ETV Bharat / state

ಟೆಕ್ಕಿಯ ರೂಂ​​ಮೆಂಟ್​​ಗಿಲ್ಲ ಕೊರೊನಾ: ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ನಿಗಾ - ತೆಲಂಗಾಣ ಮೂಲದ ಬೆಂಗಳೂರು ಟೆಕ್ಕಿಯ ರೂಮ್‍ಮೆಂಟ್

ಕೊರೊನಾ ವೈರಸ್ ಕಾಣಿಸಿಕೊಂಡ ತೆಲಂಗಾಣ ಮೂಲದ ಟೆಕ್ಕಿಯ ರೂಂಮೆಂಟ್​ನಲ್ಲಿ ಮಹಾಮಾರಿ ವೈರಸ್ ಪತ್ತೆಯಾಗಿಲ್ಲ ಎಂದು ವರದಿ ಬಂದಿದೆ.

karona
ಕೊರೋನಾ
author img

By

Published : Mar 4, 2020, 2:16 AM IST

ಬೆಂಗಳೂರು: ಕೊರೊನಾ ಸೋಂಕಿತ ತೆಲಂಗಾಣ ಮೂಲದ ಟೆಕ್ಕಿ ಜೊತೆ ವಾಸವಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಕೊರೊನಾ ಸೋಂಕಿತ ವ್ಯಕ್ತಿಯ ರೂಂಮೆಂಟ್‍ಗೂ ವೈದ್ಯರು ಕೊರೊನಾ ಸೋಂಕು ಪರೀಕ್ಷೆ ಮಾಡಿದ್ದು, ವರದಿಯು ನೆಗೆಟಿವ್ ಎಂದು ದೃಢಪಟ್ಟಿದೆ. ಸೋಂಕಿತ ಟೆಕ್ಕಿ ಜೊತೆ ಒಂದೇ ರೂಮ್‍ನಲ್ಲಿ ಒಂದು ದಿನ ವಾಸವಿದ್ದ ಆತನ ರೂಂಮೆಂಟ್‍ಗೂ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು.

ಮಂಗಳವಾರ ಮಧ್ಯಾಹ್ನ ಆತ ಸ್ವತಃ ರಾಜೀವ್‍ಗಾಂಧಿ ಆಸ್ಪತ್ರೆಗೆ ಬಂದು ಪರೀಕ್ಷೆಗೊಳಗಾಗಿದ್ದರು. ಆತನ ಗಂಟಲು ದ್ರಾವಣ ಮಾದರಿ ಪರೀಕ್ಷೆ ವರದಿ ನೆಗೆಟಿವ್ ಎಂದು ಬಂದಿದೆ. ಆದರೆ ನಗರದ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲೇ ನಿಗಾವಹಿಸಲಾಗಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ..

ಇನ್ನು ಇದುವರೆಗೂ 39,391 ರೋಗಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೊಳಪಟ್ಟಿದ್ದಾರೆ. ಅದರಲ್ಲಿ 180 ಪ್ರಯಾಣಿಕರು ಚೀನಾ ವಿವಿಧ ನಗರಗಳಿಂದ ಬಂದಿದ್ದಾರೆ. ಮೂವರು ಪ್ರಯಾಣಿಕರು ವುಹಾನ್ ಸಿಟಿಯಿಂದ ಬಂದಿದ್ದಾರೆ. 245 ಮಂದಿಗೆ ರಕ್ತ ಮಾದರಿ ಪರೀಕ್ಷೆ ಹಾಗೂ 468 ಮಂದಿ ನಿಗಾವಹಿಸಲು ನೋಂದಣಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.