ETV Bharat / state

ವಶಕ್ಕೆ ಪಡೆದ ವಿಷಯ ಗೊತ್ತಿದ್ದೂ ಹೆಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಕೆ : 10 ಸಾವಿರ ದಂಡ ವಿಧಿಸಿದ ಕೋರ್ಟ್​ - ಈಟಿವಿ ಭಾರತ್​ ಕನ್ನಡ

ಪೊಲೀಸರು ಬಂಧಿಸಿದ್ದು ತಿಳಿದಿದ್ದರೂ ​ಹೆಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿ ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆ ಪ್ರಯತ್ನ ಮಾಡಿದ್ದಕ್ಕೆ ಅರ್ಜಿದಾರರಿಗೆ ಕೋರ್ಟ್​ ಹತ್ತು ಸಾವಿರ ದಂಡ ವಿಧಿಸಿದೆ.

HC_NEWS_FINE
ಹೆಬಿಯಾಸ್​ ಕಾರ್ಪಸ್​
author img

By

Published : Sep 20, 2022, 10:10 PM IST

ಬೆಂಗಳೂರು: ಭಯೋತ್ಪಾದಕ ಕೃತ್ಯಕ್ಕೆ ಸಂಚು ಮತ್ತು ರಾಷ್ಟ್ರಧ್ವಜ ಸುಟ್ಟ ಆರೋಪ ಹೊತ್ತು ವಿಚಾರಣೆಗೆ ಪೊಲೀಸರ ವಶಕ್ಕೆ ಪಡೆದ ಅಂಶ ಗೊತ್ತಿದ್ದರೂ ಮಗನನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸರಿಗೆ ಸೂಚಿಸಲು ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಮಂಗಳೂರು ಮೂಲದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುನೀರ್ ಅಹ್ಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ದಂಡ ವಿಧಿಸಿ ಆದೇಶಿಸಿದೆ. ವಿಚಾರಣೆ ವೇಳೆ ಒಂದು ಲಕ್ಷ ರೂ. ದಂಡ ವಿಧಿಸಲು ನ್ಯಾಯಪೀಠ ಮುಂದಾಗಿತ್ತು. ಆದರೆ, ಅರ್ಜಿದಾರರ ಮನವಿಯ ಮೇರೆಗೆ ಮೊತ್ತವನ್ನು 10 ಸಾವಿರಕ್ಕೆ ಇಳಿಸಿತು. ಆ ಮೊತ್ತವನ್ನು ಹೈಕೋರ್ಟ್ ವಕೀಲರ ಗುಮಾಸ್ತರ ಸಂಘಕ್ಕೆ ನೀಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ಅರ್ಜಿ ವಜಾಗೊಳಿಸಿತು.

ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲ ಪಿ.ತೇಜೇಶ್​ ಮೆಮೊ ಸಲ್ಲಿಸಿ, ಅರ್ಜಿದಾರನ ಪುತ್ರನ ಕಾಣೆ ಸಂಬಂಧ ಮಂಗಳೂರು ಪೂರ್ವ ಠಾಣೆ ಪೊಲೀಸರು 2022ರ ಸಪ್ಟೆಂಬರ್​ 19ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ತೀರ್ಥಹಳ್ಳಿ ಠಾಣಾ ಪೊಲೀಸರು ಅರ್ಜಿದಾರನ ಪುತ್ರನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು.

ಬಳಿಕ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಪ್ಟೆಂಬರ್​ 20ರ ಮಧ್ಯರಾತ್ರಿ 12:30ಕ್ಕೆ ಬಂಧಿಸಿದ್ದರು. ಬೆಳಗ್ಗೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿ ಎಫ್‌ಐಆರ್ ಅನ್ನು ಕೋರ್ಟ್‌ಗೆ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ತೀರ್ಥಹಳ್ಳಿ ಠಾಣಾ ಪೊಲೀಸರು ವಿಚಾರಣೆಗಾಗಿ ತಮ್ಮ ಪುತ್ರನನ್ನು ಕರೆದೊಯ್ದಿರುವ ವಿಚಾರ ಅರ್ಜಿದಾರರಿಗೆ ತಿಳಿದಿದೆ. ಹೀಗಿದ್ದರೂ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಸ.20ರಂದು ಮಧ್ಯರಾತ್ರಿಯೇ ಮಾಝ್‌ನನ್ನು ಬಂಧಿಸಿರುವ ವಿಚಾರವನ್ನು ಪೊಲೀಸರು ಅರ್ಜಿದಾರರಿಗೆ ತಿಳಿಸಿದ್ದಾರೆ.

ಅರ್ಜಿ ವಿಚಾರಣೆಗೆ ಬಂದಾಗ ಆ ಮಾಹಿತಿಯನ್ನು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿಲ್ಲ. ಸತ್ಯಾಂಶ ತಿಳಿದರೂ ಅರ್ಜಿ ಹಿಂಪಡೆಯುವುದಕ್ಕೆ ಮುಂದಾಗಲಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆ ಪ್ರಯತ್ನ ಇದಾಗಿದ್ದು, ದಂಡ ವಿಧಿಸಲು ಅರ್ಹ ಪ್ರಕರಣ ಎಂದು ಕಿಡಿಕಾರಿ ಈ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ ಏನು? : ಮಂಗಳೂರಿನ ಮನೆಯಲ್ಲಿದ್ದ ತಮ್ಮ ಪುತ್ರ ಮಾಝ್‌ಗೆ ಸಪ್ಟೆಂಬರ್​ 14ರಂದು ಮಧ್ಯಾಹ್ನ 1.30ಕ್ಕೆ ಕರೆ ಮಾಡಿದ ಕೆಲ ಅಪರಿಚಿತರು ಮನೆ ಕೆಳಗೆ ಬಂದು ಪಾರ್ಸಲ್ ಸಂಗ್ರಹಿಸಿಕೊಳ್ಳುವಂತೆ ತಿಳಿಸಿದ್ದರು. ಅದರಂತೆ ಪಾರ್ಸಲ್ ಪಡೆಯಲು ಮನೆಯಿಂದ ತೆರಳಿದ ಮಾಝ್ ಹಿಂದಿರುಗಿಲ್ಲ ಎಂದು ತಿಳಿಸಿ ಮುನೀರ್ ಅಹ್ಮದ್ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಸಪ್ಟೆಂಬರ್​ 17ರಂದು ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ನಂತರ ಸಪ್ಟೆಂಬರ್​ 19ರಂದು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿ, ತಮ್ಮ ಮಗನನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸರಿಗೆ ಆದೇಶಿಸುವಂತೆ ಕೋರಿದ್ದರು.

ಇದನ್ನೂ ಓದಿ : ಮಂತ್ರಿ ಡೆವಲಪರ್ಸ್​ನಿಂದ ಮನೆ ಖರೀದಿಗೆ ಸಾಲ ಪಡೆದವರ ಸಿಬಿಲ್​ ಸ್ಕೋರ್ ಮರು ಸ್ಥಾಪಿಸಲು ಹೈಕೋರ್ಟ್​ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.