ETV Bharat / state

ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಅಂಗೀಕಾರ

author img

By

Published : Mar 16, 2020, 9:33 PM IST

ವಿಧಾನಸಭೆಯಲ್ಲಿ ಸರ್ವಾನುಮತದಿಂದ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು.

Teacher Transfer Control Compliance
ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಕಳೆದ‌ ವಾರ ಮಂಡಿಸಲಾಗಿದ್ದ ವಿಧೇಯಕವನ್ನು ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಯಿತು.

ಈ ವೇಳೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇದೊಂದು ಶಿಕ್ಷಕ ಸ್ನೇಹಿ, ಶಿಕ್ಷಣಕ್ಕೆ ಪೂರಕ ಹಾಗೂ ವಿದ್ಯಾರ್ಥಿಗಳ ಹಿತಚಿಂತಕ ವಿಧೇಯಕವಾಗಿದೆ. ವರ್ಗಾವಣೆ ಸರಳೀಕರಣಗೊಳಿಸಲು ಈ ವಿಧೇಯಕ ತರಲಾಗಿದೆ‌‌. ಈ ವಿಧೇಯಕ ಸಂಬಂಧ 10-15 ಬಾರಿ ವಿವಿಧ ಸಂಘಟನೆ, ಶಿಕ್ಷಕರು, ಪರಿಷತ್​ ಸದಸ್ಯರ ಜತೆ ಸಭೆ ನಡೆಸಿದ್ದೇವೆ‌. ವಿಧೇಯಕದ ಪ್ರಕಾರ ವರ್ಗಾವಣೆಗೆ ಕನಿಷ್ಠ ಸೇವಾವಧಿ ಮೂರು ವರ್ಷ ಆಗಿರಬೇಕು.

ನಮ್ಮ ಇಲಾಖೆಯಲ್ಲಿ 70% ಮಹಿಳೆಯರು ಇದ್ದಾರೆ. ಅವರನ್ನು ವರ್ಗಾವಣೆ ಮಾಡಿದರೆ ಕಷ್ಟವಾಗುತ್ತದೆ. ಹೀಗಾಗಿ 50 ವರ್ಷ ಆದ ಮಹಿಳಾ ಶಿಕ್ಷಕಿಯರು ಮತ್ತು 55 ವರ್ಷ ಆದ ಪುರುಷ ಶಿಕ್ಷಕರನ್ನು ವಲಯವಾರು ವರ್ಗಾವಣೆಯಿಂದ ವಿನಾಯಿತಿ ನೀಡಲಾಗುವುದು ಎಂದರು.

ವಿಶೇಷಚೇತನ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ಅಥವಾ ಆದ್ಯತೆ ನೀಡಲಾಗುತ್ತದೆ. ಹೊಸದಾಗಿ ನೇಮಕವಾಗುವ ಶಿಕ್ಷಕರು ಕಡ್ಡಾಯವಾಗಿ ಹಳ್ಳಿಗೆ ಹೋಗಬೇಕು. ಏಪ್ರಿಲ್​ನಲ್ಲಿ ಈ ಹೊಸ ವರ್ಗಾವಣೆ ನೀತಿ ತರಲು ಉದ್ದೇಶಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.