ಬೆಂಗಳೂರು: ಟಿಡಿಆರ್ ಅವ್ಯವಹಾರ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಹದೇವಪುರ ವಲಯದ ಸಹಾಯಕ ಅಭಿಯಂತರ ಕೃಷ್ಣಲಾಲ್ ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸಿಬಿ ಪ್ರಕರಣ ಸಂಬಂಧ ಮಹತ್ವದ 47 ಕಡತಗಳನ್ನು ವಶಕ್ಕೆ ಪಡೆದಿದೆ. ನೈಜ ಮಾಲೀಕತ್ವ ಮರೆಮಾಚಿ ಕಾನೂನು ಬಾಹಿರವಾಗಿ ಅತಿಹೆಚ್ಚು ಪ್ರಮಾಣದ ಟಿಡಿಆರ್ ವಿತರಣೆ ಮಾಡಿ ಸರಕಾರಕ್ಕೆ ಹಾಗೂ ಹಲವು ಮಂದಿಗೆ ದೋಖಾ ಮಾಡಿದ್ದರು. ಈ ಮಾಹಿತಿ ಎಸಿಬಿಗೆ ಲಭ್ಯವಾಗಿದ್ದು ಈ ಹಿನ್ನೆಲೆ ಕೇಸ್ ದಾಖಲಿಸಿಕೊಂಡ ಎಸಿಬಿ ಬಿಬಿಎಂಪಿ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿತ್ತು.
![tdr case](https://etvbharatimages.akamaized.net/etvbharat/prod-images/5043856_arrest.jpg)
ದಾಳಿ ನಡೆಸುತ್ತಿರುವ ವಿಚಾರ ತಿಳಿದ ಕೃಷ್ಣಲಾಲ್ ನ್ಯಾಯಾಲಯದ ಮೆಟ್ಟಿಲೇರಿ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಹಾಕಿದ್ದ. ನಂತ್ರ ಅರ್ಜಿ ರದ್ದಾದ ಕಾರಣ ಹೈಕೋರ್ಟ್ ನಲ್ಲಿ ಕೂಡ ಅರ್ಜಿ ಹಾಕಿದ್ದ. ಸದ್ಯ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ರದ್ದಾಗಿದ್ದು ಪ್ರಕರಣ ಸಂಬಂಧಿಸಿದಂತೆ 6 ತಿಂಗಳಿನಿಂದ ತಲೆಮರೆಸಿಕೊಂಡಿದ್ದು ಸದ್ಯ ಕೃಷ್ಣಲಾಲ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.