ETV Bharat / state

ತೇಜಸ್ವಿನಿ ಅನಂತಕುಮಾರ್​​ಗೆ ಸಾರು ಮಾಡಲು ಹೇಳಿಕೊಟ್ಟಿದ್ದು ವೆಂಕಯ್ಯ ನಾಯ್ಡು ಪತ್ನಿಯಂತೆ..!

ಕೇಂದ್ರ ಸಚಿವ ದಿ.ಅನಂತಕುಮಾರ್​ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್​ ಅವರು ವೆಂಕಯ್ಯ ನಾಯ್ಡು ಅವರ ಕುಟುಂಬದ ಜೊತೆಗೆ ಕಳೆದ ದಿನಗಳನ್ನು ಮೆಲುಕುಹಾಕಿದರು.

Tejaswini Ananthakumar
ತೇಜಸ್ವಿನಿ ಅನಂತಕುಮಾರ್​​
author img

By

Published : Jan 7, 2020, 9:09 PM IST

ಬೆಂಗಳೂರು: ಇಂದು ಸಮಾರೋಪಗೊಂಡ 107ನೇ ವಿಜ್ಞಾನ ಕಾಂಗ್ರೆಸ್​​ನಲ್ಲಿ ಕೇಂದ್ರ ಸಚಿವ ದಿ.ಅನಂತಕುಮಾರ್​ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್​ ಅವರು ವೆಂಕಯ್ಯ ನಾಯ್ಡು ಅವರ ಕುಟುಂಬದ ಜೊತೆಗೆ ಕಳೆದ ದಿನಗಳನ್ನು ಮೆಲುಕುಹಾಕಿದರು.

Tejaswini Ananthakumar
ವೆಂಕಯ್ಯ ನಾಯ್ಡು ಅವರೊಂದಿಗೆ ತೇಜಸ್ವಿನಿ ಅನಂತಕುಮಾರ್

1996-97 ನೇ ಸಾಲಿನಲ್ಲಿ ದೆಹಲಿಯ ಸೌತ್‌ ಅವೆನ್ಯೂ ನಲ್ಲಿರುವ ಮನೆಯಲ್ಲಿ ಒಟ್ಟಿಗೆ ಇದ್ದಾಗ ದಕ್ಷಿಣ ಭಾರತ ಶೈಲಿಯ ಸಾಂಬಾರನ್ನು ಸರಿಯಾಗಿ ಮಾಡಲು ಕಲಿತಿದ್ದು ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ನಾಯ್ಡು ಅವರಿಂದ. ಅಂದು ಅವರಿಂದ ಕಲಿತ ಸಣ್ಣ ಪ್ರಮಾಣದ ಸಾಂಬಾರು ತಯಾರಿಕೆ ಇಂದು ಲಕ್ಷಾಂತರ ಮಕ್ಕಳಿಗೆ ಸಾಂಬಾರು ಮಾಡುವಲ್ಲಿ ಸಹಾಯ ಮಾಡಿದೆ ಎಂದು ನೆನಪು ಮಾಡಿಕೊಂಡರು.

ಬೆಂಗಳೂರು: ಇಂದು ಸಮಾರೋಪಗೊಂಡ 107ನೇ ವಿಜ್ಞಾನ ಕಾಂಗ್ರೆಸ್​​ನಲ್ಲಿ ಕೇಂದ್ರ ಸಚಿವ ದಿ.ಅನಂತಕುಮಾರ್​ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್​ ಅವರು ವೆಂಕಯ್ಯ ನಾಯ್ಡು ಅವರ ಕುಟುಂಬದ ಜೊತೆಗೆ ಕಳೆದ ದಿನಗಳನ್ನು ಮೆಲುಕುಹಾಕಿದರು.

Tejaswini Ananthakumar
ವೆಂಕಯ್ಯ ನಾಯ್ಡು ಅವರೊಂದಿಗೆ ತೇಜಸ್ವಿನಿ ಅನಂತಕುಮಾರ್

1996-97 ನೇ ಸಾಲಿನಲ್ಲಿ ದೆಹಲಿಯ ಸೌತ್‌ ಅವೆನ್ಯೂ ನಲ್ಲಿರುವ ಮನೆಯಲ್ಲಿ ಒಟ್ಟಿಗೆ ಇದ್ದಾಗ ದಕ್ಷಿಣ ಭಾರತ ಶೈಲಿಯ ಸಾಂಬಾರನ್ನು ಸರಿಯಾಗಿ ಮಾಡಲು ಕಲಿತಿದ್ದು ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ನಾಯ್ಡು ಅವರಿಂದ. ಅಂದು ಅವರಿಂದ ಕಲಿತ ಸಣ್ಣ ಪ್ರಮಾಣದ ಸಾಂಬಾರು ತಯಾರಿಕೆ ಇಂದು ಲಕ್ಷಾಂತರ ಮಕ್ಕಳಿಗೆ ಸಾಂಬಾರು ಮಾಡುವಲ್ಲಿ ಸಹಾಯ ಮಾಡಿದೆ ಎಂದು ನೆನಪು ಮಾಡಿಕೊಂಡರು.


ಅದಮ್ಯ ಚೇತನದ ಶೂನ್ಯ ತ್ಯಾಜ್ಯ ಮತ್ತು ಹಸಿರು ಅಡುಗೆ ಮನೆ ಎಲ್ಲರಿಗೂ ಮಾದರಿಯಾಗಲಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರು, ಜನವರಿ 07, 2020: ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪೂರೈಕೆ ಮಾಡುತ್ತಿರುವ ಅದಮ್ಯ ಚೇತನದ ಕಾರ್ಯವನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಬೆಂಗಳೂರಿನಲ್ಲಿ ಮಂಗಳವಾರ ಅದಮ್ಯ ಚೇತನದ ಪರಿಸರ ಸ್ನೇಹಿ ಅಡುಗೆ ಮನೆಗೆ ಭೇಟಿ ನೀಡಿದ ಉಪರಾಷ್ಟ್ರಪತಿಗಳು, ಇಲ್ಲಿನ ಕಾರ್ಯಚಟುವಟಿಕೆಗಳು ಮತ್ತು ಬಿಸಿಯೂಟ ಪೂರೈಕೆಯಾಗುತ್ತಿರುವ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಅವರಿಂದ ಮಾಹಿತಿ ಪಡೆದರು.

 

ಬಹಳ ವರ್ಷಗಳಿಂದ ಅದಮ್ಯ ಚೇತನದ ಬಗ್ಗೆ ತಿಳಿದುಕೊಂಡಿದ್ದೆ. ಇದು ನನ್ನ ಆತ್ಮೀಯ ಸ್ನೇಹಿತರಾಗಿದ್ದ ಅನಂತಕುಮಾರ್ ಮತ್ತು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಕಟ್ಟಿ ಬೆಳೆಸಿದ ಸಂಸ್ಥೆಯಾಗಿದೆ. ನನ್ನ ನೆಚ್ಚಿನ ಮಿತ್ರ ಅನಂತಕುಮಾರ್ ಅವರು ಸಂಸ್ಥೆಯನ್ನು ತಮ್ಮ ಸರ್ವಸ್ವವನ್ನಾಗಿಸಿಕೊಂಡಿದ್ದರು. ಸಾಕಷ್ಟು ಬಾರಿ ಕೇಳಿದ್ದರೂ ಅದಮ್ಯ ಚೇತನದ ಶೂನ್ಯ ತ್ಯಾಜ್ಯ ಮತ್ತು ಹಸಿರು ಅಡುಗೆ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.  ಇಂದು ಅವಕಾಶ ದೊರೆತ್ತಿದ್ದು, ಇಲ್ಲಿನ ವ್ಯವಸ್ಥೆಯನ್ನು ನೋಡಿದಾಗ ತುಂಬಾ ಸಂತಸವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಶೂನ್ಯ ತ್ಯಾಜ್ಯ ಮತ್ತು ಪರಿಸರ ಸ್ನೇಹಿ ಅಡುಗೆ ಮನೆಯನ್ನು ಅಭಿವೃದ್ಧಿಪಡಿಸಿರುವುದರ ಹಿಂದೆ ತೇಜಸ್ವಿನಿ ಅನಂತಕುಮಾರ್ ಮತ್ತು ಇಲ್ಲಿನ ಸಮರ್ಪಣಾ ಭಾವದ ಸಿಬ್ಬಂದಿಯ ಅವಿರತ ಶ್ರಮ ಇದೆ. ಅವರು ಹಗಲಿರುಳೂ ಸಂಸ್ಥೆಯನ್ನು ಬೆಳೆಸಲು ಮತ್ತು ಸಾವಿರಾರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವಲ್ಲಿ ತೋರುತ್ತಿರುವ ಬದ್ಧತೆ ಇತರರಿಗೂ ಅನುಕರಣೀಯ ಮತ್ತು ಮಾರ್ಗದರ್ಶಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದ ಇಲ್ಲಿನ ಕೆಲಸಗಾರರು ಹಾಗೂ ಸ್ವಯಂ ಸೇವಕರ ಬದ್ಧತೆ ನಿಜಕ್ಕೂ ಮೆಚ್ಚುವಂತಹದ್ದು. ಪ್ರತಿದಿನ ಸಾವಿರಾರು ಮಕ್ಕಳಿಗೆ ಪೌಷ್ಠಿಕಾಂಶದ ಆಹಾರವನ್ನು ಒದಗಿಸುವುದರ ಹಿಂದೆ ಇವರ ಶ್ರಮ ಸಾಕಷ್ಟಿದೆ ಎಂದು ಶ್ಲಾಘಿಸಿದ ವೆಂಕಯ್ಯನಾಯ್ಡು ಅವರು, ಮನುಷ್ಯನ ದೇಹಕ್ಕೆ ಆರೋಗ್ಯ ಅತ್ಯಂತ ಪ್ರಮುಖವಾದುದು. ಪೌಷ್ಠಿಕಾಂಶದ ಆಹಾರದ ಜತೆ ಜತೆಯಲ್ಲಿಯೇ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಬೇಕಿದೆ. ಇದನ್ನು ಎಲ್ಲರೂ ಅನುಸರಿಸಿದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

 

ಈಗ ಎಲ್ಲಿ ನೋಡಿದರೂ ಇನ್ ಸ್ಟಂಟ್ ಫುಡ್ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ ಮತ್ತು ಇಂತಹ ಆಹಾರವನ್ನೇ ತಿಂದರೆ ರೋಗವನ್ನು ಆಹ್ವಾನಿಸಿದಂತಾಗುತ್ತದೆ. ಹಿನ್ನೆಲೆಯಲ್ಲಿ ಪೌಷ್ಠಿಕಾಂಶವಿರುವ ಆಹಾರ ಸೇವನೆ ಬಗ್ಗೆ ಗಮನಹರಿಸಬೇಕು. ಕರ್ನಾಟಕದಲ್ಲಿ ರಾಗಿ ಮುದ್ದೆ, ಬಿಸಿಬೇಳೆ ಬಾತ್ ನಂತಹ ಆಹಾರ ಸೇವನೆ ಆರೋಗ್ಯವನ್ನು ಕಾಪಾಡುತ್ತವೆ ಎಂದರು.

 

ಪೌಷ್ಠಿಕಾಂಶ ಆಹಾರ ನೀಡುವ ಹಾದಿಯಲ್ಲಿ ಅದಮ್ಯ ಚೇತನದಂತಹ ಸಂಸ್ಥೆಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ಒಂದಲ್ಲಾ ಒಂದು ರೀತಿಯ ಕೊಡುಗೆಯನ್ನು ನೀಡಿದಾಗ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟ ವೆಂಕಯ್ಯನಾಯ್ಡು ಅವರು, ತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಇಡೀ ಜೀವನವನ್ನು ಅದಮ್ಯ ಚೇತನ ಉನ್ನತಿಗೆ ಮುಡಿಪಾಗಿಡುವ ಮೂಲಕ ಸಾವಿರಾರು ಮಕ್ಕಳಿಗೆ ಆಹಾರವನ್ನು ಒದಗಿಸುತ್ತಿದ್ದಾರೆ. ಇದು ಶ್ಲಾಘನೀಯವಾಗಿದೆ ಮತ್ತು ಅನುಕರಣೀಯವಾಗಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

 

ತೇಜಸ್ವಿನಿ ಅನಂತಕುಮಾರ್ ಅವರು ಮಕ್ಕಳಿಗೆ ಕೇವಲ ಅನ್ನ ನೀಡುತ್ತಿಲ್ಲ. ಬದಲಿಗೆ ಅನ್ನ, ಅಕ್ಷರ ಮತ್ತು ಆರೋಗ್ಯ ಸೇವೆಗಳನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.

 

ಇನ್ನು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಸ್ಥಾಪನೆ ಅನಂತಕುಮಾರ್ ಅವರ ಕನಸಿನ ಕೂಸಾಗಿತ್ತು. ಕೇಂದ್ರಗಳನ್ನು ಸ್ಥಾಪನೆ ಮಾಡಿದ ನಂತರ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿ ದೊರೆಯುವಂತಾಗಿದೆ. ಇದಲ್ಲದೇ, ಯೂರಿಯಾ ಬೆಲೆ ಇಳಿಸುವಲ್ಲಿ ಅನಂತಕುಮಾರ್ ಪ್ರಮುಖ ಪಾತ್ರ ವಹಿಸಿದ್ದರಿಂದ ರೈತರು ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರವನ್ನು ಖರೀದಿಸುವಂತಾಗಿದೆ ಎಂದರು.

 

ತೇಜಸ್ವಿನಿ ಅನಂತಕುಮಾರ್ ಅವರು ಮಾತನಾಡಿ, ಶೂನ್ಯ ತ್ಯಾಜ್ಯ ಅಡುಗೆ ಮನೆ ನಿರ್ಮಾಣ ಮಾಡಿದ ಬಗೆಯನ್ನು ವಿವರಿಸಿದರು. ದಿವಂಗತ ಅನಂತಕುಮಾರ್‌ ಹಾಗೂ ವೆಂಕಯ್ಯನಾಯ್ಡು ಅವರ ಸ್ನೇಹವನ್ನು ನೆನಪಿಸಿಕೊಂಡು ಭಾವುಕರಾದರು. ಅದಮ್ಯ ಚೇತನದಿಂದ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರ ಅಡುಗೆ ಕೇಂದ್ರಗಳಿಂದ ಪ್ರತಿನಿತ್ಯ 1.5 ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 

ಅದಮ್ಯ ಚೇತನ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅನ್ನ-ಅಕ್ಷರ-ಆರೋಗ್ಯ ಎಂಬ ಮೂರು ಪ್ರಮುಖ ಪ್ರಕಲ್ಪಗಳಡಿಯಲ್ಲಿ ಸೇವಾನಿರತವಾಗಿದೆ. ಬೆಂಗಳೂರಿನ ಸಂಸದರು ಮತು ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ರವರು ತಮ್ಮ ತಾಯಿಯವರಾದ ಶ್ರೀಮತಿ ಗಿರಿಜಾ ಶಾಸ್ತ್ರಿಯವರ ಸ್ಮರಣಾರ್ಥ `ಅದಮ್ಯ ಚೇತನಸಂಸ್ಥೆಯನ್ನು 1997ರಲ್ಲಿ ಸ್ಥಾಪಿಸಿದರು. ಅನಂತಕುಮಾರ್ರವರು ತಮ್ಮ ತಾಯಿಯ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟರಲ್ಲದೇ ಸಮಾಜ ಮತ್ತು ದೇಶ ಮೊದಲು ಎಂದು ಕಾರ್ಯನಿರ್ವಹಿಸಿದರು. ತಮ್ಮ ಸಾರ್ವಜನಿಕ ಜೀವನ ಮತ್ತು ಅದಮ್ಯ ಚೇತನದ ಮುಖಾಂತರ ಉತ್ತಮ ಸಮಾಜ ಮತ್ತು ದೇಶವನ್ನು ನಿರ್ಮಿಸುವತ್ತ ಭದ್ರ ಬುನಾದಿಯನ್ನು ಹಾಕಿದರು.

 

ಅದಮ್ಯ ಚೇತನದ ಅನ್ನಪೂರ್ಣ ಅಡುಗೆ ಶೂನ್ಯ ತ್ಯಾಜ್ಯ ಅಡುಗೆ ಮನೆ ಎಂದು ಹೆಗ್ಗಳಿಕೆ ಪಡೆದಿದೆ.  ಪರ್ಯಾಯ ಇಂಧನಗಳ ಕುರಿತು ಮಾಡಿದ ಸಂಶೋಧನೆಗಳಿಂದ ಜೈವಿಕ ತ್ಯಾಜ್ಯವನ್ನು ಅದಮ್ಯ ಚೇತನ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಫಾಸಿಲ್ ಇಂಧನವನ್ನು ಉಳಿತಾಯ ಮಾಡುತ್ತಿದ್ದು ಪ್ರತಿದಿನವೂ 75 ಎಲ್ಪಿಜಿ ಸಿಲಿಂಡರ್ಗಳಷ್ಟು ಮತ್ತು 750 ಲೀಟರ್ ಡೀಸೆಲ್ನಷ್ಟು ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ಅನಂತಕುಮಾರ್‌ ಅವರ ಸಹೋದರ ಹಾಗೂ ಅದಮ್ಯ ಚೇತನ ಟ್ರಸ್ಟಿಗಳಾದ ನಂದಕುಮಾರ್‌, ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಕೃಷ್ಣ ಭಟ್‌ ಸೇರಿದಂತೆ ಪ್ರಮುಖ ಟ್ರಸ್ಟಿಗಳು ಭಾಗವಹಿಸಿದ್ದರು.

---ಬಾಕ್ಸ್---

ವೆಂಕಯ್ಯ ನಾಯ್ಡು ಅವರಿಂದ ಕನ್ನಡಲ್ಲಿ ಭಾಷಣ ಆರಂಭ

ತಮ್ಮ ಭಾಷಣವನ್ನು ಕನ್ನಡದಲ್ಲಿಯೇ ಆರಂಭಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು, ಸಭೆಯಲ್ಲಿ ಹಾಜರಿದ್ದ ಗಣ್ಯರೆಲ್ಲರ ಹೆಸರನ್ನು ಉಲ್ಲೇಖಿಸಿ ಕನ್ನಡದಲ್ಲಿಯೇ ಸ್ವಾಗತಿಸಿದರು. ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ಕನ್ನಡದಲ್ಲಿ ಹೇಳಿದಾಗ ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

---ಬಾಕ್ಸ್---

ಉಷಾ ನಾಯ್ಡು ಅವರಿಂದಲೇ ಸಾರು ಮಾಡಲು ಕಲಿತಿದ್ದು: ತೇಜಸ್ವಿನಿ ಅನಂತಕುಮಾರ್‌

1996 – 97 ನೇ ಸಾಲಿನಲ್ಲಿ ದೆಹಲಿಯ ಸೌತ್‌ ಅವೆನ್ಯೂ ನಲ್ಲಿರುವ ಮನೆಯಲ್ಲಿ ಒಟ್ಟಿಗೆ ಇದ್ದಾಗ ದಕ್ಷಿಣ ಭಾರತ ಶೈಲಿಯ ಸಾಂಬಾರನ್ನು ಸರಿಯಾಗಿ ಮಾಡಲು ಕಲಿತಿದ್ದು ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ನಾಯ್ಡು ಅವರಿಂದ. ಅಂದು ಅವರಿಂದ ಕಲಿತ ಸಣ್ಣ ಪ್ರಮಾಣದ ಸಾಂಬಾರು ತಯಾರಿಕೆ ಇಂದು ಲಕ್ಷಾಂತರ ಮಕ್ಕಳಿಗೆ ಸಾಂಬಾರು ಮಾಡುವಲ್ಲಿ ಸಹಾಯ ಮಾಡಿದೆ ಎಂದು ನೆನಪು ಮಾಡಿಕೊಂಡರು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.