ETV Bharat / state

ಪಾರ್ಟಿ‌ ನೆಪದಲ್ಲಿ ಸ್ನೇಹಿತರಿಂದ್ಲೇ ಟೆಕ್ಕಿ ಕಿಡ್ನ್ಯಾಪ್: ಮೂವರು ಆರೋಪಿಗಳು ಅರೆಸ್ಟ್​​

ಟೆಕ್ಕಿಯನ್ನು ಆತನೇ ಸ್ನೇಹಿತರೇ ಅಪಹರಿಸಿ 2 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

kidnaped tekki
ಅಪಹರಣಗೊಂಡಿದ್ದ ಟೆಕ್ಕಿ
author img

By

Published : Sep 22, 2021, 9:56 PM IST

ಬೆಂಗಳೂರು: ಸ್ನೇಹಿತರೇ ಟೆಕ್ಕಿಯನ್ನು ಅಪಹರಿಸಿ 2 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಕೋರಮಂಗಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಶಾಂತ್, ಸಂತೋಷ್ ಹಾಗೂ ಅರಿವೇಗನ್ ಬಂಧಿತರು. ಇವರು ಸ್ನೇಹಿತ ವಿನೀತ್‌ನನ್ನು​ ಅಪಹರಣ ಮಾಡಿದ್ದರು.

ಅಪಹರಣ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೃತ್ತಿಯಲ್ಲಿ ವಿನೀತ್ ಸಾಫ್ಟ್​​​ವೇರ್ ಇಂಜಿನಿಯರ್. ಕೆಲ ತಿಂಗಳ ಹಿಂದೆ ಸ್ಟಾರ್ಟಪ್ ಕಂಪನಿ ಆರಂಭಿಸಿದ್ದರು. ಇತ್ತೀಚೆಗೆ ಬೇರೊಂದು ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದರ ನಡುವೆ ಆರೋಪಿ ಪ್ರಶಾಂತ್ ಹಾಗೂ ಸಂತೋಷ್​​​​​ನೊಂದಿಗೆ ವಿನೀತ್ ಹಣಕಾಸಿನ ವ್ಯವಹಾರ ಹೊಂದಿದ್ದರು. ಆದರೆ ವಿನೀತ್ ಆರೋಪಿಗಳಿಗೆ ಕೊಡಬೇಕಾದ ಹಣ ನೀಡಲು ನಿರಾಕರಿಸಿದ್ದಂತೆ. ಅಲ್ಲದೆ ಒಡಂಬಡಿಕೆ ಮಾಡಿಕೊಂಡಿದ್ದ ಕಂಪನಿಗೂ ವಿನೀತ್ ಹಣ ನೀಡಬೇಕಾಗಿತ್ತು. ಈ ವಿಷಯ ಅರಿತ ಸ್ನೇಹಿತರು ಈತನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂದು ಯೋಜನೆ ರೂಪಿಸಿ ಸ್ನೇಹಿತನಿಂದ ಫೋರ್ಡ್ ಕಾರು ಪಡೆದು ಪಾರ್ಟಿಗೆ ಆಹ್ವಾನಿಸಿದ್ದರು.

ಆರೋಪಿಗಳ ಅಸಲಿಯತ್ತು ಬಯಲು:

ಅಪಹರಣ ಪ್ಲ್ಯಾನ್ ಅರಿಯದ ವಿನೀತ್, ಸ್ನೇಹಿತರು ಜೊತೆ ಕಾರು ಹತ್ತಿದ್ದಾನೆ. ಕೋರಮಂಗಲ -ಸಿಲ್ಕ್ ಬೋರ್ಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕ್ರಾಸ್ ಆಗುತ್ತಿದ್ದಂತೆ ಅನುಮಾನಗೊಂಡು ವಿನೀತ್,​​ ಎಲ್ಲಿಗೆ ಹೋಗುತ್ತಿರುವುದಾಗಿ ಪ್ರಶ್ನಿಸಿದ್ದಾನೆ. ಈ ವೇಳೆ‌ ಅಸಲಿ ಮುಖ ಪ್ರದರ್ಶಿಸಿದ ಕಿರಾತಕರು,ವಿನೀತ್​​ ಬಾಯಿಗೆ ಬಟ್ಟೆ ತುರುಕಿ ಕಿರುಚಾಡದಂತೆ ತಾಕೀತು ಮಾಡಿದ್ದಾರೆ.

ಠಾಣೆಯಲ್ಲಿದ್ದಾಗ ಬಂದ ವಾಟ್ಸಾಪ್​ ಮೆಸೇಜ್​:

ವಿನೀತ್​​ನನ್ನು ಆರೋಪಿಗಳು ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಇತ್ತ ಎರಡು ದಿನ ಕಳೆದ್ರೂ ಮಗ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ 2 ಕೋಟಿ ರೂ ಕೊಟ್ಟರೆ ಬಿಡುವುದಾಗಿ ಆರೋಪಿಗಳು ವಾಟ್ಸಾಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಆರೋಪಿಗಳ ಸುಳಿವು ಕೊಟ್ಟ ಫಾಸ್ಟ್​​​ಟ್ಯಾಕ್​​​ ಮೆಸೇಜ್ :

ದೂರು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಇಳಿದಿದ್ದರು. ಕಾರಿನ‌ ನೋಂದಣಿ ಸಂಖ್ಯೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಜಾಡು ಹಿಡಿದ ಪೊಲೀಸರಿಗೆ ಆರೋಪಿ‌ ಪ್ರಶಾಂತ್ ಸ್ನೇಹಿತರೊಬ್ಬರಿಂದ ಪೋರ್ಡ್ ಕಾರು ಪಡೆದಿರುವುದು ಗೊತ್ತಾಗಿತ್ತು. ಕಾರಿನ ಮಾಲೀಕನನ್ನು ಕರೆಯಿಸಿ ವಿಚಾರಿಸಿದಾಗ ಆರೋಪಿಗಳು ಕಾರು ಪಡೆದಿರುವುದು ದೃಢವಾಗಿತ್ತು. ಬಳಿಕ ತಮಗೆ ಬಂದ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗಿರುವ ಮೆಸೇಜ್​​ ಬಂದಿರುವುದನ್ನು ಮಾಲೀಕ ಪೊಲೀಸರಿಗೆ ತೋರಿಸಿದ್ದ. ಎಲೆಕ್ಟ್ರಾನಿಕ್ ಸಿಟಿ ಟೋಲ್​​ನಲ್ಲಿ ಕಾರು ಹೋಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು. ಇದೇ ಮಾಹಿತಿ ಆಧರಿಸಿ ಆರೋಪಿಗಳು ತಮಿಳುನಾಡಿನಲ್ಲಿ ಇರುವ ಬಗ್ಗೆ ಪೊಲೀಸರು ಅರಿತುಕೊಂಡಿದ್ದರು.

ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣ ಬೆಳೆಸಿತ್ತು. ಆರೋಪಿಗಳ ಮೊಬೈಲ್ ಲೊಕೇಷನ್ ಆಧರಿಸಿ ಉಳಿದುಕೊಂಡಿದ್ದ ಹೋಟೆಲ್​​ನಲ್ಲಿ ಆರೋಪಿಗಳನ್ನು ಬಂಧಿಸಿ ವಿನೀತ್​​​​​ರನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಹೆರುವ ತಾಯಿನೂ ಹೆಣ್ಣೆಪಾ, ಅಷ್ಟು ಅಸಹ್ಯ ವಿಡಿಯೋ ಮಾಡ್ತೀರಾ.. ಪುರುಷನ ರಾಕ್ಷಸಿ ಕೃತ್ಯಕ್ಕೂ ಮಹಿಳೆಯನ್ನೇ ದೂಷಿಸ್ತೀರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.