ETV Bharat / state

13 ವಿಐಪಿ ಅಕ್ರಮ ವಿಲ್ಲಾಗಳ ತೆರವು ಕಾರ್ಯ: ಕಂದಾಯ ಇಲಾಖೆ ಆದೇಶಕ್ಕೆ ಕಾಯುತ್ತಿರುವ ಪಾಲಿಕೆ ಅಧಿಕಾರಿಗಳು - Encroachment clearance work

13 ವಿಲ್ಲಾಗಳನ್ನು ಕೆಡವಲು ಕಂದಾಯ ಇಲಾಖೆ ಆದೇಶಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಕಾದು ಕುಳಿತಿದ್ದಾರೆ. 35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೈನ್ ಬೋ ಲೇಔಟ್ ನಾಲ್ಕು ಬಾರಿ ಪ್ರವಾಹಕ್ಕೆ ಸಾಕ್ಷಿಯಾಗಿದೆ.

13 ವಿಐಪಿ ಅಕ್ರಮ ವಿಲ್ಲಾಗಳ ತೆರವು ಕಾರ್ಯ
13 ವಿಐಪಿ ಅಕ್ರಮ ವಿಲ್ಲಾಗಳ ತೆರವು ಕಾರ್ಯ
author img

By

Published : Sep 14, 2022, 7:45 PM IST

Updated : Sep 14, 2022, 7:54 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಲಾಜಿಲ್ಲದೇ ಒತ್ತುವರಿ ತೆರವು ಕಾರ್ಯ ಮುಂದುವರೆದಿದೆ. ಮತ್ತೊಂದೆಡೆ ಇದೇ ವಾರದೊಳಗೆ ವಿಐಪಿಗಳ 13 ವಿಲ್ಲಾಗಳನ್ನು ಕೆಡವಲು ಕಂದಾಯ ಇಲಾಖೆ ಆದೇಶಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.

ಸರ್ಜಾಪುರ ರಸ್ತೆಯ ರೈನ್ ಬೋ ಲೇಔಟ್‌ನಲ್ಲಿ ಎರಡು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ 13 ವಿಲ್ಲಾಗಳನ್ನು ಕೆಡವಲು ಕೆಆರ್‌ ಪುರಂ ತಹಶೀಲ್ದಾರ್​ರ ಅಧಿಕೃತ ಆದೇಶಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಕಾಯುತ್ತಿದ್ದಾರೆ.

13 ವಿಐಪಿ ಅಕ್ರಮ ವಿಲ್ಲಾಗಳ ತೆರವು ಕಾರ್ಯ

35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೈನ್ ಬೋ ಲೇಔಟ್ ನಾಲ್ಕು ಬಾರಿ ಪ್ರವಾಹಕ್ಕೆ ಸಾಕ್ಷಿಯಾಗಿದೆ. 2014 ರಲ್ಲಿ ಅಂದಿನ ಕೆಆರ್ ಪುರಂ ತಹಶೀಲ್ದಾರ್ ಅವರು ಹಾಲನಾಯಕನಹಳ್ಳಿ ಕೆರೆಗೆ ಹೋಗುವ ಈ ಲೇಔಟ್‌ನಲ್ಲಿ ಎರಡು ಮಳೆ ನೀರು ಚರಂಡಿ ಮೇಲೆ ಕಟ್ಟಿದ ಸುಮಾರು 40 ಮನೆಗಳನ್ನು ಕೆಡವಲು ಆದೇಶಿಸಿದ್ದರು. ಆದರೆ, ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.

ಕಂದಾಯ ಇಲಾಖೆ ಆದೇಶ ಬರಬೇಕಿದೆ: ನಿವಾಸಿಗಳು ತಮ್ಮ ಕಟ್ಟಡಗಳು ಅತಿಕ್ರಮಣವಾಗಿಲ್ಲ ಎಂಬುದಕ್ಕೆ ಪುರಾವೆಗಳನ್ನು ನೀಡಲು ವಿಫಲವಾದ ಕಾರಣಕ್ಕಾಗಿ ನೋಟಿಸ್ ಜಾರಿಗೊಳಿಸಲು ಮತ್ತು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಕಂದಾಯ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದರು.

ಇದನ್ನೂ ಓದಿ: ಕಾಂಪೌಂಡ್​​ಗೆ ಮಾತ್ರ ಸೀಮಿತವಾದ ಒತ್ತುವರಿ ತೆರವು ಕಾರ್ಯಾಚರಣೆ: ಚುನಾವಣೆ ದೃಷ್ಟಿಯಿಂದ ಮೃದುವಾದ ಸರ್ಕಾರ

ಆರು ವರ್ಷಗಳ ನಂತರ ಕಂದಾಯ ಇಲಾಖೆ ಮತ್ತೊಮ್ಮೆ ಸರ್ವೆ ನಡೆಸಿ 35 ಮನೆಗಳನ್ನು ಅತಿಕ್ರಮಣ ಎಂದು ಗುರುತಿಸಿದೆ. ಕೆಲವು ದಿನಗಳ ಹಿಂದೆ, ತಹಶೀಲ್ದಾರ್ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿದ್ದರು. ಕಂದಾಯ ಇಲಾಖೆಯಿಂದ ಇದುವರೆಗೆ ಒತ್ತುವರಿ ತೆರವಿನ ಆದೇಶ ಬಂದಿಲ್ಲ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Last Updated : Sep 14, 2022, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.