ETV Bharat / state

ಯುವತಿಯ ಮಾನಸಿಕ-ದೈಹಿಕ ಪಕ್ವತೆಗಾಗಿ ಮದುವೆ ವಯಸ್ಸು 21 ಇದ್ರೆ ಸರಿ : ತಜ್ಞರ ಅಭಿಮತ - central govt new rules for marriage system

ಆರೋಗ್ಯಕರ ಮಹಿಳೆಗೆ ಗುಣಮಟ್ಟದ ಶಿಕ್ಷಣ ಇದ್ದರೆ ಮನೆಯ ಜವಾಬ್ದಾರಿ ಹೊರಲು ಸಹಾಯಕವಾಗುತ್ತದೆ. ತೀರಾ ಚಿಕ್ಕ ವಯಸ್ಸಿಗೆ ಮದುವೆಯಾದರೆ ಅಲ್ಲಿ ಶಿಕ್ಷಣಕ್ಕೂ ಬ್ರೇಕ್ ಬೀಳುತ್ತೆ ಜೊತೆಗೆ ಮಾನಸಿಕವಾಗಿ ಸದೃಢವಾಗಿರಲ್ಲ..

dr-vidyabhat
ಡಾ ವಿದ್ಯಾ‌ ಭಟ್
author img

By

Published : Aug 30, 2020, 9:41 PM IST

ಬೆಂಗಳೂರು: ಯುವತಿಯರ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಚಿಂತನೆ ಕೇಂದ್ರ ಸರ್ಕಾರದಿಂದ ನಡೆದಿದೆ. ಇದು ತಾಯಂದಿರು ಮತ್ತು ಶಿಶುಗಳ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಲಿದ್ಯಾ ಎಂಬುದರ ಬಗ್ಗೆ ಬಗ್ಗೆ ಈಟಿವಿ ಭಾರತದೊಂದಿಗೆ ಆರೋಗ್ಯ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮದುವೆ ವಯಸ್ಸು 21 ವರ್ಷಕ್ಕೆ ಏರಿಸುವುದು ಒಳ್ಳೆ ವಿಷಯ. ಹೆಣ್ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಪರಿಪಕ್ವತೆ ಹೊಂದಿರುತ್ತಾರೆ. ಸಾಂಸಾರಿಕ ಜವಾಬ್ದಾರಿ ಹೊರಲಿಕ್ಕೆ ಹಾಗೂ ತಾಯ್ತನದ ಸಂದರ್ಭ ಸೇರಿ ಹಲವು ಕಾರಣಕ್ಕೆ ಸಮಯ ಬೇಕಾಗುತ್ತೆ. 18ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ಕಡಿತ ಆಗುವುದು ಇದೆ. 21ಕ್ಕೆ ಅವರ ಪದವಿ ಮುಗಿಯುವ ಸಮಯ. ಹೀಗಾಗಿ ಇದು ಸೂಕ್ತ ವಯಸ್ಸು ಅಂತಾ ಲ್ಯಾಪರೊಸ್ಕೋಪಿಕ್ ಸರ್ಜನ್ ಮತ್ತು ಫರ್ಟಿಲಿಟಿ ವಿಶೇಷ ತಜ್ಞೆ ಡಾ ವಿದ್ಯಾ‌ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಯುವತಿಯರ ಮದುವೆ ವಯಸ್ಸು ಎಷ್ಟಿರಬೇಕೆಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಹೀಗಿದೆ..

18ನೇ ವಯಸ್ಸಿಗೆ ಅವರ ಮನಸ್ಥಿತಿ ಮಾನಸಿಕವಾಗಿ ಮಕ್ಕಳಂತೆ ಇರಲಿದೆ. ಮತ್ತೊಂದು ಮಗುವಿನ ಜವಾಬ್ದಾರಿ ಹೊರವಷ್ಟು ಮೆಚ್ಯುರಿಟಿ ಹೊಂದಿರೋದಿಲ್ಲ. ಜೊತೆಗೆ ದೇಹ ಪಕ್ವವಾಗಿರೋದಿಲ್ಲ ಅಂತಾ ತಿಳಿಸಿದ್ದಾರೆ.

ಆರೋಗ್ಯಕರ ಮಹಿಳೆಗೆ ಗುಣಮಟ್ಟದ ಶಿಕ್ಷಣ ಇದ್ದರೆ ಮನೆಯ ಜವಾಬ್ದಾರಿ ಹೊರಲು ಸಹಾಯಕವಾಗುತ್ತದೆ. ತೀರಾ ಚಿಕ್ಕ ವಯಸ್ಸಿಗೆ ಮದುವೆಯಾದರೆ ಅಲ್ಲಿ ಶಿಕ್ಷಣಕ್ಕೂ ಬ್ರೇಕ್ ಬೀಳುತ್ತೆ ಜೊತೆಗೆ ಮಾನಸಿಕವಾಗಿ ಸದೃಢವಾಗಿರದ ಕಾರಣ ಈ ನಿರ್ಧಾರ ಸ್ವಾಗತಾರ್ಹ ಅಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.