ETV Bharat / state

ಸಿಸಿಬಿ ಮಿಂಚಿನ ಕಾರ್ಯಾಚರಣೆ: 1 ತಿಂಗಳಲ್ಲಿ 45 ಪ್ರಕರಣ ಭೇದಿಸಿದ ಪೊಲೀಸರು - ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​​ ಪಾಟೀಲ್​

ಅಪರಾಧ ಕೃತ್ಯಗಳನ್ನು ಬೆನ್ನಟ್ಟುತ್ತಿರುವ ಸಿಲಿಕಾನ್ ಸಿಟಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದೊಂದು ತಿಂಗಳಲ್ಲಿ ವೇಶ್ಯಾವಾಟಿಕೆ, ಜೂಜಾಟ ಸೇರಿದಂತೆ ಒಟ್ಟು 45 ಪ್ರಕರಣಗಳನ್ನ ದಾಖಲಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

the-bangalore-ccb-recorded-45-cases-in-1-month
ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​​ ಪಾಟೀಲ್
author img

By

Published : Jul 31, 2021, 7:20 PM IST

ಬೆಂಗಳೂರು: ರಾಜಧಾನಿಯಲ್ಲಿ ಯಾವುದೇ ಅಪರಾಧ ನಡೆದರೂ ಖಾಕಿ‌ ಪಡೆಯ ಹದ್ದಿನ ಕಣ್ಣಿನಿಂದ ಯಾವ ಅಪರಾಧವೂ ತಪ್ಪಿಸಿಕೊಂಡಿಲ್ಲ. ನಗರದ ಬಹುತೇಕ ಅಪರಾಧಗಳು ಸಿಸಿಬಿ ಬಲೆಗೆ ಬಿದ್ದು, ಅಪರಾಧಿಗಳಿಗೆ ಶಿಕ್ಷೆ ಕೂಡ ನೀಡಲಾಗಿದ್ದು, ಈ ಕುರಿತು ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​​ ಪಾಟೀಲ್​ ಮಾಹಿತಿ ನೀಡಿದ್ದಾರೆ.

1 ತಿಂಗಳಲ್ಲಿ 45 ಪ್ರಕರಣಗಳು ದಾಖಲಿಸಿ ಬೆಂಗಳೂರು ಸಿಸಿಬಿ

ಬೆಂಗಳೂರಿನಲ್ಲಿ‌ ಅಕ್ರಮ ಚಟುವಟಿಕೆ ಬಗ್ಗೆ ಸಿಸಿಬಿ ಹದ್ದಿನಕಣ್ಣಿಟ್ಟಿದ್ದು, ಕಳೆದೊಂದು ತಿಂಗಳಲ್ಲಿ ಒಟ್ಟು 45 ಪ್ರಕರಣಗಳನ್ನ ಸಿಸಿಬಿ ದಾಖಲಿಸಿದೆ. 20 ಜೂಜಾಟ ಪ್ರಕರಣಗಳು, 25 ವೇಶ್ಯಾವಾಟಿಕೆ ಪ್ರಕರಣಗಳು ಸೇರಿದಂತೆ ಒಟ್ಟು 45 ಕೇಸ್‌ಗಳನ್ನ ದಾಖಲಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 291 ಆರೋಪಿಗಳನ್ನ ಬಂಧಿಸಲಾಗಿದೆ. ಜೊತೆಗೆ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ 91 ಮಹಿಳೆಯರನ್ನ ಸಿಸಿಬಿ ಅಧಿಕಾರಿಗಳು ರಕ್ಷಿಸಿದ್ದಾರೆ.

45 ಕೇಸ್‌ಗಳಲ್ಲಿ 33 ಲಕ್ಷ 54 ಸಾವಿರ ನಗದು ಹಣವನ್ನ ವಶಕ್ಕೆ ಪಡೆಯಲಾಗಿದೆ. 11 ಜೂಜಾಟ ಪ್ರಕರಣ, 03 ಕ್ರಿಕೆಟ್ ಬೆಟ್ಟಿಂಗ್, 6 ಮಟ್ಕಾ ಪ್ರಕರಣಗಳು ಸೇರಿದಂತೆ 20 ಕೇಸ್‌ಗಳು ದಾಖಲಾಗಿವೆ. ಮತ್ತು 11ಸ್ಪಾ ಹಾಗೂ 14 ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಎಲ್ಲಾ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಾಗಿದೆ.

ಇವುಗಳ ಜೊತೆ ಸಿಸಿಬಿ ಕಾರ್ಯಚರಣೆ ಇನ್ನೂ ಮುಂದುವರೆದ್ದಿದ್ದು, ಮತ್ತಷ್ಟು ಆರೋಪಿಗಳನ್ನ ಸೆರೆ ಹಿಡಿಯಲು ಬಲೆ ಬೀಸಲಾಗಿದೆ ಎಂದು ತಿಂಗಳ ಸಿಸಿಬಿ ಕಾರ್ಯಾಚರಣೆಯ ಬಗ್ಗೆ ಸಂದೀಪ್‌ ಪಾಟೀಲ್ ಅವರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.