ಬೆಂಗಳೂರು: ರಾಜ್ಯಕ್ಕೆ ಮಾರಕವಾಗಲಿರುವ ಯೋಜನೆಯೊಂದನ್ನು ಪಕ್ಕದ ರಾಜ್ಯ ಆರಂಭಿಸಿರುವ ಮಾಹಿತಿ ಇದ್ದೂ ಸುಮ್ಮನಿರುವ ಸರ್ಕಾರದ ನಿರ್ಧಾರ ಸಾಕಷ್ಟು ಅನುಮಾನ ತರಿಸುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆರೋಪಿಸಿದ್ದಾರೆ.
-
ಕಾವೇರಿ ನದಿಯ 45 ಟಿಎಂಸಿ ಹೆಚ್ಚುವರಿ ನೀರಿನ ಬಳಕೆಯ ಬೃಹತ್ ಯೋಜನೆಗೆ ತಮಿಳುನಾಡು ಸದ್ದಿಲ್ಲದೇ ಚಾಲನೆ ನೀಡುತ್ತಿದೆ. ಕೇಂದ್ರದ ಆರ್ಥಿಕ ನೆರವಿನೊಂದಿಗೆ ₹6,941 ಕೋಟಿ ವೆಚ್ಚದಲ್ಲಿ ವೆಲ್ಲಾರು–ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿಯೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. 1/5
— S R Patil (@srpatilbagalkot) February 21, 2021 " class="align-text-top noRightClick twitterSection" data="
">ಕಾವೇರಿ ನದಿಯ 45 ಟಿಎಂಸಿ ಹೆಚ್ಚುವರಿ ನೀರಿನ ಬಳಕೆಯ ಬೃಹತ್ ಯೋಜನೆಗೆ ತಮಿಳುನಾಡು ಸದ್ದಿಲ್ಲದೇ ಚಾಲನೆ ನೀಡುತ್ತಿದೆ. ಕೇಂದ್ರದ ಆರ್ಥಿಕ ನೆರವಿನೊಂದಿಗೆ ₹6,941 ಕೋಟಿ ವೆಚ್ಚದಲ್ಲಿ ವೆಲ್ಲಾರು–ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿಯೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. 1/5
— S R Patil (@srpatilbagalkot) February 21, 2021ಕಾವೇರಿ ನದಿಯ 45 ಟಿಎಂಸಿ ಹೆಚ್ಚುವರಿ ನೀರಿನ ಬಳಕೆಯ ಬೃಹತ್ ಯೋಜನೆಗೆ ತಮಿಳುನಾಡು ಸದ್ದಿಲ್ಲದೇ ಚಾಲನೆ ನೀಡುತ್ತಿದೆ. ಕೇಂದ್ರದ ಆರ್ಥಿಕ ನೆರವಿನೊಂದಿಗೆ ₹6,941 ಕೋಟಿ ವೆಚ್ಚದಲ್ಲಿ ವೆಲ್ಲಾರು–ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿಯೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. 1/5
— S R Patil (@srpatilbagalkot) February 21, 2021
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪಕ್ಕದ ತಮಿಳುನಾಡು ರಾಜ್ಯ ಹೊಸ ನೀರಾವರಿ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಇದರಿಂದ ಕರ್ನಾಟಕದ ಪ್ರಾಸ್ತಾವಿಕ ಯೋಜನೆಗೆ ಹೊಡೆತ ಬೀಳಲಿದೆ. ತಮಿಳುನಾಡಿನ ಈ ನಿರ್ಧಾರ ತಿಳಿದು ಸಹ ರಾಜ್ಯ ಸರ್ಕಾರ ಸುಮ್ಮನಿದೆ. ಇಂತಹ ಸರ್ಕಾರದ ಬೇಜವಾಬ್ದಾರಿ ನಿಲುವನ್ನು ತಾವು ಖಂಡಿಸುವುದಾಗಿ ತಿಳಿಸಿದ್ದಾರೆ.
ಕಾವೇರಿ ನದಿಯ 45 ಟಿಎಂಸಿ ಹೆಚ್ಚುವರಿ ನೀರಿನ ಬಳಕೆಯ ಬೃಹತ್ ಯೋಜನೆಗೆ ತಮಿಳುನಾಡು ಸದ್ದಿಲ್ಲದೇ ಚಾಲನೆ ನೀಡುತ್ತಿದೆ. ಕೇಂದ್ರದ ಆರ್ಥಿಕ ನೆರವಿನೊಂದಿಗೆ 6,941 ಕೋಟಿ ರೂ. ವೆಚ್ಚದಲ್ಲಿ ವೆಲ್ಲಾರು –ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿಯೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಕರ್ನಾಟಕದ ಪ್ರಸ್ತಾವಿತ ಯೋಜನೆಗಳಿಗೆ ನೆರೆಯ ರಾಜ್ಯ ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆಯಿಂದ ತಡೆ ಬೀಳುವ ಸಾಧ್ಯತೆ ಇದ್ದರೂ, ರಾಜ್ಯ ಸರ್ಕಾರ ಇದುವರೆಗೂ ಚಕಾರ ಎತ್ತಿಲ್ಲ. ರಾಜ್ಯಕ್ಕೆ ಮಾರಕವಾಗಲಿರುವ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ನದಿ ಜೋಡಣೆಯ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಸಣ್ಣ ಪ್ರತಿರೋಧವನ್ನೂ ತೋರಿಲ್ಲ. ಕಾನೂನು ಹೋರಾಟ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಈ ಯೋಜನೆೆಗೆ ಆಕ್ಷೇಪಣೆ ಸಲ್ಲಿಸದಿರುವುದು ದುರಂತವೇ ಸರಿ. ಕರ್ನಾಟಕದ ಯೋಜನೆಗಳಿಗೆ ಅನುಮತಿ ನೀಡಲು ಮೀನಾಮೇಷ ಎಣಿಸೋ ಕೇಂದ್ರದ ಬಿಜೆಪಿ ಸರ್ಕಾರ, ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ಯೋಜನೆಗೆ ಸದ್ದಿಲ್ಲದೇ ಅನುಮತಿ ನೀಡಿ ಆರ್ಥಿಕ ನೆರವನ್ನೂ ನೀಡುತ್ತಿದೆ ಎಂದಿದ್ದಾರೆ.
ಕಾವೇರಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಿಗೆ ಕರ್ನಾಟಕದ ಸಹಮತ ಅತ್ಯಗತ್ಯ. ನಮ್ಮ ರಾಜ್ಯದ ಅಭಿಪ್ರಾಯವನ್ನೇ ಕೇಳದೆ ಏಕಾಏಕಿ ನದಿ ಜೋಡಣೆ ಯೋಜನೆಗೆ ಮುಂದಾಗಿರೋ ತಮಿಳುನಾಡಿನ ನಿರ್ಧಾರ ಉದ್ಧಟತನದ್ದು. ರಾಜ್ಯದ ಪರ ಅಭಿಮಾನ ಇರುವ ಯಾರಾದರೂ ಬಿಜೆಪಿಯಲ್ಲಿದ್ದರೆ ಇದರ ವಿರುದ್ಧ ಧ್ವನಿ ಎತ್ತಲಿ ಎಂದು ಎಸ್ಆರ್ಪಿ ಸಲಹೆ ನೀಡಿದ್ದಾರೆ.
ಓದಿ: ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ: ನೀರು ಹಂಚಿಕೆ ಬಗ್ಗೆ ಅಂಕಿಅಂಶ ಸಲ್ಲಿಕೆ