ETV Bharat / state

ಬಂಪರ್ ಆದಾಯ ಸಂಗ್ರಹ: ಬಜೆಟ್ ಗುರಿ ಮೀರಿ ತೆರಿಗೆ ಸಂಗ್ರಹಿಸುವತ್ತ ಬೊಮ್ಮಾಯಿ ಸರ್ಕಾರ!

author img

By

Published : Dec 3, 2022, 1:13 PM IST

ಕಳೆದ ಮೂರು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿಂದ ರಾಜ್ಯದ ಆದಾಯ ಸೊರಗಿ ಹೋಗಿದ್ದವು. ತೆರಿಗೆ ಮೂಲಗಳಿಂದ ನಿರೀಕ್ಷಿತ ಆದಾಯ ಸಂಗ್ರಹ ಸಾಧ್ಯವಾಗಿರಲಿಲ್ಲ. ಇದರಿಂದ ರಾಜ್ಯದ ಬೊಕ್ಕಸ ಆದಾಯ ಕೊರತೆ ಅನುಭವಿಸಿತ್ತು. ಆದರೆ ಇದೀಗ ಕೋವಿಡ್ ಆತಂಕ ಬಹುತೇಕ ದೂರವಾಗಿದ್ದು, ರಾಜ್ಯ ಸರ್ಕಾರದ ಆದಾಯ ಸಂಗ್ರಹ ಮತ್ತೆ ಸಂಪೂರ್ಣವಾಗಿ ಚೇತರಿಕೆ ಕಂಡಿದೆ.

Basavaraj Bommai
ಬೊಮ್ಮಾಯಿ

ಬೆಂಗಳೂರು: ರಾಜ್ಯ ಆದಾಯ ಸಂಗ್ರಹದಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಕಳೆದ ಬಾರಿಗಿಂತ ಆದಾಯ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡಿದ್ದು, 2022-23 ಬಜೆಟ್ ಅಂದಾಜು ಮೀರಿ ಆದಾಯ ಸಂಗ್ರಹದ ನಿರೀಕ್ಷೆ ಮೂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ಎಂಟು ತಿಂಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಆರ್ಥಿಕ ವರ್ಷದಲ್ಲಿ ಉಳಿದಿರುವ ಮುಂದಿನ ನಾಲ್ಕು ತಿಂಗಳಲ್ಲಿ ಇನ್ನಷ್ಟು ಹೆಚ್ಚಿನ ಆದಾಯ ಸಂಗ್ರಹವಾಗುವ ನಿರೀಕ್ಷೆ ಆರ್ಥಿಕ ಇಲಾಖೆ ಅಧಿಕಾರಿಗಳದ್ದು. 2022-23ರಲ್ಲಿ ಬೊಮ್ಮಾಯಿ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ. ಚುನಾವಣಾ ವರ್ಷದಲ್ಲಿರುವ ಬೊಮ್ಮಾಯಿ‌ ಸರ್ಕಾರಕ್ಕೆ ಬರಪೂರ ಆದಾಯ ಸಂಗ್ರಹ ದೊಡ್ಡ ಬೂಸ್ಟ್ ನೀಡಿದೆ.

8 ತಿಂಗಳಲ್ಲಿ 1 ಲಕ್ಷ ಕೋಟಿ ರೂ. ಸನಿಹಕ್ಕೆ ತೆರಿಗೆ ಸಂಗ್ರಹ: ರಾಜ್ಯ ಸರ್ಕಾರ ಕಳೆದ ಆರ್ಥಿಕ ವರ್ಷ 2022-23ರ ಎಂಟು ತಿಂಗಳಲ್ಲಿ ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಎಲ್ಲಾ ಆದಾಯ ಮೂಲಗಳಿಂದ ಗಣನೀಯ ತೆರಿಗೆ ಕ್ರೋಢೀಕರಣವಾಗಿದೆ. ನಿರೀಕ್ಷೆಗೂ ಮೀರಿ ಬೊಕ್ಕಸಕ್ಕೆ ಆದಾಯ ಹರಿದು ಬರುತ್ತಿರುವುದು ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ.

ರಾಜ್ಯ ಸರ್ಕಾರ 2022-23ರ ಬಜೆಟ್ ಅಂದಾಜಿನಂತೆ ಸ್ವಂತ ತೆರಿಗೆ ರಾಜಸ್ವ ಮೂಲಕ 1,26,882.76 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಏಪ್ರಿಲ್ ನಿಂದ ನವೆಂಬರ್ ಎಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಪ್ರಮುಖ ತೆರಿಗೆ ಮೂಲಗಳಾದ ವಾಣಿಜ್ಯ ತೆರಿಗೆ, ನೋಂದಣಿ ಹಾಗು ಮುಂದ್ರಾಂಕ ಶುಲ್ಕ, ಅಬಕಾರಿ ಸುಂಕ ಹಾಗೂ ಮೋಟಾರು ವಾಹನ ತೆರಿಗೆ ಮೂಲಕ ಬರೋಬ್ಬರಿ 98,405.24 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಇತರೆ ತೆರಿಗೆಗಳು ಸೇರಿ ರಾಜ್ಯ ಎಂಟು ತಿಂಗಳಲ್ಲಿ ಸ್ವಂತ ತೆರಿಗೆ ರಾಜಸ್ವ ಮೂಲಕ 1 ಲಕ್ಷ ಕೋಟಿ ರೂ. ಗಡಿ ಸಮೀಪ ಆದಾಯ ಸಂಗ್ರಹ ಮಾಡಿರುವುದು ಆರ್ಥಿಕ ಇಲಾಖೆಗೆ ಬಲ ನೀಡಿದೆ. ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನೂ ನಾಲ್ಕು ತಿಂಗಳು ಬಾಕಿ ಇದ್ದು, ಇದೇ ಪ್ರಗತಿಯಲ್ಲಿ ಸಾಗಿದರೆ ಬಜೆಟ್ ಅಂದಾಜು ಗುರಿಯನ್ನೂ ಮೀರಿ ತೆರಿಗೆ ಸಂಗ್ರಹವಾಗುವುದು ಬಹುತೇಕ ಖಚಿತ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾವ ತೆರಿಗೆ ಎಷ್ಟು ಸಂಗ್ರಹ?: ವಾಣಿಜ್ಯ ತೆರಿಗೆ ಮೂಲಕ ರಾಜ್ಯ ಸರ್ಕಾರ ನವೆಂಬರ್​ವರೆಗೆ ಸುಮಾರು 62,366.27 ಕೋಟಿ ರೂ. ಸಂಗ್ರಹಿಸಿದೆ. ಈ ಪೈಕಿ ಜಿಎಸ್​ಟಿ ಮೂಲಕ ನವೆಂಬರ್ ವರೆಗೆ 48,951.17 ಕೋಟಿ ರೂ. ತೈಲ ಮೇಲಿನ‌ ಮಾರಾಟ ತೆರಿಗೆ ಮೂಲಕ 12,524.02 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ಕಳೆದ ಬಾರಿ ಈ ಅವಧಿಯಲ್ಲಿ ಸುಮಾರು 68,618 ಕೋಟಿ ವಾಣಿಜ್ಯ ತೆರಿಗೆ ಅಂಗ್ರಹವಾಗಿತ್ತು. 2022-23 ಸಾಲಿನ ಬಿಜೆಟ್ ಗುರಿ 72,011 ಕೋಟಿ ಇದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಗುರಿ ಮೀರಿ ವಾಣಿಜ್ಯ ತೆರಿಗೆ ಸಂಗ್ರಹವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಸುಂಕದ ಮೂಲಕ ರಾಜ್ಯ ಸರ್ಕಾರ ಭರ್ಜರಿ ಆದಾಯ ಸಂಗ್ರಹಿಸಿದೆ. ಅಬಕಾರಿ ಇಲಾಖೆ ನೀಡಿದ ಮಾಹಿತಿಯಂತೆ ನವೆಂಬರ್​ವರೆಗೆ 19,540.21 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 16,836.25 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹಿಸಲಾಗಿತ್ತು. ಆರ್ಥಿಕ ವರ್ಷದಲ್ಲಿ 29,000 ಕೋಟಿ ರೂ. ಬಜೆಟ್ ಗುರಿ ನಿಗದಿ ಪಡಿಸಿದ್ದು, ಮಾರ್ಚ್ ಅಂತ್ಯಕ್ಕೆ 30,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಕಂದಾಯ ಇಲಾಖೆ ನೋಂದಣಿ ಹಾಗೂ ಮುದ್ರಾಂಕ ಶುಲ್ಕದ ಮೂಲಕ ನವೆಂಬರ್ ವರೆಗೆ ಸುಮಾರು 10,856.54 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಸುಮಾರು 8,252.83 ಕೋಟಿ ರೂ. ಸಂಗ್ರಹಿಸಲಾಗಿತ್ತು. 2022-23ರ ಬಜೆಟ್ ಗುರಿ 15,000 ಕೋಟಿ ರೂ. ಇದೆ. ಮುಂದಿನ ಮೂರು ತಿಂಗಳಲ್ಲಿ ಗುರಿ ಮೀರಿ ಆದಾಯ ಸಂಗ್ರಹವಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತ ಕಳೆದ ಮೂರು ವರ್ಷಗಳಿಂದ ಕುಂಠಿತ ಆದಾಯ ಸಂಗ್ರಹವಾಗುತ್ತಿದ್ದ ಮೋಟಾರು ವಾಹನ ತೆರಿಗೆ ಈ ಬಾರಿ ನಿರೀಕ್ಷೆಗೂ ಮೀರಿ ಗುರಿ ಸಾಧಿಸುತ್ತಿದೆ. 2022-23ರ ನವೆಂಬರ್ ವರೆಗೆ ಸುಮಾರು 5,640 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಸುಮಾರು 4,050 ಕೋಟಿ ರೂ. ಮಾತ್ರ ಸಂಗ್ರಹವಾಗಿತ್ತು. ಈ ಹಣಕಾಸು ವರ್ಷದಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ ಅಂದಾಜು 8,006.69 ಕೋಟಿ ರೂ. ಸಂಗ್ರಹದ ಬಜೆಟ್ ಗುರಿ ಇಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಗುರಿ ಮೀರಿ ಆದಾಯ ಸಂಗ್ರಹದ ನಿರೀಕ್ಷೆ ಇದೆ.

ಇದನ್ನೂ ಓದಿ: ಚಿರತೆ ದಾಳಿಗೆ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ಪರಿಹಾರ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.