ಬೆಂಗಳೂರು: ನಮ್ಮ ಮೆಟ್ರೋ ಮುಂದಿನ ದಿನಗಳಲ್ಲಿ ಬೆಂಗಳೂರಿನ ಲೈಫ್ ಲೈನ್ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಸುರಂಗ ಕೊರೆಯುವ ಯಂತ್ರ ಊರ್ಜಾವು ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಹೊರಬರುವುದನ್ನ ವೀಕ್ಷಿಸಿದ ಬಳಿಕ ಅವರು ಮಾತಾನಾಡಿದರು. ಈ ಮೆಟ್ರೋ ಮುಂದಿನ ದಿನಗಳಲ್ಲಿ ಬೆಂಗಳೂರಿನ ಲೈಫ್ ಲೈನ್ ಆಗಲಿದೆ. ಇದುವರೆಗೆ ಕಂಟೋನ್ಮೆಂಟ್ನಿಂದ 855 ಮೀಟರ್ ಸುರಂಗ ಕೊರೆಯಲಾಗಿದೆ. ಮೆಟ್ರೋ 2ನೇ ಹಂತದ ಕಾಮಗಾರಿಯನ್ನು 2024ಕ್ಕೆ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ, ಹೆಚ್ಚು ಜನರನ್ನು ಕೆಲಸಕ್ಕೆ ಬಳಸಿಕೊಂಡು ಬೇಗ ಕಾಮಗಾರಿ ಕೆಲಸ ಮುಗಿಸಿ. ಮೆಟ್ರೋ ಕಾಮಗಾರಿಗೆ ಜನ ಸಹಕಾರ ನೀಡುತ್ತಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದವರೆಗೆ ಮೆಟ್ರೋ ರೈಲು ನಿರ್ಮಿಸಲಾಗುವುದು ಎಂದರು.
ಹಂತ-2ರ ಕಾಳೇನಾ ಅಗ್ರಹಾರ ಮತ್ತು ನಾಗವಾರ ನಡುವಿನ ಮಾರ್ಗವು 21.26 ಕಿ.ಮೀ ಉದ್ದವಿದೆ. ಈ ಮಾರ್ಗ 7.5 ಕಿ.ಮೀ ಎತ್ತರಿಸಿದ ಮಾರ್ಗವಾಗಿದ್ದು ಹಾಗೂ 6 ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಉಳಿದ 13.76 ಕಿ.ಮೀ ಸುರಂಗ ಮಾರ್ಗವಾಗಿದ್ದು, 12 ನಿಲ್ದಾಣಗಳನ್ನು ಒಳಗೊಂಡಿರಲಿದೆ.
2020ರ ಜುಲೈನಲ್ಲಿ ಕಂಟೋನ್ಮೆಂಟ್ ನಿಲ್ದಾಣದಿಂದ ಶಿವಾಜಿನಗರ ಮಟ್ರೋ ನಿಲ್ದಾಣದವರೆಗೆ ಮೊದಲನೇ ಸುರಂಗ ಕೊರೆಯುವ ಯಂತ್ರಕ್ಕೆ (ಊರ್ಜಾ) ಚಾಲನೆ ನೀಡಿದ್ದರು. ಈ ಯಂತ್ರವು 855 ಮೀಟರ್ ಸುರಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶಿವಾಜಿನಗರ ಮಟ್ರೋ ನಿಲ್ದಾಣದಲ್ಲಿ ಇಂದು ಹೊರಬಂದಿದೆ.
ಸುರಂಗ ಮಾರ್ಗದ ಒಟ್ಟು ಉದ್ದ 21.246 ಕಿ.ಮೀ (ಜೋಡಿ ಸುರಂಗ ಮಾರ್ಗ), 9 ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ನಿಯೋಜಿಸಲಾಗಿದೆ. ಇಲ್ಲಿಯವರೆಗೆ 3.842 ಕಿ.ಮೀ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.
-
ಬೆಂಗಳೂರಿನ ನಮ್ಮ ಮೆಟ್ರೊ ಎರಡನೆಯ ಹಂತದ ಕಾಮಗಾರಿಯ ಕಂಟೋನ್ಮೆಂಟ್ ನಿಂದ ಶಿವಾಜಿ ನಗರ ಮೆಟ್ರೋ ನಿಲ್ದಾಣ ವರೆಗೆ ಊರ್ಜ ಯಂತ್ರವು ಸುರಂಗ ಮಾರ್ಗ ಕೊರೆದು ಶಿವಾಜಿ ನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬರುವುದನ್ನು ವೀಕ್ಷಿಸಲಾಯಿತು.
— Basavaraj S Bommai (@BSBommai) September 22, 2021 " class="align-text-top noRightClick twitterSection" data="
ಈ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.#NammaMetro pic.twitter.com/Mwqtrlxvbz
">ಬೆಂಗಳೂರಿನ ನಮ್ಮ ಮೆಟ್ರೊ ಎರಡನೆಯ ಹಂತದ ಕಾಮಗಾರಿಯ ಕಂಟೋನ್ಮೆಂಟ್ ನಿಂದ ಶಿವಾಜಿ ನಗರ ಮೆಟ್ರೋ ನಿಲ್ದಾಣ ವರೆಗೆ ಊರ್ಜ ಯಂತ್ರವು ಸುರಂಗ ಮಾರ್ಗ ಕೊರೆದು ಶಿವಾಜಿ ನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬರುವುದನ್ನು ವೀಕ್ಷಿಸಲಾಯಿತು.
— Basavaraj S Bommai (@BSBommai) September 22, 2021
ಈ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.#NammaMetro pic.twitter.com/Mwqtrlxvbzಬೆಂಗಳೂರಿನ ನಮ್ಮ ಮೆಟ್ರೊ ಎರಡನೆಯ ಹಂತದ ಕಾಮಗಾರಿಯ ಕಂಟೋನ್ಮೆಂಟ್ ನಿಂದ ಶಿವಾಜಿ ನಗರ ಮೆಟ್ರೋ ನಿಲ್ದಾಣ ವರೆಗೆ ಊರ್ಜ ಯಂತ್ರವು ಸುರಂಗ ಮಾರ್ಗ ಕೊರೆದು ಶಿವಾಜಿ ನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬರುವುದನ್ನು ವೀಕ್ಷಿಸಲಾಯಿತು.
— Basavaraj S Bommai (@BSBommai) September 22, 2021
ಈ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.#NammaMetro pic.twitter.com/Mwqtrlxvbz
ಸುರಂಗ ಕೊರೆಯುವ ಯಂತ್ರಗಳು ಅತ್ಯಾಧುನಿಕ ಪಿಎಲ್‌ಸಿ ಆಧಾರಿತ ತಂತ್ರಜ್ಞಾನವಾಗಿದ್ದು, ಇಂತಹ ಯಂತ್ರಗಳ ಕಾರ್ಯಾಚರಣೆಗೆ ಹೆಚ್ಚು ನುರಿತ ಮಾನವಶಕ್ತಿ ಮತ್ತು ಕ್ಷೇತ್ರದ ತಜ್ಞರ ಸಲಹೆಗಳು ಅಗತ್ಯವಿತ್ತು. ಸದ್ಯ ಊರ್ಜಾ ಯಂತ್ರವನ್ನು ಶಿವಾಜಿನಗರ ನಿಲ್ದಾಣದಲ್ಲಿ ಇದನ್ನು ವಿಂಗಡಿಸಿ ಕಂಟೋನ್ಮೆಂಟ್ ನಿಲ್ದಾಣದಲ್ಲಿ ಮರುಜೋಡಣೆ ಮಾಡಿ ನಂತರ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುತ್ತದೆ.
ಸಿವಿಲ್ ಕಾಮಗಾರಿಯನ್ನು ಕೈಗೊಳ್ಳಲು ಸುರಂಗ ಮಾರ್ಗ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ.
ಪ್ಯಾಕೇಜ್:1
3.655 ಕೀ.ಮೀ ದಕ್ಷಿಣ ರಾಂಪ್ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆವರೆಗೆ ಸುರಂಗ ಮಾರ್ಗ ಹಾಗೂ 3 ನಿಲ್ದಾಣಗಳನ್ನು (ಡೈರಿ ಸರ್ಕಲ್, ಮೈಕೋ ಇಂಡಸ್ಟ್ರೀಸ್ ಮತ್ತು ಲ್ಯಾಂಗೋರ್ಡ್ ಟೌನ್) ಒಳಗೊಂಡಿರುತ್ತದೆ.
ಪ್ಯಾಕೇಜ್: 2
2.62 ಕಿ.ಮೀ ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಹಾಗೂ 3 ನಿಲ್ದಾಣಗಳನ್ನು (ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ ರಸ್ತೆ ಮತ್ತು ಶಿವಾಜಿನಗರ) ಒಳಗೊಂಡಿರುತ್ತದೆ.
ಪ್ಯಾಕೇಜ್: 3
2.884 ಕಿ.ಮೀ ಶಿವಾಜಿನಗರದಿಂದ ಶಾದಿ ಮಹಲ್ ವರೆಗೆ ಸುರಂಗ ಮಾರ್ಗ ಹಾಗೂ 2 ನಿಲ್ದಾಣಗಳನ್ನು (ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್) ಒಳಗೊಂಡಿರುತ್ತದೆ.
ಪ್ಯಾಕೇಜ್ :4
4.591 ಕಿ.ಮೀ ದಕ್ಷಿಣ ಟ್ಯಾನರಿ ರಸ್ತೆ ನಿಲ್ದಾಣದಿಂದ ಉತ್ತರ ರಾಂಪ್ ವರೆಗೆ ಸುರಂಗ ಮಾರ್ಗ ಹಾಗೂ 4 ನಿಲ್ದಾಣಗಳನ್ನು (ಟ್ಯಾನರಿ ರಸ್ತೆ, ವೆಂಕಟೇಶಪುರ, ಕೆ.ಜಿ ಹಳ್ಳಿ ಮತ್ತು ನಾಗವಾರ) ಒಳಗೊಂಡಿರುತ್ತದೆ.