ಬೆಂಗಳೂರು: ಕೊರೊನಾ ಸೋಂಕಿನ ಹಾವಳಿ ಕಡಿಮೆ ಆಯ್ತು, ಯಥಾಸ್ಥಿತಿಗೆ ಜೀವನ ಮರಳುತ್ತಿರುವ ಸಮಯದಲ್ಲಿ ಕೊರೊನಾ ವೈರಸ್ ರೂಪಾಂತರ ಶಾಕ್ ಕೊಟ್ಟಿದೆ.
ಕೊರೊನಾ ವೈರಸ್ನ ಹೊಸ ರೂಪಾಂತರ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಬೆಂಗಳೂರಲ್ಲಿ ಕೋವಿಡ್ ಟೆಸ್ಟ್ಗೆ ಒಳಗಾಗದವರ ಪತ್ತೆಗೆ ತಂಡ ರಚನೆ ಮಾಡಲಾಗಿದೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಯುಕೆ ಯಿಂದ ಬಂದ 138 ಪ್ರಯಾಣಿಕರು ಕೂಡ ಯಾವುದೇ ಗುಣಲಕ್ಷಣಗಳನ್ನು ಹೊಂದಿಲ್ಲ.
ಈಗಾಗಲೇ ಅವರ ಕಾಂಟ್ಯಾಕ್ಟ್ ಡಿಟೇಲ್ಸ್ ಅನ್ನು ಆರೋಗ್ಯ ಇಲಾಖೆ ಪಡೆದಿದೆ. ಈ 138 ಜನರ ಜೊತೆ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನೂ ಕೂಡ ಪತ್ತೆ ಮಾಡಲಿರುವ ಆರೋಗ್ಯ ಕಾರ್ಯಕರ್ತರು, ವಿದೇಶದಿಂದ ಬರುವ ಎಲ್ಲರಿಗೂ RT-PCR ಟೆಸ್ಟ್ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ಕೋವಿಡ್ ಸೋಂಕು ಕಡಿಮೆ ಇರುವೆಡೆ ಮೊದಲು ಶಾಲೆ ಆರಂಭಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು ಏರ್ಪೋರ್ಟ್ನಲ್ಲಿ ಈಗಾಗಲೇ ಲ್ಯಾಬ್ ಸಿದ್ಧವಿದೆ. ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆಗೆ ತಂಡ ನಿಯೋಜನೆ ಮಾಡಲಾಗಿದ್ದು, ನಿನ್ನೆ ಸಂಜೆಯಿಂದಲೇ ವಿದೇಶಿ ಪ್ರಯಾಣಿಕರ ಆರೋಗ್ಯ ತಪಾಸಣೆ ಆರಂಭವಾಗಿದೆ.