ನೆಲಮಂಗಲ: ಫ್ಲೈಓವರ್ ಮೇಲೆ ನಿಂತಿದ್ದ ಕ್ಯಾಂಟರ್ಗೆ ಬೈಕೊಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಮಹಿಳೆ ತೀವ್ರ ಗಾಯಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ನಡೆದಿದೆ.
ಶಿವಮೊಗ್ಗ ಮೂಲದ ಇನಾಯತ್ (27) ಅನಮ್ ಉಮಾನ (9) ಮೃತ ತಂದೆ-ಮಗಳು. ತೀವ್ರ ಗಾಯಗೊಂಡ ನಾಜಿರಾ ಭಾನು(25) ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲಸದ ನಿಮಿತ್ತ ಮೂವರು ಬೈಕ್ ಮೇಲೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ ಫ್ಲೈಓವರ್ ಮೇಲೆ ನಿಂತಿದ್ದ ಕ್ಯಾಂಟರ್ಗೆ ಬೈಕ್ ರಭಸವಾಗಿ ಡಿಕ್ಕಿಯಾಗಿದೆ. ಘಟನೆಯಲ್ಲಿ ತಂದೆ ಇನಾಯತ್, ಮಗಳು ಅನಮ್ ಉಮಾನಾ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ನಾಜಿರಾ ಭಾನು ತೀವ್ರವಾಗಿ ಗಾಯಗೊಂಡು ರಸ್ತೆಯ ಮೇಲೆ ನರಳಾಡುತ್ತಿದ್ದಾಗ ಸ್ಥಳದಲ್ಲೇ ಇದ್ದ ಜನರು ಅವರನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಉತ್ತರಪ್ರದೇಶದಲ್ಲಿ ಭೀಕರ ಅಪಘಾತ: ಮೂವರು ಯೋಧರ ದುರ್ಮರಣ, ಇಬ್ಬರಿಗೆ ಗಾಯ