡಿಕೆಶಿಗೆ ಮಾಹಿತಿ ಇಲ್ಲದೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದಾದರೆ ಇದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಸುಳಿವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ:ಮುಸ್ಲಿಂ ಸಮುದಾಯದ ಆ ಕಟುಕ ಬಿಜೆಪಿ ಕಾರ್ಯಕರ್ತನಾಗಲು ಸಾಧ್ಯವಿಲ್ಲ: ಸಚಿವ ಬೈರತಿ ಬಸವರಾಜ್