ETV Bharat / state

ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಟಿಪ್ಪು ಹೆಸರು ಮಾಯ: ಕ್ಯಾಮ್ಸ್ ಆರೋಪ‌

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳ ಪಠ್ಯಪುಸ್ತಕದಲ್ಲಿ ಕಡಿತ ಮಾಡಲಾಗಿದೆ. ಶೇ.30 ರಷ್ಟು ಪಠ್ಯಕ್ರಮವನ್ನ ಈ ವರ್ಷದ ಶೈಕ್ಷಣಿಕ ಸಾಲಿಗೆ ಕಡಿತ ಮಾಡಿದ್ದು, ಪುಸ್ತಕ ಕಡಿತ ಕಾರ್ಯ ಪ್ರಾಮಾಣಿಕವಾಗಿಲ್ಲವೆಂದು ಕ್ಯಾಮ್ಸ್ ಆರೋಪಿಸಿದೆ.

author img

By

Published : Jul 28, 2020, 1:48 PM IST

Updated : Jul 28, 2020, 1:59 PM IST

cams-accusation
ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಹಿಂದೆ ಸರಿದಿದೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠ ಮಾಡುತ್ತಿವೆ. ಇನ್ನು ದಿನೇ ದಿನೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳ ಪಠ್ಯಪುಸ್ತಕದಲ್ಲಿ ಕಡಿತ ಮಾಡಲಾಗಿದೆ. ಶೇ.30 ರಷ್ಟು ಪಠ್ಯಕ್ರಮವನ್ನ ಈ ವರ್ಷದ ಶೈಕ್ಷಣಿಕ ಸಾಲಿಗೆ ಕಡಿತ ಮಾಡಲಾಗಿದೆ. ಇತ್ತ ಪಠ್ಯಪುಸ್ತಕ ಕಡಿತ ಪ್ರಾಮಾಣಿಕವಾಗಿ ಆಗಿಲ್ಲವೆಂದು ಕ್ಯಾಮ್ಸ್ ಆರೋಪಿಸಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಟಿಪ್ಪು ಹೆಸರು ಮಾಯ: ಕ್ಯಾಮ್ಸ್​ ಆಕ್ಷೇಪ

ಬಹುತೇಕ‌ ಪಾಠಗಳಿದ್ದು ಅದರಲ್ಲಿ ಅವಧಿಯ ಸಂಖ್ಯೆ ಕಡಿಮೆ ಮಾಡಿದ್ದು ಕಾಣುತ್ತಿದೆ. ಟಿಪ್ಪು ಸುಲ್ತಾನ್, ಹೈದರಾಲಿಗೆ ಸಂಬಂಧಪಟ್ಟಂತೆ ಇರುವ ಪಾಠಗಳನ್ನು ತೆಗೆದುಹಾಕಲಾಗಿದೆ. ಬಹಳ ಬುದ್ಧಿವಂತಿಕೆಯಿಂದ ಇಡೀ ಪ್ರಪಂಚಕ್ಕೆ ಖ್ಯಾತಿ ಆದ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನ ಪಿಪಿಟಿ ಮಾದರಿಯಲ್ಲಿ ತೋರಿಸುವಂತೆ ಹೇಳಿದ್ದಾರೆ. ಇದು ಅರ್ಥಹೀನವಾಗಿದ್ದು, ಎಲ್ಲೋ ಒಂದು ಕಡೆ ಟಿಪ್ಪು ಪಾಠವನ್ನ ದುರ್ಬಲಗೊಳಿಲಾಗಿದೆ ಅಂತ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದ್ದಾರೆ.‌

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಟಿಪ್ಪುಸುಲ್ತಾನ್ ಇತಿಹಾಸವನ್ನ ಕಲಿಯದಂತೆ ಮಾಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಡಿತ ಪಠ್ಯದಲ್ಲಿಟ್ಟು ಪಿಪಿಟಿ ಮೂಲಕ ತೋರಿಸುವಂತೆ ಸಲಹೆ ನೀಡಿರುವುದು ಒಳ್ಳೆಯದಲ್ಲ. ಪ್ರಮುಖ ವಿಷಯಗಳನ್ನ ಕಡಿತದ ಹೆಸರಲ್ಲಿ ಮಾಡಿರುವುದನ್ನು ಒಪ್ಪುವುದಲ್ಲ ಎಂದು ತಿಳಿಸಿದ್ದಾರೆ.

ಟಿಪ್ಪು ಪಾಠಕ್ಕೆ ಪರ-ವಿರೋಧಗಳು ವ್ಯಕ್ತವಾಗಿದ್ದವು:

ಅಂದಹಾಗೇ ಪಠ್ಯಪುಸ್ತಕದಲ್ಲಿ ಟಿಪ್ಪುಸುಲ್ತಾನ್ ವಿಷಯ ತೆಗೆಯುವ ವಿಚಾರವಾಗಿ ಸಾಕಷ್ಟು ವಿವಾದಗಳು ಎದ್ದಿದ್ದವು. ಟಿಪ್ಪು ಕನ್ನಡ ವಿರೋಧಿ ಪರ್ಷಿಯನ್ ಆಡಳಿತಗಾರನಾಗಿದ್ದು, ಇಂತಹ ವ್ಯಕ್ತಿಯ ಕುರಿತು ಇತಿಹಾಸ ಪಠ್ಯವನ್ನು ಮಕ್ಕಳಿಗೆ ಬೋಧಿಸುವುದರಿಂದ ಇಡೀ ನಾಡಿನ - ದೇಶದ ಚರಿತ್ರೆ ತಿರುಚಿದಂತಾಗುವುದು. ಹೀಗಾಗಿ ಈ ಪಠ್ಯವನ್ನು ಇತಿಹಾಸ ಪಠ್ಯಪುಸ್ತಕದಿಂದ ತೆಗೆದುಹಾಕಿ ಮುಂದಿನ ಪೀಳಿಗೆಗೆ ದೇಶಪ್ರೇಮ ರಾಷ್ಟ್ರಭಕ್ತಿ ಮೂಡಿಸುವ ಪಠ್ಯವನ್ನು ಅಳವಡಿಸಬೇಕೆಂದು ಮಡಿಕೇರಿ ವಿಧಾನಸಭಾ ಸದಸ್ಯ ಅಪ್ಪಚ್ಚು ರಂಜನ್ ಅವರು ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದಿದ್ದರು. ‌ನಂತರ ಇದಕ್ಕಾಗಿ ಪಠ್ಯ ಪುಸ್ತಕ ಸಮಿತಿ ರಚಿಸಿದಾಗ ಆ ಸಮಿತಿ ವರದಿಯಲ್ಲಿ ಪಠ್ಯ ತೆಗೆಯಬೇಡಿ ಅಂತ ಶಿಫಾರಸು ಕೂಡ ಮಾಡಲಾಗಿತ್ತು. ನಂತರ ಈ ವರ್ಷವೂ ಟಿಪ್ಪು ಪಾಠ ಇರಲಿದೆ ಅಂತ ರಾಜ್ಯ ಸರ್ಕಾರ ಹೇಳಿತ್ತು.

ಸದ್ಯ, ಪಠ್ಯ ಕಡಿತದ ಹೆಸರಲ್ಲಿ ಟಿಪ್ಪು ಪಾಠ ಕೈಬಿಟ್ಟಿದೆಯಾ ಅನ್ನೋ ಆರೋಪ ಮೇಲ್ನೋಟಕ್ಕೆ ಕಾಣುತ್ತಿದೆ. ಇದಕ್ಕೆ ಸಚಿವರು ಏನು ಉತ್ತರ ನೀಡುತ್ತಾರೆ ಅನ್ನೋದನ್ನ ಕಾದುನೋಡಬೇಕು.‌

Last Updated : Jul 28, 2020, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.