ETV Bharat / state

ಅನೈತಿಕ ಸಂಬಂಧ ಪ್ರಶ್ನಿಸಿದ ಹೆಂಡತಿಯ ಹತ್ಯೆ.... ಅನಾಥವಾಯ್ತು 5 ವರ್ಷದ ಕಂದಮ್ಮ - kannada news

ಗಂಡನ ಅನೈತಿಕ ಸಂಬಂಧವನ್ನ ಪ್ರಶ್ನಿಸಿದ ಹೆಂಡತಿಯನ್ನ ಉಸಿರುಗಟ್ಟಿಸಿ ಕೊಂದ ಗಂಡ.

ಗಂಡನ ಅನೈತಿಕ ಸಂಬಂಧವನ್ನ ಪ್ರಶ್ನಿಸಿದ ಹೆಂಡತಿಯನ್ನ ಕೊಂದ ಗಂಡ
author img

By

Published : Apr 23, 2019, 9:54 PM IST

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನೇ ಕೊಂದು ನೇಣು ಹಾಕಿಕೊಂಡಿದ್ದಾಳೆ ಎಂಬ ಆತ್ಮಹತ್ಯೆಯ ನಾಟವಾಡಿದ್ದ ಆರೋಪಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾನೆ.

ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ ಚಿತ್ತೂರು ಮೂಲದ ರಮೇಶ್ ಬಾಬು ಎಂಬಾತ ಈ ಕೃತ್ಯವನ್ನ ಎಸಗಿದವ. ಮದುವೆಯಾಗಿ 5 ವರ್ಷದ ಮಗುವಿದ್ದರೂ ಸಹ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದನಂತೆ. ಈ ವಿಚಾರವಾಗಿ ಪ್ರಶ್ನಿಸಿದ ಹೆಂಡತಿ ಪ್ರಿಯಾಂಕಾ(26) ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸಾಯಿಸಿದ್ದಾನೆ. ನಂತರ ಆತ್ಮಹತ್ಯೆಯ ನಾಟಕವಾಡಿದ್ದ.

ಗಂಡನ ಅನೈತಿಕ ಸಂಬಂಧವನ್ನ ಪ್ರಶ್ನಿಸಿದ ಹೆಂಡತಿಯನ್ನ ಕೊಂದ ಗಂಡ

ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿ ಸಾಯಿಸಿದ ಬಳಿಕ ಅವಳದ್ದೇ ವೇಲ್​ನಿಂದ ನೇಣು ಹಾಕಿ ಆತ್ಮಹತ್ಯೆಯ ನಾಟಕವಾಡಿದ್ದ. ಆದ್ರೆ ಮೂಗಿನಲ್ಲಿ ಸುರಿಯುತ್ತಿದ್ದ ರಕ್ತ ನಡೆದ ಘಟನೆಗೆ ಸಾಕ್ಷಿಯಾಗಿತ್ತು. ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯವನ್ನ ಬಾಯ್ಬಿಟ್ಟಿದ್ದಾನೆ.

ವೈಟ್‌ಫೀಲ್ಡ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಮೇಶ್‌‌ ಕುಡಿತದ ಚಟ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಹಿರಿಯರು ಬುದ್ಧಿ ಮಾತನ್ನ ಹೇಳಿದ್ದರು ಸಹ ತಿದ್ದಿಕೊಳ್ಳದೆ ತನ್ನ ಹಳೆ ಚಾಳಿ ಮುಂದುವರೆಸಿದ್ದನಂತೆ. ಪರಿಣಾಮವಾಗಿ ಹೆಂಡತಿ ಸಾವನ್ನಪ್ಪಿ, ಮಗು ಅನಾಥವಾಗಿದೆ.

Intro:ಮದುವೆಯಾಗಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸದ ಬಗ್ಗೆ ಕೆಣಕಿದ್ದ ಪತ್ನಿಯನ್ನು ಕೊಂದು,ಅನಂತರ ನೇಣುಬಿಗಿಯುವ ಮೂಲಕ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನಂಬಿಸಹೊರಟ ಆರೋಪಿ ಬಾಯಲ್ಲಿ ಸತ್ಯ ಹೊರಬೀಳಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಕಳೆದ ಶನಿವಾರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೋಗೂರಿನ ಮನೆಯಲ್ಲಿ ಕೊಲೆ ನಡೆದಿತ್ತು. ಸುತ್ತಲ ಜನರಿಗಷ್ಟೇ ಅಲ್ಲ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೂ ಇದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಸಿಐ ತನಿಖೆಯಲ್ಲಿ ಸತ್ಯ ಹೊರಬಿದ್ದಿದೆ.Body:ಆಂದ್ರ ಪ್ರದೇಶದ ಚಿತ್ತೂರು ಮೂಲದ ರಮೇಶ್ ಬಾಬು (33) ಎಂಬಾತ ತನ್ನ ಪತ್ನಿ ಪ್ರಿಯಾಂಕಾ(26)ಳನ್ನು ಮುಖಕ್ಕೆ ಗುದ್ದಿ ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂತರ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸ್ ಇನ್ಸ್ಫೆಕ್ಟರ್ ಕೆ ವಿಶ್ವನಾಥ್ ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ. ರಾತ್ರಿ ಎಂದಿನಂತೆ ಮನೆಗೆ ಬಂದ ರಮೇಶ್-ಮನೆಯಲ್ಲಿದ್ದ ಪ್ರಿಯಾಂಕಾ ಪತಿಯ ಅನೈತಿಕ ಸಂಬಂದದ ವಿಚಾರವನ್ನು ಕೇಳಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಇದನ್ನು ನೆರೆಹೊರೆಯವರೂ ಕಣ್ಣಾರೆ ಕಂಡಿದ್ದಾರೆ. ಅಷ್ಟರಲ್ಲಿ ಗಲಾಟೆ ವಿಪರೀತಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇದಾದ ನಂತರ ಪ್ರಿಯಾಂಕಾಳ ದೇಹವನ್ನು ಮನೆಯ ಕೊಠಡಿಯ ಮೇಲ್ಚಾವಣಿ ಫ್ಯಾನಿಗೆ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ನಾಟಕ ಸೃಷ್ಟಿಸಲು ಹವಣಿಸಿದ್ದಾನೆ. ಅನಂತರ ಕತ್ತಿಗೆ ವೇಲ್ ಸುತ್ತಿದ ಸ್ಥಿತಿಯಲ್ಲಿ ಪ್ರಿಯಾಂಕಾಳ ದೇಹ ಮನೆಯಿಂದ ಆಚೆ ಹೊತ್ತು ತಂದು ನೇಣು ಬಿಗಿದುಕೊಂಡಿದ್ದಾಳೆಂದು ಎಂದು ಸುತ್ತಲನವರಿಗೆ ಒಪ್ಪಿಸಹೊರಟಿದ್ದಾನೆ. ಆದರೆ ರಾತ್ರಿಯಿಂದ ಆದ ಜಗಳ ಪ್ರಿಯಾಂಕಾಳ ಮೂಗಲ್ಲಿ ಹರಿಯುತ್ತಿದ್ದ ರಕ್ತ ಜನರಿಗೆ ಸತ್ಯ ಹೇಳಿಸಿತ್ತು.
ಅಷ್ಟರಲ್ಲಿ ಎಲೆಕ್ಟ್ರಾನಿಕ್ ಟಿ ಪೊಲೀಸ್ ಸಿಐ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ತಕ್ಷ ರಮೇಶ್ ನನ್ನು ಠಾಣೆಗೆ ಕರೆತಂದು ತೀರ್ವ ವಿಚಾರಣೆ ನಡೆಸಿದಾಗ ಅಸಲು ವಿಷಯ ಒಪ್ಪಿಕೊಂಡಿದ್ದಾನೆ.
ವೈಟ್‌ಫೀಲ್ಡ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಮೇಶ್‌‌ ಮತ್ತೊಂದು ಮಹಿಳೆಯೊಂದಿಗೆ ಅನೈತಿಕ ಸಂಬಂದ ಹೊಂದಿದ್ದು, ಪತ್ನಿ ಪ್ರಿಯಾಂಕಾಗೆ ಗೊತ್ತಾಗಿ ಹಿರಿಯರ ನಡುವೆ ನ್ಯಾಯ ತೀರ್ಮಾನವಾಗಿ ಅಕ್ರಮ ಸಂಬಂದ ಬಿಡುವಂತೆ ತಿಳಿಸಿದ್ದರು.
ಆಂದ್ರದ ಪ್ರಿಯಾಂಕಾಳನ್ನು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ರಮೇಶ್ ದಂಪತಿಗೆ 5 ವರ್ಷದ ಮಗಳಿದ್ದು ಪ್ರಯಾಂಕಾಳ ಅಮ್ಮನ ಮನೆಯಲ್ಲಿ ಬೆಳೆಯುತ್ತಿದ್ದಳು. ಪ್ರಿಯಾಂಕಾ ತನ್ನ ಮನೆ ಸಮೀಪದಲ್ಲಿರುವ ‘ಅರವಿಂದ ಗಾರ್ಮೆಂಟ್ಸ್‌’ ನಲ್ಲಿ ಎಂಟು ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದಳು.
Conclusion:ಕುಡಿತದ ಚಟ ಹಬ್ಬಿಸಿಕೊಂಡಿದ್ದ ರಮೇಶ್, ಆರು ತಿಂಗಳಿನಿಂದ ಅಕ್ರಮ ಸಂಬಂದವೊಂದರ ಸಹವಾಸದಲ್ಕಿದ್ದ. ಈ ವಿಚಾರ ದಂಪತಿಯಲ್ಲೇ ಗುಟ್ಟಾಗಿ ಉಳಿದಿದ್ದು, ನಂತರ ಇಡೀ ವಠಾರಕ್ಕೇ ಗೊತ್ತಾಗಿತ್ತು.
ಶನಿವಾರ ಸಂಜೆ ಕುಡಿತದ ನಶೆಯಲ್ಲಿಯೇ ಹೆಂಡಿತಿಯೊಂದಿಗೆ ರಾತ್ರಿ 9ರವರೆಗೂ ಜಗಳವಾಗಿದೆ. ಇಡೀ ಪ್ರಕರಣವನ್ನು ಬೇದಿಸಿ ಆರೋಪಿ ರಮೇಶನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.