ETV Bharat / state

ಬೆಂಗಳೂರು: ಹಳಿ ತಪ್ಪಿದ ಮೆಟ್ರೋ ರೀ ರೈಲ್... ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಕಾರ್ಯಾಚರಣೆ - ಮೆಟ್ರೋ ಸಂಚಾರ ವ್ಯತ್ಯಯ

ನಮ್ಮ ಮೆಟ್ರೋ ರೀ ರೈಲು ಹಳಿ ತಪ್ಪಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಮೆಟ್ರೋ
ಮೆಟ್ರೋ
author img

By ETV Bharat Karnataka Team

Published : Oct 3, 2023, 10:51 AM IST

Updated : Oct 3, 2023, 2:28 PM IST

ಹಳಿ ತಪ್ಪಿದ ಮೆಟ್ರೋ ರೀ ರೈಲ್ ತೆರವು ಕಾರ್ಯಾಚರಣೆ

ಬೆಂಗಳೂರು: ರಾಜಾಜಿನಗರ ಬಳಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ ರೀ ರೈಲು ಹಳಿ ತಪ್ಪಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯ ರಾಜಾಜಿನಗರದಿಂದ ಮಂತ್ರಿ ಸ್ಕ್ವೇರ್ ಮತ್ತು ಯಶವಂತಪುರ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಕೆಲಸಕ್ಕೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದೇ ಪರದಾಡಬೇಕಾಯಿತು.

ರಾಜಾಜಿನಗರ ಬಳಿ ಉಂಟಾದ ತಾಂತ್ರಿಕ ಸಮಸ್ಯೆ ಸರಿಪಡಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಸಮಸ್ಯೆ ಸರಿ ಹೋಗುವ ಸಾಧ್ಯತೆ ಇದೆ. ಅಲ್ಲಿಯವರಿಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಆಗಲಿದೆ. ಮೆಟ್ರೋ ಸಂಚಾರಕ್ಕೆ ಅಡೆ ತಡೆ ಆಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಗಮ್ಯ ಸ್ಥಾನಕ್ಕೆ ತಲುಪಲಾಗದೇ ಪರದಾಟ ನಡೆಸಬೇಕಿದೆ.

ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ತಾಂತ್ರಿಕ ತೊಂದರೆಯಿಂದಾಗಿ ನಾಗಸಂದ್ರ ಮತ್ತು ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್​​ನಿಂದ ರೇಷ್ಮೆ ಸಂಸ್ಥೆಯವರೆಗೆ ಮಾತ್ರ "ಹಸಿರು ಮಾರ್ಗ" ದ ಮೆಟ್ರೋ ಸಂಚರಿಸುತ್ತಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ಸಮಸ್ಯೆಯಾದಾಗ ರೀ ರೈಲು ಬಳಸಿ ಸಮಸ್ಯೆ ಸರಿಪಡಿಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಸಮಸ್ಯೆ ಸರಿಹೋಗುವ ಸಾಧ್ಯತೆಗಳು ಇವೆ ಎಂದು ಬಿಎಂಆರ್​​ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಕಾರ್ಯಾಚರಣೆ: ಮೆಟ್ರೋ ಹಳಿಯ ಬದಿಯ ಗೋಡೆಗೆ ತಾಗಿ ನಿಂತಿರುವ ರೀ ರೈಲ್​​ಅನ್ನು ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಹಳಿಗೆ ಕೂರಿಸಲು ಎಂಜಿನಿಯರ್​ಗಳು ಪ್ರಯತ್ನಿಸುತ್ತಿದ್ದಾರೆ. 200 ಟನ್ ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿರುವ ಕ್ರೇನ್ ಮೂಲಕ 17 ಟನ್ ಇರುವ ರೀ ರೈಲು ಕೆಳಗಿಳಿಸಲು ತಂತ್ರಜ್ಞರು ಹರಸಾಹಸಪಡುತ್ತಿದ್ದಾರೆ.

ಸದ್ಯ ರಾಜಾಜಿನಗರ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಮೆಟ್ರೋ ಸೇವೆಯಲ್ಲಿ ವ್ಯತ್ಯವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದರು. ಪೀಕ್​​ ಅವರ್​ ಆದ ಕಾರಣ ಮಧ್ಯಾಹ್ನದ ಬಳಿಕ ಸಿಂಗಲ್ ಲೈನ್​ನಲ್ಲಿ ಮೆಟ್ರೋ ಸಂಚಾರ ಆರಂಭಿಸಲಾಯಿತು.

ರೋಡ್ ಕಂ ರೈಲ್ ಪರೀಕ್ಷಾರ್ಥಕ್ಕಾಗಿ ಕಳೆದ ರಾತ್ರಿ ತೆಗೆದುಕೊಂಡು ಹೋದಾಗ ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತಿದೆ. ಆದ್ರೆ ಆದ್ಯತೆ ಮೇರೆಗೆ ಜನರಿಗೆ ಸೇವೆ ಒದಗಿಸುವತ್ತ ಕೆಲಸ ಮಾಡುತ್ತಿದ್ದೇವೆ. ಜನರ ಸಂಚಾರಕ್ಕೆ ಸಮಸ್ಯೆ ಆಗಿದ್ದರಿಂದ ಸಿಂಗಲ್ ಲೈನ್ ಆಪರೇಷನ್ ಆರಂಭಿಸಿದ್ದೇವೆ ಎಂದು ಮೆಟ್ರೋ ಚೀಫ್ ಎಂಜಿನಿಯರ್ ಯಶವಂತ ಚೌಹ್ಹಾಣ್ ತಿಳಿಸಿದ್ದಾರೆ.

ಇನ್ನು ಹಸಿರು ಮಾರ್ಗದಲ್ಲಿನ ರಾಜಾಜಿನಗರ, ಮಹಾಕವಿ ಕುವೆಂಪು ಮತ್ತು ಶ್ರೀರಾಮ ಪುರ, ಮಹಾಲಕ್ಷ್ಮಿ ಲೇಔಟ್, ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ರದ್ದು ಪಡಿಸಲಾಗಿದೆ. ಈ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇಂದು ತೊಂದರೆಗೆ ಸಿಲುಕಬೇಕಾಯಿತು. ಅನಿವಾರ್ಯವಾಗಿ ಪರ್ಯಾಯ ಸಂಚಾರ ವ್ಯವಸ್ಥೆಗಳ ಮೂಲಕ ತಮ್ಮ ಕೆಲಸದ ಸ್ಥಳಗಳಿಗೆ ಜನರು ತೆರಳಿದರು.

ಏನಿದು ರೀರೈಲು: ತಾಂತ್ರಿಕ ದೋಷದಿಂದ ಸಮಸ್ಯೆ ಎದುರಿಸುತ್ತಿರುವ ರೈಲ್ವೆ ಎಂಜಿನ್​ ಅನ್ನು ಬದಲಾವಣೆ ಮಾಡಲು ನಡೆಸುವ ಕಾರ್ಯಾಚರಣೆಯನ್ನು ರೀ ರೈಲ್​ ಎನ್ನಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಲಾರಿ - ಕಾರಿನ ಮಧ್ಯೆ ಭೀಕರ ಅಪಘಾತ: ತಾಯಿ - ಮಗು ಸಾವು, ತಂದೆ - ಮತ್ತೋರ್ವ ಮಗುವಿಗೆ ಗಂಭೀರ ಗಾಯ

Last Updated : Oct 3, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.