ETV Bharat / state

ಬೆಂಗಳೂರಲ್ಲಿ ಲಾರಿ - ಕಾರಿನ ಮಧ್ಯೆ ಭೀಕರ ಅಪಘಾತ: ತಾಯಿ - ಮಗು ಸಜೀವ ದಹನ, ತಂದೆ - ಮತ್ತೋರ್ವ ಮಗುವಿಗೆ ಗಂಭೀರ ಗಾಯ - Car Accident

ಅಪಘಾತದ ರಭಸೆಕ್ಕೆ ಲಾರಿ ಕೂಡ ಪಲ್ಟಿಯಾಗಿದ್ದು, ಕಾರಿಗೆ ಬೆಂಕಿ ತಗುಲಿ, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ತಾಯಿ ಮಗು ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ.

Terrible accident between lorry and car
ಲಾರಿ- ಕಾರು ಮಧ್ಯೆ ಭೀಕರ ಅಪಘಾತ
author img

By ETV Bharat Karnataka Team

Published : Oct 3, 2023, 10:16 AM IST

Updated : Oct 3, 2023, 12:43 PM IST

ಬೆಂಗಳೂರು ಅಪಘಾತ

ಬೆಂಗಳೂರು: ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಹಾಗೂ ಮಗು ಸ್ಥಳದಲ್ಲೇ ಸಜೀವ ದಹನಗೊಂಡು ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವ ನೈಸ್​ ರಸ್ತೆಯ ಸೋಂಪುರ ಕ್ಲೋವರ್​ ಲೀಪ್​ ಬಳಿ ನಡೆದಿದೆ. ಇದೀಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಂದು ಮಗು ಆರು ವರ್ಷದ ಪ್ರಣವಿ ಕೂಡ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಗಂಡ - ಹೆಂಡತಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ ಎರಡು ವರ್ಷದ ಮಗು ಕುಷಾವಿ ಹಾಗೂ ತಾಯಿ ಸಿಂಧು (31) ಸಜೀವ ದಹನಗೊಂಡಿದ್ದಾರೆ. ಇನ್ನೊಂದು ಮಗು ಪ್ರಣವಿ ಹಾಗೂ ತಂದೆ ಮಹೇಂದ್ರನ್​ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೇಲಂ ಮೂಲದ ದಂಪತಿ ಸಿಂಧು ಹಾಗೂ ಮಹೇಂದ್ರನ್​ ರಾಮಮೂರ್ತಿ ನಗರ ಸಮೀಪದ ವಿಜಿನಾಪುರದಲ್ಲಿ ವಾಸವಿದ್ದರು. ಬಾಡಿಗೆ ಕಾರು ಪಡೆದಿದ್ದ ದಂಪತಿ ನಿನ್ನೆ ಇಬ್ಬರು ಮಕ್ಕಳೊಂದಿಗೆ ಅದೇ ಕಾರಿನಲ್ಲಿ ನಾಗಸಂದ್ರಕ್ಕೆ ತೆರಳಿದ್ದರು. ತಡರಾತ್ರಿ ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತಿದ್ದಾಗ ಕಾರು ನಿಯಂತ್ರಣ ತಪ್ಪಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗಿದೆ. ಬೆಳಗ್ಗಿನ ಜಾವ ಸುಮಾರು 2.50ರ ಹೊತ್ತಿಗೆ ಅಪಘಾತ ನಡೆದಿದೆ.

ಅಪಘಾತದ ರಭಸಕ್ಕೆ ಲಾರಿ ಸಹ ಪಲ್ಟಿಯಾಗಿದೆ. ನಿದ್ದೆಯ ಮಂಪರಿನಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಕಾರು ಅಪಘಾತ ಪ್ರಕರಣ: ನಟ ನಾಗಭೂಷಣ್ ಠಾಣಾ ಜಾಮೀನಿನ ಮೇಲೆ ಬಿಡುಗಡೆ- ಡಿಸಿಪಿ

ತಡ ರಾತ್ರಿ ನಗರದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ, ಈ ಮಾರ್ಗ ಮಧ್ಯ ಸಂಚರಿಸುತ್ತಿದ್ದ ಬೃಹತ್ ಗಾತ್ರದ ಕ್ರೇನ್ ಹೊತ್ತಿ ಉರಿದ ಘಟನೆ ನಡೆದಿದೆ. ವರ್ತೂರಿನಿಂದ ಬಿಡದಿಗೆ ತೆರಳುತ್ತಿದ್ದ ಕ್ರೇನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಚಾಲಕ ವಾಹನವನ್ನು ನಿಧಾನಗೊಳಿಸಿದ. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗಿ ನೋಡನೋಡುತ್ತಿದ್ದಂತೆ ರಸ್ತೆಯಲ್ಲಿ ಕ್ರೇನ್ ಧಗಧಗನೇ ಹೊತ್ತಿ ಉರಿದಿದೆ. ಯಲಚೇನಹಳ್ಳಿ ತಲುಪುವಾಗ ಕ್ರೇನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕ್ರೇನ್ ನಿಲ್ಲಿಸಿದ ಚಾಲಕ ಹಾಗೂ ಇಬ್ಬರು ಸಿಬ್ಬಂದಿ ಕ್ರೇನ್​ನಿಂದ ಹೊರ ಬಂದಿದ್ದಾರೆ. ಇನ್ನು ರಸ್ತೆಯ ಪಕ್ಕದಲ್ಲೇ ಎರಡು ಪೆಟ್ರೋಲ್ ಬಂಕ್​ಗಳು ಇದ್ದುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Oct 3, 2023, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.